ಕಿಯೋನಿಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ, ‘ಕಿಯೋನಿಕ್ಸ್ ನಲ್ಲಿ ಸುಮಾರು 500 ಕೋಟಿ ರೂ ಅವ್ಯವಹಾರ ನಡೆದಿರಬಹುದು. ನಾಲ್ಕು ವರ್ಷಗಳ ವರದಿಯನ್ನು ಆಧರಿಸಿ ಅದರ ಪ್ರಕಾರ ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.
ಕಿಯೋನಿಕ್ಸ್ ನ ಬಾಕಿ ಬಿಲ್ ಪಾವತಿಸದಿದ್ದರೆ, ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡನೆ ನೇರ ಹೊಣೆ ಎಂದು ದಯಾಮರಣ ಕೋರಿ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಕೌಂಟೆಂಟ್ ಜನರಲ್ ಯಾವುದೇ ಮಾನದಂಡ ಪಾಲಿಸದೆ ನೇಮಕಾತಿ ಮಾಡಿರುವ ಆರೋಪ ಇದೆ. ನಕಲಿ ಬಿಲ್ ಮಾರ್ಕೆಟ್ ದರಕ್ಕಿಂತ ಹೆಚ್ಚಿನ ದರಕ್ಕೆ ಪೂರೈಕೆ ಮಾಡಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾರ್ಕೆಟ್ ದರಕ್ಕಿಂತ ಹೆಚ್ಚಿನ ದರಕ್ಕೆ ಸಾಮಗ್ರಿ ಪೂರೈಕೆ ಮಾಡಿರುವ ಆರೋಪ ಇದೆ. ಅಂದಾಜು 500 ಕೋಟಿ ಅವ್ಯವಹಾರ ಕಂಡುಬರುವ ಹಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದ ನಾಲ್ಕು ವರ್ಷದ ಆಡಿಟರ್ ರಿಪೋರ್ಟ್ ಮಾಡಬೇಕಿದೆ. ಟೈಮ್ ಬೇಕು ವರದಿ ಆಧಾರದ ಮೇಲೆ ಕೊಡಲಾಗುತ್ತದೆ. ವರದಿ ಆಧಾರದ ಮೇಲೆ ವೆಂಡರ್ಸ್ ಗಳ ಬಾಕಿ ಬಿಲ್ ಪಾವತಿ ಮಾಡಲಾಗುತ್ತದೆ. ಆದರೆ ವೆಂಡರ್ಸ್ ಗಳು ಬ್ಲ್ಯಾಕ್ ಮೇಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಭ್ರಷ್ಟಾಚಾರದಲ್ಲಿ ತೊಡಗಿದ್ದೇವೆ ಎಂದು ಎಲ್ಲೂ ಆರೋಪಿಸಿಲ್ಲ ಎಂದು ಅವರು ತಿಳಿಸಿದರು.