Home ಅಪರಾಧ ವಿಜಯಪುರದ ಆರು ಜನರ ಹತ್ಯೆ ಪ್ರಕರಣ – 12 ಆರೋಪಿಗಳು ಅಂದರ್

ವಿಜಯಪುರದ ಆರು ಜನರ ಹತ್ಯೆ ಪ್ರಕರಣ – 12 ಆರೋಪಿಗಳು ಅಂದರ್

ಚಡಚಣ : ವಿಜಯಪುರ(Vijayapura) ಜಿಲ್ಲೆಯ ಚಡಚಣ(Chadchana) ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಆರು ಜನರ ಭೀಕರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, 12 ಜನರನ್ನು ಬಂಧಿಸಿದ್ದಾರೆ. ಭೀಮಾತೀರದಲ್ಲಿ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಈ ದಾರುಣ ನರಮೇಧ ನಡೆದಿತ್ತು.

ದೀರ್ಘಕಾಲದ ಆಸ್ತಿ ವಿವಾದ: ಗೋವಿಂದಪುರ ಗ್ರಾಮದ ಹೊರವಲಯದಲ್ಲಿರುವ ಸುಮಾರು 24 ಎಕರೆ ವಿವಾದಿತ ಕೃಷಿ ಭೂಮಿಯ ವಿಚಾರವಾಗಿ ನಿರಾಳೆ ಮತ್ತು ಗೊಳಗಿ/ಪಾಟೀಲ್ ಕುಟುಂಬಗಳ ನಡುವೆ ದೀರ್ಘಕಾಲದಿಂದ ದ್ವೇಷವಿತ್ತು. ನಿರಾಳೆ ಕುಟುಂಬದವರು ತಮ್ಮ ಜಮೀನಿನಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ಕೆಲಸ ಮಾಡುತ್ತಿದ್ದಾಗ, ಮೋಟಾರ್ ಸೈಕಲ್‌ಗಳಲ್ಲಿ ಬಂದ ಸಶಸ್ತ್ರ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಸಂತ್ರಸ್ತರ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಹತ್ಯೆಯಾದ ದುರ್ದೈವಿಗಳುಈ ಭೀಕರ ದಾಳಿಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರೊಂದಿಗೆ ಕೆಲಸಕ್ಕಿದ್ದ ಒಬ್ಬ ಕಾರ್ಮಿಕ ಸೇರಿ ಒಟ್ಟು 6 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಚಡಚಣ ಪಟ್ಟಣ ಪಂಚಾಯಿತಿ ಸದಸ್ಯ ಚಂದ್ರಕಾಂತ್ (ಚಂದು) ನಿರಾಳೆ (56)ದುಂಡಪ್ಪ ರೇವಣಸಿದ್ದಪ್ಪ ನಿರಾಳೆ (65)ಶಿವಪುತ್ರ ರೇವಣಸಿದ್ದಪ್ಪ ನಿರಾಳೆ (60)ರೇವಣಸಿದ್ದಪ್ಪ ಅಲಿಯಾಸ್ ರಾಹುಲ್ ನಿರಾಳೆ (35)ಸಮರ್ಥ ನಿರಾಳೆ (24)ಕೂಲಿ ಕಾರ್ಮಿಕ ಶಬ್ಬೀರ್ ನದಾಫ್ (50

ಎಫ್‌ಐಆರ್ (FIR)12 ಮಂದಿಯ ಬಂಧನ: ಚಡಚಣ ಪೊಲೀಸ್ ಠಾಣೆಯಲ್ಲಿ ಮೃತ ದುಂಡಪ್ಪ ನಿರಾಳೆ ಅವರ ಪುತ್ರ ಚೈತನ್ಯ ಕುಮಾರ್ ನೀಡಿದ ದೂರಿನ ಮೇರೆಗೆ 12 ಜನ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.

ಸದ್ಯ ಪೊಲೀಸರು ಈ ಎಲ್ಲಾ 12 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಮುಖ್ಯ ಆರೋಪಿ: ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿ ಕಲ್ಲಣಗೌಡ ಈಶ್ವರಗೌಡ ಪಾಟೀಲ್ ಅವರನ್ನು ಮೊದಲನೇ ಆರೋಪಿ (A1) ಎಂದು ಹೆಸರಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ಹಾಗೂ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸದ್ಯ ಸಶಸ್ತ್ರ ಪೊಲೀಸ್ ಪಡೆಗಳಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

You cannot copy content of this page

Exit mobile version