ಹೊಸಪೇಟೆ: ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಹಂಪಿ ಕನ್ನಡ ವಿವಿ ಉಪಕುಲಪತಿ ಸ.ಚಿ.ರಮೇಶ್ ವಿರುದ್ಧ ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್. ಉಗ್ರಪ್ಪನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡದ ಸಂಶೋಧನಾರ್ಥಿಗಳ ಬಾಕಿ ಇರುವ ಫೆಲೋಶಿಪ್ ನೀಡುವಂತೆ ಒತ್ತಾಯಿಸಿ, ವಿದ್ಯಾರ್ಥಿಗಳು ಎರಡನೇ ದಿನ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ಸಂಶೋಧನಾರ್ಥಿಗಳ ಬಾಕಿ ಇರುವ 47 ತಿಂಗಳ ಫೆಲೋಶಿಪ್ ನೀಡುವಂತೆ ವಿವಿ ಆಡಳಿತಾಂಗಕ್ಕೆ ಅನೇಕ ಬಾರಿ ಮನವಿಗಳನ್ನು ಸಲ್ಲಿಸಿ, ವಿದ್ಯಾರ್ಥಿಗಳು ಪ್ರತಿಭಟನೆ, ಧರಣಿ ನಡೆಸಿದರು ಕೂಡ, ಈ ಬಗ್ಗೆ ಸರ್ಕಾರವಾಗಲಿ, ಕುಲಪತಿಗಳಾಗಲಿ ಕ್ರಮ ತೆಗೆದುಕೊಳ್ಳದಿರುವುದು ವಿದ್ಯಾರ್ಥಿಗಳಿಗಲ್ಲದೆ, ಇಡೀ ಕರ್ನಾಟಕಕ್ಕೆ ಆಗುತ್ತಿರುವ ಅಪಮಾನ ಎಂದು ಕಿಡಿಕಾರಿದರು.
‘ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಂತದ್ದು ಬಿಕ್ಷೆ ಅಲ್ಲ. ಏಕೆಂದರೆ ಅದು ಯಾರಪ್ಪನ ಸ್ವತ್ತು ಅಲ್ಲ. ಇದು ನಮ್ಮೇಲ್ಲರ ಹಕ್ಕು ಎಂದ ಅವರು, ಸಂವಿಧಾನದ ವಿಧಿ 17ರ ಪ್ರಕಾರ ಯಾವುದೇ ರೀತಿಯಲ್ಲಿ, ಜನರಿಗೆ, ವಿದ್ಯಾರ್ಥಿಗಳಿಗೆ, ತಾರತಮ್ಯ ನಡೆದರೆ, ಕಾನೂನು ಅದನ್ನು ಗಂಭೀರವಾಗಿ ಪರಗಣಿಸುತ್ತದೆ. ಹೀಗಾಗಿ ತಾರತಮ್ಯ ನಡೆದಲ್ಲಿ, ಆ ಕುರಿತು ಪ್ರಕರಣ ದಾಖಲಿಸಬಹುದು’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ‘ಇಲ್ಲಿ ಯಾರಿಗೆ ಪ್ರೋತ್ಸಾಹ ಧನ ಕೊಟ್ಟಿದ್ದಾರೆಯೋ ಅದು ಒಳ್ಳೆಯದೇ, ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಆದರೆ ಇವರು ಇಂದಿನ ದಿನಮಾನಗಳಲ್ಲಿ 24% ಮತ್ತು 7% ವ್ಯಕ್ತಿಗಳು 17% ಇರುವಂತಹ ಎಸ್‌ಟಿ, ಎಸ್‌ಸಿಯವರಿಗೆ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಾನು ಒಬ್ಬ ವಕೀಲನಾಗಿ ಹೇಳಲು ಬಯಸುವುದಾದರೆ, ಈ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಎಸ್‌ಟಿ/ಎಸ್‌ಸಿ ಅನ್ನುವ ಕಾರಣದಿಂದ ತಾರತಮ್ಯ, ಅಥವಾ ಅಸ್ಪೃಶ್ಯತೆಯನ್ನು ಆಚರಣೆ ಮಾಡುತ್ತಿದ್ದರೆ, ನಾನು ಒಬ್ಬ ವಕೀಲನಾಗಿ ಹೇಳಲು ಬಯಸುತ್ತೇನೆ ಎಂದ ಅವರು, ಈ ಭಾಗದ ಪೊಲೀಸ್ ಅಧಿಕಾರಿಗಳು ಜೀವಂತವಾಗಿ ಇದ್ದರೆ, ಇಲ್ಲಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ನಡೆಸಿದಂತಹ ಎಲ್ಲಾ ಅಧಿಕಾರಿಗಳ ಮೇಲೆ ಕೂಡಲೇ ಕೇಸನ್ನು ದಾಖಲು ಮಾಡಿಕೊಳ್ಳಬೇಕಿತ್ತು. ಕ್ರಿಮಿನಲ್ ಪ್ರೊಸೀಜರ್ ಕೋಡ್ ಪ್ರಕಾರ, ಸೋಮೋಟೋ ಕೇಸ್ ದಾಖಲಿಸಬಹುದಿತ್ತು’ ಎಂದರು.
‘ವಿದ್ಯಾರ್ಥಿಗಳ ಹೋರಾಟ ಸಂವಿಧಾನ ಬದ್ದವಾಗಿದೆ ಈ ಧರಣಿ ಮುಂದುವರಿಯಲಿ ಇಲ್ಲಿನ ಕೆಟ್ಟ ವ್ಯವಸ್ಥೆಗೆ ನೀವೆಲ್ಲ ಬುದ್ದಿ ಕಲಿಸುವವರಾಗಬೇಕು. ಇವರೆಲ್ಲ ಕನ್ನಡ ವಿಶ್ವವಿದ್ಯಾಲಯದ ಗಣತೆಯನ್ನು ಹಾಳು ಮಾಡುತಿದ್ದಾರೆ ಎಂದು ಸ್ಥಳದಲ್ಲಿದ್ದ ಉಪಕುಲಸಚಿವರಾದ ಎ.ವೆಂಕಟೇಶ್ ಅವರನ್ನು ವಿದ್ಯಾರ್ಥಿಗಳು ವಿವರ ಕೇಳಿದರು ಅವರು ಯಾವುದೇ ಮಾಹಿತಿಯನ್ನು ಸರಿಯಾಗಿ ಕೊಡಲಿಲ್ಲ. ಅದಕ್ಕೆ ಅವರು ನೀವು ಮಕ್ಕಳಿಗೆ ನ್ಯಾಯ ಕೊಡಲಾರರು. ಅಧಿಕಾರ ಎನ್ನುವುದು ಎನ್ನುವುದು ಶಾಶ್ವತ ಅಲ್ಲ ಮಾನವೀಯತೆ ಮುಖ್ಯ ಎಂದು’ ಹೇಳಿದರು.
‘ಹೀಗಾಗಿ ಇವರು ಯಾವ ಯಾವ ಮೂಲದಿಂದ ಭ್ರಷ್ಟಾಚಾರ ಮಾಡಬಹುದೆಂದು ಯೋಚಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಸ.ಚಿ.ರಮೇಶ್ ಅವರು, ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಬಾಕಿ ಇರುವ 47 ತಿಂಗಳ ಫೆಲೋಶಿಪ್ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.
‘ನಾನು ಇಲ್ಲಿ ರಾಜಕಾರಣ ಮಾಡಲ್ಲ. ಆದರೆ ಇಂದಿನ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಅಭಿನಂದನಿಯ ಆದರೆ ಇವರು ಹಣವನು ಕೂಡಲೆ ಕೊಡದಿದ್ದರೆ ಇವರುಗಳನ್ನು ಹೇಗೆ ನೀರಿಳಿಸಬೇಕು ನಮಗೆ ಚನ್ನಾಗಿ ಗೊತ್ತಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿಯವರಿಗೆ ಎಚ್ಚರಿಕೆ ನೀಡಿದರು.