Home ಅಂಕಣ ವಯನಾಡ್‌ l ಪ್ರಿಯಾಂಕಾಗೆ ಗೆಲುವು: ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್

ವಯನಾಡ್‌ l ಪ್ರಿಯಾಂಕಾಗೆ ಗೆಲುವು: ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್

0

ವಯನಾಡ್: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೆಲುವು ದಾಖಲಿಸಿದ್ದಾರೆ.

ಇದೇ ಕ್ಷೇತ್ರದಲ್ಲಿ ಪ್ರಿಯಾಂಕಾ ಸಹೋದರ ರಾಹುಲ್ ಪಡೆದಿದ್ದ ಮತಗಳಿಗಿಂತಲೂ ಪ್ರಿಯಾಂಕಾ ಹೆಚ್ಚಿನ ಮತಗಳಿಂದ ಚುನಾಯಿತರಾಗಿದ್ದಾರೆ. ಅವರು ಸುಮಾರು 3.82 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಪ್ರಿಯಾಂಕಾ ಅ ತಮ್ಮ ಸಮೀಪದ ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಅವರನ್ನು ಸೋಲಿಸಿದ್ದಾರೆ. ವಿಶೇಷ ಎಂದರೆ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಅವರು 1 ಲಕ್ಷ ಮತಗಳನ್ನು ಪಡೆದು ೩ನೇ ಸ್ಥಾನದಲ್ಲಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ಈ ಕ್ಷೇತ್ರದಿಂದ 3.64 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಆದರೆ ರಾಯಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರು, ಅಂತಿಮವಾಗಿ ವಯನಾಡ್‌ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿ ರಾಜೀನಾಮೆ ನೀಡಿದ್ದರು.

ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆಯುವ ಮೂಲಕ ಅವರ ಪ್ರತಿಸ್ಪರ್ಧಿ ಸಿಪಿಐನ ಅನ್ನಿ ರಾಜಾ ಅವರನ್ನು 3,64,422 ಮತಗಳ ಅಂತರದಿಂದ ರಾಹುಲ್ ಸೋಲಿಸಿದ್ದರು.

ರಾಹುಲ್‌ ಸಹೋದರಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ವಯನಾಡ್‌ನಿಂದ ಕಣಕ್ಕಿಳಿಸಲಾಗಿತ್ತು. ಈ ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ.

You cannot copy content of this page

Exit mobile version