Home ಬೆಂಗಳೂರು ವಿಧಾನಪರಿಷತ್‌ ಚುನಾವಣೆ – ಇಂದು ಬಿಜೆಪಿ ಜೆಡಿಎಸ್‌ ಶಾಸಕರ ಸಭೆ

ವಿಧಾನಪರಿಷತ್‌ ಚುನಾವಣೆ – ಇಂದು ಬಿಜೆಪಿ ಜೆಡಿಎಸ್‌ ಶಾಸಕರ ಸಭೆ

ಬೆಂಗಳೂರು : ವಿಧಾನ ಪರಿಷತ್‌ನ (MLC Election) ಏಳು ಸ್ಥಾನಗಳಿಗೆ ಗುರುವಾರ (ಜೂನ್ 18) ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮೈತ್ರಿಕೂಟದ ಎನ್‌ಡಿಎ (NDA) ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ (Bjp and Jds) ಶಾಸಕರ ಜಂಟಿ ಸಭೆಯನ್ನು ಇಂದು (ಬುಧವಾರ) ಸಂಜೆ 6 ಗಂಟೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದೆ.

ಪ್ರಸಕ್ತ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಮೈತ್ರಿಕೂಟದ ಅಭ್ಯರ್ಥಿಗಳಾದ ಬಿಜೆಪಿಯ ರಘು ಕೌಟಿಲ್ಯ ಹಾಗೂ ಲಿಂಗರಾಜ್ ಪಾಟೀಲ್ ಅವರು ಸುಲಭವಾಗಿ ಜಯಭೇರಿ ಬಾರಿಸಲಿದ್ದಾರೆ.

ಆದರೆ, ಜೆಡಿಎಸ್ ಪಾಲಿನ ಅಭ್ಯರ್ಥಿಯ ಗೆಲುವಿಗೆ ಹೆಚ್ಚುವರಿ ಮತಗಳ ಅಗತ್ಯವಿರುವುದರಿಂದ, ಇಂದಿನ ಸಭೆಯಲ್ಲಿ ಉಭಯ ಪಕ್ಷಗಳ ನಾಯಕರು ಗಂಭೀರ ರಣತಂತ್ರ ಹೆಣೆಯಲಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಮೈತ್ರಿಕೂಟದ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಮತ ಚಲಾಯಿಸುವಂತೆ ಮಾಡಲು ಮತ್ತು ಯಾವುದೇ ರೀತಿಯ ಅಡ್ಡ ಮತದಾನಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲು ಈ ಹೈವೋಲ್ಟೇಜ್ ಸಭೆ ಆಯೋಜಿಸಲಾಗಿದೆ.

You cannot copy content of this page

Exit mobile version