Home ಅಂಕಣ ಬಿಜೆಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರನ್ನುಈ ಪರಿ ಹೊಗಳುತ್ತಿರುವುದಕ್ಕೆ ಕಾರಣವೇನು?

ಬಿಜೆಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರನ್ನುಈ ಪರಿ ಹೊಗಳುತ್ತಿರುವುದಕ್ಕೆ ಕಾರಣವೇನು?

0

2024 ರ ಸಾರ್ವತ್ರಿಕ ಚುನಾವಣೆಯ  ಮೊದಲ ಹಂತದ  ಮತದಾನ  ಏಪ್ರಿಲ್ 19ರಂದು ನಡೆಯಲಿದೆ. ಇದಕ್ಕೂ ಐದು ದಿನಗಳ ಮೊದಲು, ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರಂದು ಹೊಸದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಅಷ್ಟೇ ಅಲ್ಲ,  ಅಂಬೇಡ್ಕರ್ ಜಯಂತಿಯಂದು  ಪ್ರಧಾನಿಯವರು ನಾಗ್ಪುರದ ದೀಕ್ಷಾ ಭೂಮಿಗೆ ಭೇಟಿ ನೀಡಬೇಕಿತ್ತು, ಆದರೆ ಅದನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಯಿತು.

ಪ್ರಧಾನಿಗೆ  400 ಸಂಸದರ ಬೆಂಬಲ ದೊರೆತರೆ, ಅವರು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬುದು ಪ್ರತಿಪಕ್ಷಗಳ ಅತಿದೊಡ್ಡ ಆರೋಪವಾಗಿರುವಾಗ, ಭಾರತೀಯ ಜನತಾ ಪಕ್ಷದ ಪ್ರಣಾಳಿಕೆ ಮತ್ತು ಅದೂ ಅಂಬೇಡ್ಕರ್ ಜಯಂತಿಯಂದು  ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ, ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಮುಖ್ಯವಾಗುತ್ತದೆ.

ಪ್ರತಿಪಕ್ಷಗಳ ಆರೋಪವನ್ನು ಮೋದಿ ಪದೇಪದೇ ತಳ್ಳಿಹಾಕುತ್ತಲೇ ಬಂದಿದ್ದಾರೆ.

“ಸಂವಿಧಾನವು ನಮಗೆ ಗೀತೆ, ಬೈಬಲ್, ಕುರಾನ್ ಮತ್ತು ಎಲ್ಲವೂ. ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಬಾಬಾ ಸಾಹೇಬ್ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಮೋದಿ ತಮ್ಮ ಮೊನ್ನೆಯ ಭಾಷಣದಲ್ಲಿ ಹೇಳಿದ್ದಾರೆ.

ಸಂವಿಧಾನದ ಮೇಲಿನ ತಮ್ಮ ಅಚಲ ನಂಬಿಕೆಯನ್ನು ತೋರಿಸಲು, ಪ್ರಧಾನಿ ಮೋದಿ ಡಾ.ಅಂಬೇಡ್ಕರ್ ಹೆಸರನ್ನು ಸಹ ಉಲ್ಲೇಖಿಸಿದರು.

ಒಂದು ಕಾಲದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರಿ ಅವರು ಬಾಬಾ ಸಾಹೇಬ್ ಅವರನ್ನು ‘ವರ್ಶಿಪ್ಪಿಂಗ್‌ ಫಾಲ್ಸ್‌ ಗಾಡ್’ ಎಂಬ ಪುಸ್ತಕವನ್ನು ಬರೆಯುವ ಮೂಲಕ ಟೀಕಿಸಿದ್ದರು. ಆ ಸಮಯದಲ್ಲಿ, ಪಕ್ಷವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಇತಿಹಾಸ.

ಇಂದು, ಅದೇ ಪಕ್ಷದ ನಾಯಕರು ಬಾಬಾ ಸಾಹೇಬ್ ಅವರ ಹೆಸರನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಈ ವ್ಯತ್ಯಾಸವು ಮುಖ್ಯವಾಗಿ ಕಳೆದ ಕೆಲವು ವರ್ಷಗಳ ರಾಜಕೀಯದಲ್ಲಿ ಕಂಡುಬರುತ್ತಿದೆ.

ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮೊದಲು, ನರೇಂದ್ರ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರು, ಇದನ್ನು ಭಾರತೀಯ ಜನತಾ ಪಕ್ಷವು ತನ್ನ ಮಾತೃ ಸಂಸ್ಥೆ ಎಂದು ಪರಿಗಣಿಸುತ್ತದೆ. ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಪ್ರಕಾರ, ಮೋದಿಯವರ ಸಿದ್ಧಾಂತ ಮತ್ತು ಡಾ.ಅಂಬೇಡ್ಕರ್ ಅವರ ಸಿದ್ಧಾಂತವನ್ನು ಒಟ್ಟಿಗೆ ಸೇರಿಸಲು ಸಾಧ್ಯವಿಲ್ಲ.

ಆದರೆ ಕಳೆದ ಕೆಲವು ವರ್ಷಗಳಿಂದ,  ರಾಷ್ಟ್ರೀಯ ಸ್ವಯಂಸೇವಕ ಸಂಘವು  ಅಂಬೇಡ್ಕರ್ ಅವರ ಆಲೋಚನೆಗಳಿಗೆ ‘ಹೊಂದಿಕೊಳ್ಳಲು’ ಶ್ರಮಿಸುತ್ತಿದೆ. ಪ್ರಸ್ತುತ ಸರಸಂಘಚಾಲಕ ಮೋಹನ್ ಭಾಗವತ್ ಆಗಾಗ್ಗೆ ಅಂಬೇಡ್ಕರ್ ಅವರನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಸಂಘದ ದೃಷ್ಟಿಕೋನಗಳು ಅಂಬೇಡ್ಕರ್ ಅವರ ದೃಷ್ಟಿಕೋನಗಳನ್ನು ಹೋಲುತ್ತವೆ ಎಂದು ಹೇಳಿದ್ದಾರೆ.

‘ಸಮಾನತೆ’ ಮತ್ತು ‘ಸಾಮರಸ್ಯ’ದ ಗುರಿ

ಆರ್.ಎಸ್.ಎಸ್. ಮತ್ತು ಡಾ. ಅಂಬೇಡ್ಕರ್ ಅವರ ವಿಚಾರಗಳು ಒಂದೇ ರೀತಿ ಇವೆಯೋ ಇಲ್ಲವೋ ಎಂಬ ಬಗ್ಗೆ ಚರ್ಚೆ ನಡೆದಾಗಲೆಲ್ಲಾ  ಮೊದಲು ನೆನಪಿಗೆ ಬರುವ ಪದಗಳು ‘ಸಮಾನತೆ’ ಮತ್ತು ‘ಸಾಮರಸ್ಯ’.

ಈ ಎರಡು ಪರಿಕಲ್ಪನೆಗಳ ಅರ್ಥದಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಇಂಗ್ಲಿಷ್ ಭಾಷೆಯಲ್ಲಿ ಸಮಾನತೆ ಎಂದರೆ ಈಕ್ವಾಲಿಟಿ, ಮತ್ತು ಸಾಮರಸ್ಯ ಎಂದರೆ ಹಾರ್ಮನಿ. ಅದೇ ಸೂಕ್ಷ್ಮ ವ್ಯತ್ಯಾಸವು ಅಂಬೇಡ್ಕರ್ ಮತ್ತು ಸಂಘದ ದೃಷ್ಟಿಕೋನಗಳಲ್ಲಿ ಪ್ರತಿಫಲಿಸುತ್ತದೆ.

ಸಾಮಾಜಿಕ ವ್ಯವಹಾರಗಳ ತಜ್ಞೆ ಪ್ರತಿಮಾ ಪ್ರದೇಶಿ ಹೇಳುವಂತೆ, “ಬಾಬಾ ಸಾಹೇಬ್ ಯಾವಾಗಲೂ ಸಮಾನತೆಗೆ ಒತ್ತು ನೀಡುತ್ತಾರೆ, ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಾಮರಸ್ಯಕ್ಕೆ ಒತ್ತು ನೀಡುತ್ತದೆ. ಸಂಘವು ಪ್ರಾಬಲ್ಯದ ಉದ್ದೇಶಕ್ಕಾಗಿ ಸಾಮರಸ್ಯದ ಪರಿಕಲ್ಪನೆಯನ್ನು ಬಳಸಿದರೆ, ಬಾಬಾ ಸಾಹೇಬ್ ಸ್ವಾತಂತ್ರ್ಯದ ಉದ್ದೇಶಕ್ಕಾಗಿ ಸಮಾನತೆಯ ಪರಿಕಲ್ಪನೆಯನ್ನು ಬಳಸುತ್ತಾರೆ.”

“ಈ ಎರಡು ಪರಿಕಲ್ಪನೆಗಳ ನಡುವಿನ ವ್ಯತ್ಯಾಸವೆಂದರೆ ಸಂಘವು ನಿಮ್ಮ ಅಸ್ತಿತ್ವನ್ನು ಅಳಿಸಿ ಪ್ರಬಲರ ಜೊತೆ ಸೇರಿಕೊಳ್ಳಿ. ಆದರೆ ನಮ್ಮ ನಿಮ್ಮ ನಡುವಿನ ವ್ಯತ್ಯಾಸ ಹಾಗೇ ಇರಲಿ ಎನ್ನುತ್ತದೆ. ಆದರೆ ಅಂಬೇಡ್ಕರ್‌ ಅವರ ಸಮಾನತಾ ವಾದವು ವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಬದುಕಿಗೆ ಘನತೆಯನ್ನೂ ಕೇಳುತ್ತದೆ.” ಎನ್ನುತ್ತಾರೆ ಪ್ರತಿಮಾ ಪ್ರದೇಶಿ

ಆರ್ ಎಸ್ ಎಸ್ ಬಗ್ಗೆ ಸಹಾನುಭೂತಿ ಹೊಂದಿರುವ ಬುದ್ಧಿಜೀವಿಗಳು  ‘ಸಾಮರಸ್ಯ’  ಪರಿಕಲ್ಪನೆಯ ಅರ್ಥವನ್ನು ತಮ್ಮದೇ ಆದ ರೀತಿಯಲ್ಲಿ ವಿವರಿಸುತ್ತಾರೆ.

ಈ ಕುರಿತು ಅಖಿಲ ಭಾರತ ಸಾಮರಸ್ಯ ಚಳವಳಿಯ ರಾಷ್ಟ್ರೀಯ ಸಮಿತಿ ಸದಸ್ಯ ಪ್ರೊ.ಡಾ.ರಮೇಶ್ ಪಾಂಡವ್ ಅವರೊಂದಿಗೆ ಬಿಬಿಸಿ ಮರಾಠಿ ಮಾತನಾಡಿದೆ.

ಪ್ರೊ.ಡಾ.ರಮೇಶ್ ಪಾಂಡವ್ ಅವರ ಪ್ರಕಾರ, ಬಾಬಾ ಸಾಹೇಬ್ ಅವರ ‘ಸಮತಾ’  ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಸಮರಸ’ ಒಂದೇ ಗುರಿಯನ್ನು ಹೊಂದಿವೆ.

“ಸಂಘದ ಘೋಷಣೆ ಸಮರಸ ಮತ್ತು ಸಮತಾ. ಈ ಕುರಿತು ನಮ್ಮಲ್ಲಿ ಹಾಡುಗಳೂ ಇವೆ. ನಾವು ಸಾಮರಸ್ಯದ ಮೂಲಕ ಸಮತೆಯನ್ನು ಸ್ಥಾಪಿಸಲು ಬಯಸುತ್ತೇವೆ. ಸಮಾನತೆ ನಮ್ಮ ಗಮ್ಯಸ್ಥಾನವಾದರೆ ಸಾಮರಸ್ಯ ಅದನ್ನು ತಲುಪು ದಾರಿ” ಎಂದು ಅವರು ಹೇಳುತ್ತಾರೆ.

ಪ್ರೊಫೆಸರ್ ಪಾಂಡವ್ ಹೇಳುತ್ತಾರೆ, “ಸಾಮರಸ್ಯವಿಲ್ಲದೆ, ಸಾಮಾಜಿಕ ಸಮಾನತೆ ಸಾಕಾರಗೊಳ್ಳುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾವಿಸಿದೆ. ಸಾಮರಸ್ಯವಿಲ್ಲದೆ ಸಾಮಾಜಿಕ ಸಮಾನತೆ ಅಸಾಧ್ಯ, ಇದು ನಮ್ಮ ಎರಡನೇ ಘೋಷಣೆ.

ಸಾಮರಸ್ಯದ ವ್ಯಾಖ್ಯಾನವನ್ನು ವಿವರಿಸುತ್ತಾ, ಪ್ರೊ. ಪಾಂಡವ್ ಹೇಳುತ್ತಾರೆ, “ಸಂಘದ ಪ್ರಕಾರ, ಸಾಮರಸ್ಯ ಎಂದರೆ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳು ಎಂದು ಕರೆಯಲ್ಪಡುವವರನ್ನು ಪ್ರೀತಿಸುವ ಮೂಲಕ, ಅವರ ನೋವು ನಲಿವುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಅವರ ಮೀಸಲಾತಿಯನ್ನು ಕಾಪಾಡಿಕೊಳ್ಳುವ ಮೂಲಕ, ಅವರ ಜೀವನದೊಂದಿಗೆ ಸಾಮರಸ್ಯ ಸಾಧಿಸುವ ಮೂಲಕ ಇಡೀ ಸಮಾಜವನ್ನು ಶೋಷಣೆಯಿಂದ ಮುಕ್ತಗೊಳಿಸುವುದು.”

ಪ್ರೊ. ಪಾಂಡವ್ ಡಾ. ಅಂಬೇಡ್ಕರರು ಸರ್ವೋಚ್ಚರೆಂದು ಪರಿಗಣಿಸಿದ್ದ ಬುದ್ಧನೂ ಇದೇ ಅಭಿಪ್ರಾಯವನ್ನು ಹೊಂದಿದ್ದನೆಂದು ಹೇಳುತ್ತಾರೆ. “ನಿಮ್ಮ ದುಃಖ ನನ್ನ ದುಃಖದಲ್ಲಿದೆ, ನಿಮ್ಮ ಸಂತೋಷ ನನ್ನ ಸಂತೋಷದಲ್ಲಿದೆ ಎಂದು ಗೌತಮ ಬುದ್ಧ ಹೇಳುತ್ತಿದ್ದ ಮತ್ತು ಸಂಘದ ಸಾಮರಸ್ಯವೂ ಇದರ ಬಗ್ಗೆ ಮಾತನಾಡುತ್ತದೆ” ಎಂದು ಅವರು ಹೇಳುತ್ತಾರೆ.

ಈ ವಿಷಯದ ಬಗ್ಗೆ ಚಿಂತಕ ಡಾ.ರಾವ್ ಸಾಹೇಬ್ ಕಸ್ಬೆ ಅವರೊಂದಿಗೂ ಬಿಬಿಸಿ ಮರಾಠಿ ಮಾತನಾಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದತ್ತೋಪಂತ್ ಥೆಂಗಾಡಿ ಅವರ ಹೆಸರನ್ನು ಉಲ್ಲೇಖಿಸಿದ ಡಾ.ರಾವ್ ಸಾಹೇಬ್ ಕಸ್ಬೆ,  1985ರಲ್ಲಿ  ದತ್ತೋಪಂತ್ ಥೆಂಗಾಡಿ ಅವರು ಸಮಾಜಿಕ ಸಾಮರಸ್ಯ ಮಂಚ್ ಸ್ಥಾಪಿಸಿದರು.  

“ಸಮಾಜ ಕಲ್ಯಾಣ ಮಂಚ್ ಸ್ಥಾಪನೆಯ ಸಂದರ್ಭದಲ್ಲಿ ದತ್ತೋಪಂತ್ ಥೆಂಗಾಡಿ ತಮ್ಮ ಭಾಷಣದಲ್ಲಿ ಸಾಮರಸ್ಯವಿಲ್ಲದೆ ಸಮಾನತೆ ಇಲ್ಲ ಎಂದು ಹೇಳಿದ್ದರು. ಆದರೆ ಸಾಮರಸ್ಯ ಎಂದರೆ ಒಗ್ಗಟ್ಟಾಗಿರುವುದು ಮತ್ತು ಸಮಾನತೆ ಎಂದರೆ ಸಮಾನವಾಗಿರುವುದು. ಹಾಗಾದರೆ ಸಮಾನತೆಯಿಲ್ಲದೆ ಸಾಮರಸ್ಯ ಇರಲು ಹೇಗೆ ಸಾಧ್ಯ? ನಿಜವಾಗಿ ಅವರು ಸಮಾನತೆ ಸಾಧ್ಯವಾಗದೆ ಸಾಮರಸ್ಯ ಸಾಧ್ಯವಿಲ್ಲ ಎನ್ನಬೇಕಿತ್ತು.”

“ಸಾಮರಸ್ಯವನ್ನು ಸಾಧಿಸಲು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆ ಪೂರ್ವಾಪೇಕ್ಷಿತವಾದುದು” ಎಂದು ಕಸ್ಬೆ ಹೇಳುತ್ತಾರೆ.

‘ಬಾಬಾ ಸಾಹೇಬ್ ಮತ್ತು ಸಂಘದ್ದು ಒಂದೇ ಗುರಿಯಲ್ಲ’

ಇತಿಹಾಸ ಸಂಶೋಧಕ ಮತ್ತು ಚಿಂತಕ ಡಾ.ಉಮೇಶ್ ಬಾಗ್ಡೆ ಪ್ರಕಾರ, ಸಮಾನತೆ ಮತ್ತು ಸಾಮರಸ್ಯದ ಎರಡು ಪರಿಕಲ್ಪನೆಗಳ ನಡುವೆ ವ್ಯತ್ಯಾಸವಿದೆ, ಆದ್ದರಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರಗಳು ಇಲ್ಲಿ ವಿಭಿನ್ನವಾಗಿವೆ.

ಡಾ.ಬಗಾಡೆ ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠಾವಾಡಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚೀನ ಭಾರತೀಯ ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿದ್ದರು. ಬಾಬಾ ಸಾಹೇಬರ ಸಮಾನತೆಯ ಪರಿಕಲ್ಪನೆಯನ್ನು ಅವರು ಹೆಚ್ಚು ಆಳವಾಗಿ ವಿವರಿಸಲು ಪ್ರಯತ್ನಿಸಿದ್ದಾರೆ.

“ಬಾಬಾ ಸಾಹೇಬರು ಮೂರು ಕ್ಷೇತ್ರಗಳಲ್ಲಿ ಅಸಮಾನತೆಯನ್ನು ಕಂಡರು:  ಹುಟ್ಟಿನಿಂದ ಅಸಮಾನತೆ (ಜಾತಿ, ಧರ್ಮ ಇತ್ಯಾದಿ), ಉತ್ತರಾಧಿಕಾರದಿಂದ ಅಸಮಾನತೆ (ಸಂಪತ್ತು, ಜ್ಞಾನ ಇತ್ಯಾದಿ) ಮತ್ತು ಸಾಧನೆಯ ವಿಷಯದಲ್ಲಿನ ಅಸಮಾನತೆ. ಸಾಧನೆಯ ಕಾರಣದಿಂದಾಗಿ ಅಸಮಾನತೆಯ ಬದಲು, ಮೊದಲ ಎರಡು ಅಸಮಾನತೆಗಳನ್ನು,  ಅಂದರೆ ಹುಟ್ಟು ಮತ್ತು ಉತ್ತರಾಧಿಕಾರದ  ಅಸಮಾನತೆಗಳನ್ನು ತೊಡೆದುಹಾಕಬೇಕು ಎನ್ನುವ ಕುರಿತು ಅವರು ಸ್ಪಷ್ಟವಾಗಿದ್ದರು. ಅವರ ಎಲ್ಲಾ ಪ್ರಯತ್ನಗಳು ಈ ನಿಟ್ಟಿನಲ್ಲಿಯೇ ಇದ್ದಂತೆ ತೋರುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾಗಿದ್ದ ಮಾಧವ್ ಸದಾಶಿವ್ ಗೋಲ್ವಾಲ್ಕರ್ ಮೊದಲ ಎರಡು ಅಸಮಾನತೆಗಳನ್ನು ‘ಸ್ವಾಭಾವಿಕ’ ಎಂದು ಕರೆಯುತ್ತಿದ್ದರು.

ಡಾ. ಬಗಾಡೆ ಹೇಳುತ್ತಾರೆ, “ಬಾಬಾ ಸಾಹೇಬರು ಅಸಮಾನತೆಯ ನಾಶವನ್ನೇ ಗುರಿಯಾಗಿಸಿಕೊಂಡಿದ್ದವರು, ಸಂಘ ಅದಕ್ಕೆ ತದ್ವಿರುದ್ಧವಾಗಿತ್ತು. ಹೀಗಿರುವಾಗ ಬಾಬಾ ಸಾಹೇಬ ಸಮಾನತೆ ಮತ್ತು ಸಂಘದ ಸಾಮರಸ್ಯ ಒಂದೇ ಗುರಿಯನ್ನು ಹೊಂದಿತ್ತು ಎಂದು ಹೇಳಲಾಗುವುದಿಲ್ಲ.

ಹಿಂದೂ ಧರ್ಮದ ಬಗ್ಗೆ ಬಾಬಾ ಸಾಹೇಬರ ಅಸಮಾಧಾನ

ಅನೇಕ ವಿದ್ವಾಂಸರ ಪ್ರಕಾರ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನಗಳ ನಡುವೆ ವಿರೋಧಾಭಾಸವಿದೆ. ಸಹಜವಾಗಿ, ಸಂಘಕ್ಕೆ ಸಂಬಂಧಿಸಿದ ಬುದ್ಧಿಜೀವಿಗಳು ಬಾಬಾ ಸಾಹೇಬ್ ಅವರ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸುವ ನಿರ್ಧಾರದ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ.

 ಅಕ್ಟೋಬರ್ 13, 1935ರಂದು, ನಾಸಿಕ್ ಜಿಲ್ಲೆಯ ಯೆಯೋಲಾದಲ್ಲಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು “ನಾನು ಹಿಂದೂವಾಗಿ ಜನಿಸಿದ್ದೇನೆ, ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ” ಎಂದು ಹೇಳಿದ್ದರು.

ಇದಕ್ಕೂ ಮೊದಲು ಬಾಬಾ ಸಾಹೇಬರು ಎರಡು ಪ್ರಮುಖ ಚಳವಳಿಗಳನ್ನು ಆರಂಭಿಸಿದ್ದರು. ಮೊದಲನೆಯದು 1927ರ ಮಹಾಡ್ ಸತ್ಯಾಗ್ರಹ ಚಳುವಳಿ  ಮತ್ತು ಎರಡನೆಯದು 1930ರಲ್ಲಿ ನಾಸಿಕ್ ನಗರದಲ್ಲಿಯೇ ನಡೆದ ಕಾಲಾರಾಮ್ ದೇವಾಲಯ ಪ್ರವೇಶ ಚಳವಳಿ.

ಯೆಯೋಲಾದಲ್ಲಿ ಹಿಂದೂ ಧರ್ಮದ ಬಗ್ಗೆ ಅವರು ಹೇಳಿಕೆ ನೀಡಿದ್ದು ಈ ಎರಡು ದೊಡ್ಡ ಮತ್ತು ಕ್ರಾಂತಿಕಾರಿ ಚಳುವಳಿಗಳ ನಂತರ. ಇದು ಅನೇಕ ರೀತಿಯಲ್ಲಿ ಮುಖ್ಯವಾಗಿದೆ.

ಇದನ್ನು ಅರ್ಥಮಾಡಿಕೊಳ್ಳುವ ಮೊದಲು, ಯೆಯೋಲಾದಲ್ಲಿ ಬಾಬಾ ಸಾಹೇಬ್ ನೀಡಿದ ಹೇಳಿಕೆ ಮತ್ತು ಮಹಾಡ್ ಮತ್ತು ಕಾಲಾರಾಮ್ ದೇವಾಲಯದ ಪ್ರತಿಭಟನೆಗಳ ಬಗ್ಗೆ RSS ಏನು ಹೇಳುತ್ತದೆ ಎಂಬುದನ್ನು ನೋಡಬೇಕು.

ಏಕೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರಿಯೂ ‘ಹಿಂದೂ ಸಂಘಟನೆ’. ಅಂತಹ ಪರಿಸ್ಥಿತಿಯಲ್ಲಿ, ಯೆಯೋಲಾದಲ್ಲಿ ಡಾ. ಅಂಬೇಡ್ಕರ್ ನೀಡಿದ ಹೇಳಿಕೆಯು ಈ ವ್ಯವಸ್ಥೆಗೆ ವಿರುದ್ಧವಾಗಿತ್ತು.

‘ರಾಷ್ಟ್ರೀಯ ಸ್ವಯಂಸೇವಕ ಸಂಘವು ‘ಹಿಂದೂ ಸಂಘಟನೆ’ ಎಂಬ ಅಸ್ತ್ರವನ್ನು ಆರಿಸಿಕೊಂಡು ‘ಅಂತಿಮ ವೈಭವ’ವನ್ನು ಗುರಿಯಾಗಿಸಿಕೊಂಡಿದೆ’ ಎನ್ನುತ್ತಾರೆ ಡಾ.ರಮೇಶ್ ಪಾಂಡವ್. ಆದರೆ ಮಹಾಡ್ ಸತ್ಯಾಗ್ರಹ ಚಳವಳಿಯಲ್ಲಿ ಬಾಬಾ ಸಾಹೇಬರು ಈ ಸಭೆಯನ್ನು ಹಿಂದೂಗಳ ಒಗ್ಗಟ್ಟಿಗಾಗಿ ಕರೆಯಲಾಗಿದೆ ಎಂದು ಹೇಳುತ್ತಾರೆ.

“ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು 1925ರಲ್ಲಿ ಸಂಘವನ್ನು ಸ್ಥಾಪಿಸಿದರು. ಸಂಘಟನೆಯ ಹೆಸರನ್ನು ನಿರ್ಧರಿಸಲು 1927ರವರೆಗೆ ಸಮಯ ಹಿಡಿಯಿತು. ಹೆಡ್ಗೆವಾರ್ ಅವರು ಹಿಂದೂ ಸಮಾಜವನ್ನು ಸುಧಾರಿಸಲು ಪ್ರಾರಂಭಿಸಿದರು ಮತ್ತು ಅದೇ ಸಮಯದಲ್ಲಿ ಬಾಬಾ ಸಾಹೇಬರು ಹಿಂದೂ ಸಂಘಟನೆಯನ್ನು ಸ್ಥಾಪಿಸಿದರು. ಆದರೆ ಅವರು ಇದು ಕೇವಲ ಕಾಕತಾಳೀಯವಲ್ಲ” ಎಂದೂ ಪ್ರೊ. ಪಾಂಡವ್ ಹೇಳುತ್ತಾರೆ.

“ಬಾಬಾ ಸಾಹೇಬರು 1935ರವರೆಗೆ ಮಹಾಡ್ ಸರೋವರದ ನೀರಿಗಾಗಿ ಸತ್ಯಾಗ್ರಹ ನಡೆಸಿದರು, ಹಾಗೆಯೇ ಕಾಲಾರಾಮ್ ದೇವಾಲಯದ ಪ್ರವೇಶಕ್ಕಾಗಿ ಸತ್ಯಾಗ್ರಹ ನಡೆಸಿದರು. ಇದರೊಂದಿಗೆ, ಅವರು ಹಿಂದೂ ಧರ್ಮದ ಮೇಲೆ ತಮ್ಮ ಹಕ್ಕನ್ನು ವ್ಯಕ್ತಪಡಿಸಿದರು. ಇದೆಲ್ಲದರ ಹೊರತಾಗಿಯೂ, 1935ರ ಹೊತ್ತಿಗೆ,  ಹಿಂದೂ ಸಮಾಜದ ನಾಯಕರಿಗೆ ತಮ್ಮ ಕೆಲಸ ಅರ್ಥವಾಗುತ್ತಿಲ್ಲ ಎಂದು ಬಾಬಾ ಸಾಹೇಬ್ ಅರಿತುಕೊಂಡರು. ಹೀಗಾಗಿ ಅವರು ಕೊನೆಗೆ ನಾನು ಒಬ್ಬ ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಘೋಷಿಸಿದರು.”

ಆದರೆ ಡಾ.ರಾವ್ ಸಾಹೇಬ್ ಕಸ್ಬೆಯವರ ಪ್ರಕಾರ, ಡಾ.ಅಂಬೇಡ್ಕರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಬಗ್ಗೆ ಎಂದಿಗೂ ಪ್ರೀತಿಯನ್ನು ತೋರಿಸಿಲ್ಲ ಮತ್ತು ಅದರ ಬಗ್ಗೆ ಯಾವುದೇ ಉಲ್ಲೇಖ ಸಿಗುವುದಿಲ್ಲ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿ ನಾಗ್ಪುರದಲ್ಲಿತ್ತು, ಮತ್ತು ಅಲ್ಲಿಂದಲೇ ಬಾಬಾ ಸಾಹೇಬ್ ಧಮ್ಮದೀಕ್ಷಾ ಕಾರ್ಯಕ್ರಮವನ್ನು ಪ್ರಾರಂಭಿಸಿ ತನ್ನ ಲಕ್ಷಾಂತರ ಅನುಯಾಯಿಗಳನ್ನು ಮತಾಂತರಿಸಿದರು.

‘ಬಾಬಾ ಸಾಹೇಬ್ ಅವರ ಅಂತಿಮ ಗುರಿ ಮತಾಂತರವಲ್ಲ, ಜಾತಿ ನಿರ್ಮೂಲನೆ’

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1935ರಲ್ಲಿ ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದರು ಮತ್ತು 1956ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಡಾ. ಪಾಂಡವ ಹೇಳುತ್ತಾರೆ, “ಬಾಬಾ ಸಾಹೇಬ್ ಅವರು ಹತಾಶೆಯಿಂದ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದಾಗ, ಅದರ ಹಿಂದೆ ಒಂದು ಬಲವಾದ ಕಾರಣವಿತ್ತು, ಒಂದು ಯೋಜನೆಯಿತ್ತು.”

ಅದೇ ಸಮಯದಲ್ಲಿ, ಬಾಬಾ ಸಾಹೇಬ್ ಹಿಂದೂ ಧರ್ಮವನ್ನು ಎರಡು ರೀತಿಯಲ್ಲಿ ವಿಶ್ಲೇಷಿಸಲು ಬಯಸಿದ್ದರು ಎಂದು ಡಾ. ಉಮೇಶ್ ಬಾಗ್ಡೆ ಹೇಳುತ್ತಾರೆ. ಒಂದು ಉಪಯುಕ್ತತೆ ಮತ್ತು ಇನ್ನೊಂದು ನ್ಯಾಯ. ನ್ಯಾಯದ ಪರಿಕಲ್ಪನೆಯಡಿಯಲ್ಲಿ, ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ನಿರೀಕ್ಷಿಸಿದ್ದರು.

ಮತಾಂತರಕ್ಕೆ ಮೊದಲು ಬಾಬಾ ಸಾಹೇಬ್ ಅವರ ಚಲನವಲನಗಳು, ಅನುಭವಗಳು ಮತ್ತು ಭಾಷಣಗಳನ್ನು ನೋಡಿದರೆ, ಹಿಂದೂ ಧರ್ಮವು ಅವರ ಎರಡು ಮಾನದಂಡಗಳಾದ ಉಪಯುಕ್ತತೆ ಮತ್ತು ನ್ಯಾಯವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು  ಹಿಂದೂ ಧರ್ಮದ ಒಗಟುಗಳಲ್ಲಿ ಹಿಂದೂ ಧರ್ಮದ ಸಾಮಾಜಿಕ ರಚನೆಯ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ.

ಡಾ. ಬಾಗ್ಡೆ ಹೇಳುತ್ತಾರೆ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಎಲ್ಲಾ ಸಾಮಾಜಿಕ ಚಳುವಳಿಗಳ ಅಂತಿಮ ಗುರಿ ಮತಾಂತರವಲ್ಲ, ಅವುಗಳ ಮುಖ್ಯ ಗುರಿ ಜಾತಿ ವಿನಾಶ ಮತ್ತು ಇದು ಹಿಂದೂ ಧರ್ಮದಲ್ಲಿ ಸಾಧ್ಯವಾಗಲಿಲ್ಲ, ನಂತರ ಅವರು ಇತರ ಧರ್ಮಗಳೊಂದಿಗೆ ಪ್ರಯೋಗ ಮಾಡಲು ಪ್ರಾರಂಭಿಸಿದರು. ನಾವು ಇದನ್ನು ಖಚಿತವಾಗಿ ಹೇಳಬಹುದು ಏಕೆಂದರೆ, ಅವರು ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳನ್ನು ಅನ್ವೇಷಿಸಲು ಪ್ರಾರಂಭಿಸಿದಾಗ, ಅವರು ಮೊದಲು ಸಿಖ್ ಧರ್ಮವನ್ನು ಅಧ್ಯಯನ ಮಾಡಲು ತಂಡವನ್ನು ಕಳುಹಿಸಿದರು.

“ಪಂಜಾಬಿನಲ್ಲಿ ಬಾಬಾ ಸಾಹೇಬರಿಗೆ ಮಂಗುರಾಮ್ ಎಂಬ ಸಹಚರನಿದ್ದರು. ಅಲ್ಲಿನ ಅಧ್ಯಯನವು ಸಿಖ್ಖರಲ್ಲಿ ಜಾತಿವಾದವು ಪ್ರಚಲಿತದಲ್ಲಿದೆ ಎಂದು ತೋರಿಸಿತು, ಆದ್ದರಿಂದ ಅವರು ಆ ಧರ್ಮವನ್ನು ಸಹ ತಿರಸ್ಕರಿಸಿದರು. ಹೀಗೆ ಅಧ್ಯಯನ ಮಾಡುವಾಗ, ಅವರು ಅಂತಿಮವಾಗಿ ಬೌದ್ಧ ಧರ್ಮವನ್ನು ಆರಿಸಿಕೊಂಡರು. ಹಿಂದೂ ಧರ್ಮದ ವಿಷಯದಲ್ಲಿ ಅವರ ಮುಖ್ಯ ಆಕ್ಷೇಪಣೆ ಜಾತಿಯ ಬಗ್ಗೆ ಇತ್ತು ಮತ್ತು ಅವರ ಅಂತಿಮ ಗುರಿ ಜಾತಿಯ ಅಂತ್ಯವಾಗಿತ್ತು ಎಂದು ನಾವು ಅರ್ಥಮಾಡಿಕೊಳ್ಳಬೇಕು.  ಅದನ್ನು ಹಿಂದೂ ಧರ್ಮದಲ್ಲಿ ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಸಹ.”

ಬಾಬಾ ಸಾಹೇಬರಿಗೆ RSS ಸಂರಚನೆ ಮತ್ತು ಹಿಂದೂ ಧರ್ಮದ ಬಗ್ಗೆ ಯಾವುದೇ ಅಸಮಾಧಾನವಿರಲಿಲ್ಲ ಎಂದು ಹೇಳಲಾಗುತ್ತದೆಯಾದರೂ, ಅಂತಹ ಅಸಮಾಧಾನದಿಂದಾಗಿಯೇ ಅವರು ಇಸ್ಲಾಂಗೆ ಮತಾಂತರಗೊಂಡರು ಎನ್ನುವುದು ಹಿರಿಯ ವಿದ್ವಾಂಸರಾದ ಡಾ. ರಾವ್ ಸಾಹೇಬ್ ಕಸ್ಬೆ ಮತ್ತು ಡಾ.ಉಮೇಶ್ ಬಾಗ್ಡೆ ಅವರ ನಿಲುವು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಆರ್‌ಎಸ್‌ಎಸ್ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತದ ನಡುವೆ ಮೂಲಭೂತ ವ್ಯತ್ಯಾಸವಿತ್ತು, ಇವೆರಡೂ ವಿಭಿನ್ನ ಅಂತಿಮ ಗುರಿಗಳನ್ನು ಹೊಂದಿದ್ದವು.

ಬಾಬಾ ಸಾಹೇಬರು ಸಂಘದ ಶಾಖೆಗೆ ಹೋಗಿದ್ದರೇ?

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘ ಸ್ವಯಂಸೇವಕರು ಯಾವಾಗಲೂ ಹೇಳಿಕೊಳ್ಳುತ್ತಾರೆ.

ಬಿಬಿಸಿ ಮರಾಠಿ ಜೊತೆಗಿನ ಸಂಭಾಷಣೆಯಲ್ಲಿ ರಮೇಶ್ ಪಾಂಡವ್ ಕೂಡ ಈ ಹೇಳಿಕೆಯನ್ನು ಉಲ್ಲೇಖಿಸಿ “1939ರ ಮೇ 12ರಂದು ಪುಣೆಯ ಶಿಬಿರವೊಂದರಲ್ಲಿ ಸಂಘ ಶಿಕ್ಷಾ ವರ್ಗವನ್ನು ನಡೆಸಲಾಯಿತು. ಬಾಬಾ ಸಾಹೇಬರು ಅಲ್ಲಿನ ಬೇಸಿಗೆ ತರಬೇತಿ ತರಗತಿಗೆ ಭೇಟಿ ನೀಡಿದರು. ಮಾಜಿ ಸಂಸದ ಬಾಳಾಸಾಹೇಬ್ ಸಾಲುಂಖೆ ಅವರ ‘ಆಮಚ್ ಸಾಯೇಬ್’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.” ಎಂದಿದ್ದಾರೆ.

ಈ ಪುಸ್ತಕದ 25ನೇ ಪುಟದಲ್ಲಿ ಹೀಗೆ  ಬರೆಯಲಾಗಿದೆ: “ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾ. ಹೆಡ್ಗೆವಾರ್ ಅವರು ಪುಣೆಯಲ್ಲಿ ಸಂಭಾಷಣೆ ನಡೆಸಿದರು. ಈ ಸಂಭಾಷಣೆ ಭಾವುಸಾಹೇಬ್ ಗಡ್ಕರಿ ಅವರ ಬಂಗಲೆಯಲ್ಲಿ ನಡೆಯಿತು. ನಂತರ ಭಾವುಸಾಹೇಬ್ ಅಭಯಂಕರ್ ಮತ್ತು ಶ್ರೀ ಬಾಳಾಸಾಹೇಬ್ ಸಾಳುಂಕೆ ಅವರು ಭಾವೆ ಶಾಲೆಯಿಂದ ಸ್ವಯಂಸೇವಕರನ್ನು ಬೇಸಿಗೆ ಶಿಬಿರದ ಪ್ರವಾಸಕ್ಕೆ ಕರೆದೊಯ್ದರು. ಬಾಬಾ ಸಾಹೇಬರು ಅಲ್ಲಿ ಮಿಲಿಟರಿ ಶಿಸ್ತು ಮತ್ತು ಸಂಘಟನೆಯ ಬಗ್ಗೆ ಭಾಷಣ ಮಾಡಿದರು.”

ಆದಾಗ್ಯೂ, ಅದರ ಬಗ್ಗೆ ಹೆಚ್ಚಿನ ವಿವರಗಳು ಈ ಪುಸ್ತಕದಲ್ಲಿ ಅಥವಾ ಬೇರೆಡೆ ಕಂಡುಬಂದಿಲ್ಲ.

ಈ ವಿಚಾರದಲ್ಲಿ ಡಾ.ರಾವ್‌ ಸಾಹೇಬ್ ಕಸ್ಬೆ, “ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಎಲ್ಲಾ ಬರಹಗಳನ್ನು ಓದಿದ್ದೇನೆ. ಅವರ ಯಾವುದೇ ಪುಸ್ತಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ತಾನು ಸಂಘದ ಶಾಖೆಗೆ ಹೋಗಿದ್ದಾಗಿ ಉಲ್ಲೇಖಿಸಿಲ್ಲ, ಈ ಪ್ರಚಾರ ಸಂಪೂರ್ಣವಾಗಿ ಸುಳ್ಳು” ಎಂದು ಹೇಳಿದರು.

“ಗಾಂಧೀಜಿ ಒಮ್ಮೆ ಹೋಗಿದ್ದರು ಎಂಬುದು ನಿಜ, ಆದರೆ ಡಾ.ಅಂಬೇಡ್ಕರ್ ಎಂದಿಗೂ ಸಂಘ ಶಾಖೆಗೆ ಹೋಗಿರಲಿಲ್ಲ” ಎಂದು ಕಸ್ಬೆ ಹೇಳುತ್ತಾರೆ.

ಮೂಲ ಲೇಖನ: ಬಿಬಿಸಿ

You cannot copy content of this page

Exit mobile version