₹9,000 ಕೋಟಿಗೂ ಹೆಚ್ಚು ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ, ಉದ್ಯಮಿ ರಾಜ್ ಶಮಾನಿ ಅವರೊಂದಿಗೆ ನಾಲ್ಕು ಗಂಟೆಗಳ ಪಾಡ್‌ಕ್ಯಾಸ್ಟ್ ಸಂಭಾಷಣೆಯಲ್ಲಿ ತಮ್ಮ ವಿರುದ್ಧದ ಪ್ರಕರಣಗಳ ಕುರಿತು ಮಾತನಾಡಿದರು. ವಿಶೇಷವಾಗಿ ತನ್ನ ಮೇಲಿರುವ ಆರೋಪಗಳು ಕಲ್ಪಿತ ಮತ್ತು ಉದ್ದೇಶಪೂರ್ವಕ ಹಗೆ ಇದೆ ಎಂಬುದನ್ನು ವಿಜಯ್ ಮಲ್ಯ ಹೇಳಿದ್ದಾರೆ.
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ, ಭಾರತದಿಂದ ತಮ್ಮ ವಿವಾದಾತ್ಮಕ ನಿರ್ಗಮನ, ಕಾನೂನು ಹೋರಾಟಗಳು, ತಮ್ಮ ವಿಮಾನಯಾನ ಸಂಸ್ಥೆಯ ಪತನ ಮತ್ತು ‘ಕಳ್ಳ’ ಎಂದು ಕರೆಯಲ್ಪಟ್ಟಿರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದರು.
2016 ರ ಮಾರ್ಚ್ ತಿಂಗಳ ನಂತರ ನಾನು ಭಾರತಕ್ಕೆ ಹಿಂತಿರುಗದಿದ್ದಕ್ಕಾಗಿ ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಿರಿ. ಆದರೆ ನಾನೆಲ್ಲೂ ಓಡಿ ಹೋಗಿಲ್ಲ. ಪೂರ್ವನಿಗದಿತ ಭೇಟಿಗಾಗಿ ಭಾರತದಿಂದ ಹೊರಟೆ. ಸರಿ, ನಾನು ಮಾನ್ಯವೆಂದು ಪರಿಗಣಿಸುವ ಕಾರಣಗಳಿಗಾಗಿ ಹಿಂತಿರುಗಲಿಲ್ಲ, ಆದ್ದರಿಂದ ನೀವು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಲು ಬಯಸಿದರೆ, ಮುಂದುವರಿಯಿರಿ, ಆದರೆ ‘ಕಳ್ಳ’ ಎಂಬ ಪದ ಎಲ್ಲಿಂದ ಬರುತ್ತಿದೆ. ‘ಚೋರಿ’ ಎಲ್ಲಿಂದ?” ಎಂದು ಪ್ರಶ್ನೆ ಮಾಡಿದ್ದಾರೆ.
ನ್ಯಾಯಯುತ ತನಿಖೆ, ಗೌರವಯುತ ನಡೆಯ ಭರವಸೆ ನೀಡಿದರೆ ಭಾರತಕ್ಕೆ ಹಿಂತಿರುಗುತ್ತೀರಾ ಎಂದು ಉದ್ಯಮಿ ರಾಜ್ ಶಮಾನಿ ನೇರವಾಗಿ ಪ್ರಶ್ನೆ ಕೇಳಿದಾಗ , ಮಲ್ಯ, “ನನಗೆ ಖಚಿತವಾದರೆ, ನಾನು ಅದರ ಬಗ್ಗೆ ಗಂಭೀರವಾಗಿ ಯೋಚಿಸುತ್ತೇನೆ” ಎಂದು ಉತ್ತರಿಸಿದರು.
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪತನವನ್ನು ಪುನರ್ವಿಮರ್ಶಿಸಿದ ಮಲ್ಯ, 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಒಂದು ಪ್ರಮುಖ ಪ್ರಚೋದಕ ಎಂದು ಹೇಳಿದರು. “ನೀವು ಎಂದಾದರೂ ಲೆಹ್ಮನ್ ಬ್ರದರ್ಸ್ ಬಗ್ಗೆ ಕೇಳಿದ್ದೀರಾ? ನೀವು ಎಂದಾದರೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಕೇಳಿದ್ದೀರಾ? ಅದು ಭಾರತದ ಮೇಲೆ ಪರಿಣಾಮ ಬೀರಲಿಲ್ಲವೇ? ಖಂಡಿತಾ ಅದು ಭಾರತದ ಆರ್ಥಿಕ ವ್ಯವಸ್ಥೆಗೂ ತೀವ್ರ ಸಮಸ್ಯೆ ಆಗಿದೆ,” ಎಂದು ಅವರು ರಾಜ್ ಶಮಾನಿಯೊಂದಿಗೆ ಹೇಳಿದರು. “ಪ್ರತಿಯೊಂದು ವಲಯಕ್ಕೂ ಹೊಡೆತ ಬಿದ್ದಿತು. ಹಣ ನಿಂತುಹೋಯಿತು. ಹಣದ ಹರಿವು ನಿಂತು ಹೋಯಿತು. ಭಾರತೀಯ ರೂಪಾಯಿಯ ಮೌಲ್ಯಕ್ಕೂ ಸಹ ಹೊಡೆತ ಬಿದ್ದಿತು. ಆ ಸಂದರ್ಭದಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಸಂಪೂರ್ಣ ನಷ್ಟಕ್ಕೆ ತುತ್ತಾಗಿತ್ತು, ಎಂದು ವಿಜಯ್ ಮಲ್ಯ ಹೇಳಿದರು.
ಬರೋಬ್ಬರಿ 4 ಗಂಟೆಗೂ ಹೆಚ್ಚು ಸಮಯದ ಪಾಡ್ ಕಾಸ್ಟ್ ನಲ್ಲಿ ವಿಜಯ್ ಮಲ್ಯ ಭಾರತೀಯ ಮಾಧ್ಯಮಗಳು ಅತಿರೇಕದ ವರ್ತನೆ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳ ಹೊಣೆಗೇಡಿತನದ ಬಗ್ಗೆ ಮಾತನಾಡುತ್ತಾ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಹೆಸರನ್ನೂ ಪ್ರಸ್ತಾಪಿಸದೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಲ್ಯ ನನ್ನನ್ನು ಪರಾರಿಯಾದವ ಎಂದರೂ ಪರವಾಗಿಲ್ಲ, ಆದರೆ ನೇರವಾಗಿ ಕಳ್ಳ, ಚೋರ್ ಎಂಬ ಪದ ಬಳಸಿದ್ದಾರೆ.. ಈ ಬಗ್ಗೆ ನನಗೆ ತಕರಾರಿದೆ ಎಂದು ಮಲ್ಯ ಹೇಳಿದ್ದಾರೆ.
ಭಾರತದ ಇಂದಿನ ಆರ್ಥಿಕ ಸ್ಥಿತಿ ಮತ್ತು ಅಂದು ತಾನೆಂತಾ ಒತ್ತಡಕ್ಕೆ ಸಿಕ್ಕಿದ್ದು ಎಂಬ ಬಗ್ಗೆಯೂ ಪ್ರಸ್ತಾಪಿಸಿದ ಮಲ್ಯ ತನ್ನನ್ನು ವ್ಯವಸ್ಥಿತವಾಗಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ.
ಸಂದರ್ಶನದ ವೇಳೆ ಮಲ್ಯ ಮಾಡಿದ ಹೇಳಿಕೆಗಳಿಗೆ ಭಾರತ ಸರ್ಕಾರ ಇನ್ನೂ ಸಹ ಪ್ರತಿಕ್ರಿಯಿಸಿಲ್ಲ.