Home ಬೆಂಗಳೂರು ಅನಿಲ ಬೆಲೆ ಮತ್ತೆ ಏರಿಕೆ ಹಚ್ಚಾಗಲಿದೆಯೇ – ಹೋಟೆಲ್ ತ ದರ?

ಅನಿಲ ಬೆಲೆ ಮತ್ತೆ ಏರಿಕೆ ಹಚ್ಚಾಗಲಿದೆಯೇ – ಹೋಟೆಲ್ ತ ದರ?

ಬೆಂಗಳೂರು : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder) ಬೆಲೆ ಸರಣಿಯಾಗಿ ಏರಿಕೆಯಾಗುತ್ತಿರುವುದು (Price Hike) ಹೋಟೆಲ್ (Hotel) ಉದ್ಯಮದ ಮೇಲೆ ಭಾರಿ ಹೊಡೆತ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಇಂದು ಕೂಡ ಕಮರ್ಷಿಯಲ್ ಸಿಲಿಂಡರ್ ದರದಲ್ಲಿ 46 ರೂಪಾಯಿ ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿ ಇದರ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿಗೆ ತಲುಪಬಹುದು ಎಂದು ಗ್ಯಾಸ್ ಏಜೆನ್ಸಿಗಳು ಈಗಾಗಲೇ ಮುನ್ಸೂಚನೆ ನೀಡಿವೆ.

ನಿರಂತರವಾಗಿ ಹೆಚ್ಚುತ್ತಿರುವ ಈ ವೆಚ್ಚವನ್ನು ಭರಿಸಲು ಸಾಧ್ಯವಾಗದೆ, ದರ ಏರಿಕೆ ಮಾಡುವುದು ಬಿಟ್ಟು ಬೇರೆ ದಾರಿಯಿಲ್ಲದೆ ಈಗಾಗಲೇ ನಗರದ ಸಾಕಷ್ಟು ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ. ಪ್ರತಿ ಬಾರಿ ಸಿಲಿಂಡರ್ ದರ ಹೆಚ್ಚಾದಾಗಲೂ ಆ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕಲು ಸಾಧ್ಯವಿಲ್ಲದ ಕಾರಣ, ಹೋಟೆಲ್ ಮಾಲೀಕರು ಈಗ ಪರ್ಯಾಯ ಮಾರ್ಗಗಳ ಮೊರೆ ಹೋಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಅವರು, ದರ ಏರಿಕೆಯ ಹೊರೆಯಿಂದ ಬದಲಿ ದಾರಿಯಾಗಿ ಹೋಟೆಲ್‌ಗಳಲ್ಲಿ ಎಲೆಕ್ಟ್ರಿಕ್ ಸ್ಟೌವ್‌ಗಳ ಬಳಕೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದೆ ದಿನಕ್ಕೆ 5 ಸಿಲಿಂಡರ್‌ಗಳು ಬೇಕಾಗುತ್ತಿದ್ದ ಜಾಗದಲ್ಲಿ, ಈಗ ಎಲೆಕ್ಟ್ರಿಕ್ ಸ್ಟೌವ್ ಬಳಸುತ್ತಿರುವುದರಿಂದ ಕೇವಲ ಒಂದೂವರೆ ಸಿಲಿಂಡರ್ ಮಾತ್ರ ಬಳಕೆಯಾಗುತ್ತಿದೆ. ಈ ಸ್ಮಾರ್ಟ್ ಬದಲಾವಣೆಯಿಂದ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ತಡೆಯಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version