ಕೃಷಿ ಇಲಾಖೆ ಹೊರಡಿಸಿರುವ ಹೊಸ ಸೂಚನಾ ಸಭೆಯ ಪತ್ರದ ಬಗ್ಗೆ ಈಗ ದಲಿತ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆಯ ಬಿಸಿ ಎದುರಾಗಿದೆ.
ರೋಸ್ಟರ್ ಅನುಸರಿಸಿದ ಹುದ್ದೆಗಳ ಮೀಸಲಾತಿಯನ್ನು ಉಲ್ಲಂಘಿಸಿ ಮೀಸಲಾತಿ ವಿಚಾರದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ವಂಚಿಸುವ ವಿಚಾರದಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಪ್ರತಿಭಟನೆ ಕರೆಯಲಾಗಿದೆ.
ಈ ವಿಚಾರವಾಗಿ ಜುಲೈ 6 ರಂದು ಕೃಷಿ ಸಚಿವರ ಸಮ್ಮುಖದಲ್ಲಿ ಕರೆದ ಸಭೆಯಲ್ಲಿ ಹೊಸ ನಿಯಮ ಜಾರಿಗೆ ತಂದರೆ ಜುಲೈ 14 ಕ್ಕೆ ಪ್ರತಿಭಟನೆ ಮಾಡುವುದಾಗಿ ಕರೆ ನೀಡಲಾಗಿದೆ. ಜುಲೈ 14 ರ ಒಳಗೆ ನಿಯಮ ವಾಪಸ್ ಪಡೆಯಲು ಕೋರಲಾಗಿದೆ.