Home ಇನ್ನಷ್ಟು ಕೋರ್ಟು - ಕಾನೂನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

0

ತಮಿಳುನಾಡು ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಕಾಯಿದೆಯನ್ನು ತ್ರಿಭಾಷಾ ತತ್ವದೊಂದಿಗೆ ಜಾರಿಗೆ ತರಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್ ಅವರ ಪೀಠವು, ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಯಾವುದೇ ರಾಜ್ಯವನ್ನು ಒತ್ತಾಯಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

“NEP-2020 ಕಾಯಿದೆನ್ನು ಜಾರಿಗೊಳಿಸುವುದು ಅಥವಾ ಜಾರಿಗೊಳಿಸದಿರುವುದು ರಾಜ್ಯಗಳಿಗೆ ಬಿಟ್ಟ ವಿಷಯ. 32ನೇ ವಿಧಿಯ ಪ್ರಕಾರ, ಜನರ ಹಕ್ಕುಗಳನ್ನು ರಕ್ಷಣೆ ಮಾಡುವುದಷ್ಟೇ ಕೋರ್ಟಿನ ಕೆಲಸ. NEP-2020 ರೀತಿಯ ನೀತಿಗಳನ್ನು ಜಾರಿಗೆ ತರುವಂತೆ ಯಾವುದೇ ರಾಜ್ಯವನ್ನು ಒತ್ತಾಯಿಸಲು ಸಾಧ್ಯವಿಲ್ಲ.”

ರಾಜ್ಯವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ಮಾತ್ರ ನಾವು NEP ನೀತಿಯಲ್ಲಿ ಮಧ್ಯಪ್ರವೇಶಿಸಬಹುದು. “ಈ ಕಾರಣಗಳಿಗಾಗಿ, ಈ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.

ಆದರೂ ಸೂಕ್ತ ಕ್ರಮಗಳ ಮೂಲಕ ಮುಖ್ಯ ವಿಷಯದ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಈ ನಡುವೆ ಈ ಕುರಿತು ಅರ್ಜಿ ಸಲ್ಲಿಸಿದ್ದ ಜಿ.ಎಸ್.ಮಣಿ ಅವರನ್ನು ಪ್ರಶ್ನಿಸಿತು. NEP ಕಾಯಿದೆ ಜಾರಿಗೆ ತರುವ ಕುರಿತು ನೀವು ಏಕೆ ಉತ್ಸಾಹ ತೋರಿಸುತ್ತಿದ್ದೀರಿ ಎಂದು ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು “ನಾನು ತಮಿಳುನಾಡು ಮೂಲದವನಾಗಿದ್ದು, ಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದರು. NEP ಜಾರಿಯಾಗದ ಕಾರಣ ತಮಿಳುನಾಡಿನಲ್ಲಿ ಸುಲಭವಾಗಿ ಹಿಂದಿ ಕಲಿಯಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಈಗ ದೆಹಲಿಯಲ್ಲಿ ಕಲಿಯಿರಿ” ಎಂದು ಸೂಚಿಸಿತು.

You cannot copy content of this page

Exit mobile version