ಪಂಜಾಬ್: ಪಂಜಾಬ್‌ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ನಂತರ, ಬೃಹತ್ ಪ್ರತಿಭಟನೆಗಳು ಭುಗಿಲೆದಿದ್ದು, ಸಾವಿಗೆ ಕಾರಣ ಏನೆಂದು ತಳಿಯಲು ವಿದ್ಯಾರ್ಥಿಗಳು ತನಿಖೆಗೆ ಒತ್ತಾಯಿಸಿ ಮಂಗಳವಾರ ತಡರಾತ್ರಿಯವರೆಗೆ ಪ್ರತಿಭಟನೆ ನಡೆಸಿದರು.
ಕೇರಳದ 21 ವರ್ಷದ ಅಗ್ನಿ ಎಸ್ ದಿಲೀಪ್, ವಿಶ್ವವಿದ್ಯಾನಿಲಯದಲ್ಲಿ ವಿನ್ಯಾಸದಲ್ಲಿ ಪದವಿ (degree in design) ವ್ಯಾಸಂಗ ಮಾಡುತ್ತಿದ್ದು, ಆತನ ಸಾವಿಗೆ ವೈಯಕ್ತಿಕ ಸಮಸ್ಯೆಗಳು ಕಾರಣ ಎಂದು ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯದಲ್ಲಿ ಕೇವಲ 10ದಿನಗಳಲ್ಲಿ ಇದು ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ ಎಂದು ಆರೋಪಿಸಿದ್ದು, ಈ ಸಾವುಗಳಿಗೆ ಕಾರಣ ಏನೆಂದು ಹೆಚ್ಚಿನ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿನ್ನಲೆ ವಿಶ್ವವಿದ್ಯಾಲಯವು ಕೂಡ ವಿದ್ಯಾರ್ಥಿಗಳ ಆಗ್ರಹದಂತೆ ಹೆಚ್ಚಿನ ತನಿಖೆ ನಡೆಸಲು ಸಮ್ಮತಿ ಸೂಚಿಸಿದೆ.
ಇದನ್ನೂ ನೋಡಿ: https://www.youtube.com/watch?v=IWO5aXf9pB0