ಬೀದರ್ : ರಾಜ್ಯದಲ್ಲಿ(Karnataka) ತೀವ್ರ ಸಂಚಲನ ಮೂಡಿಸಿರುವ ಪಶು ವೈದ್ಯರ ನೇಮಕಾತಿ ಹಗರಣಕ್ಕೆ (Veterinary Officer Recruitment Scam) ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಸಿಐಡಿ (CID) ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಭಾಲ್ಕಿ ಮೂಲದ ಬಿಜೆಪಿ ಕಾರ್ಯಕರ್ತ ಬಸವರಾಜ್ ಕನ್ನಾಳೆ ವಶಕ್ಕೆ ಒಳಗಾದ ಆರೋಪಿಯಾಗಿದ್ದು, ಆತನನ್ನು ಬೆಳಿಗ್ಗೆ ಬೆಂಗಳೂರಿಗೆ ಕರೆತಂದು ಅಧಿಕೃತವಾಗಿ ಬಂಧಿಸುವ ಸಾಧ್ಯತೆಯಿದೆ.
ಮಧ್ಯವರ್ತಿಯಾಗಿ ಅಕ್ರಮ ನಡೆಸಿದ್ದ ಆರೋಪಿ
ನೇಮಕಾತಿ ಅಕ್ರಮದಲ್ಲಿ ಬಸವರಾಜ್ ಕನ್ನಾಳೆ ಅಭ್ಯರ್ಥಿಗಳು ಹಾಗೂ ಪ್ರಕರಣದ ಪ್ರಮುಖ ಸೂತ್ರಧಾರ ಗ್ಯಾನೇಂದ್ರ ನಡುವೆ ಮಧ್ಯವರ್ತಿಯಾಗಿ (ಬ್ರೋಕರ್) ಕೆಲಸ ಮಾಡುತ್ತಿದ್ದ ಎಂಬುದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ. ಸುಮಾರು 12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗ್ಯಾನೇಂದ್ರ ಜೊತೆಗೆ ಸಂಪರ್ಕಿಸಿ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದ್ದ ಆರೋಪ ಈತನ ಮೇಲಿದೆ. ಇತ್ತೀಚೆಗಷ್ಟೇ ಗ್ಯಾನೇಂದ್ರ ಕುಮಾರ್ ಗಂಗ್ವಾರನನ್ನು ಬಂಧಿಸಿದ್ದ ಸಿಐಡಿ ಪೊಲೀಸರು, ಆತನಿಂದ ಸಿಕ್ಕ ಸುಳಿವು ಆಧರಿಸಿ ಬಸವರಾಜ್‌ನನ್ನು ದೆಹಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಎರಡು ನಿವಾಸಗಳ ಮೇಲೆ ಪೊಲೀಸರ ದಾಳಿ
ಬಸವರಾಜ್ ವಶಕ್ಕೆ ಒಳಗಾಗುತ್ತಿದ್ದಂತೆ, ಮೇಲಾಧಿಕಾರಿಗಳ ಸೂಚನೆಯಂತೆ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಭಾಲ್ಕಿ ಪಟ್ಟಣದ ಲೆಕ್ಚರರ್ ಕಾಲೋನಿಯಲ್ಲಿರುವ ಆರೋಪಿಯ ಸ್ವಂತ ಮನೆ ಹಾಗೂ ದೋಣಗಾಪೂರ್ ಗ್ರಾಮದಲ್ಲಿರುವ ಆತನ ನಿವಾಸದ ಮೇ
