Home ಅಂಕಣ ನೀರಿನ ಬಾಟಲಿಯ ಮುಚ್ಚಳಗಳು ಏಕೆ ನೀಲಿ ಬಣ್ಣದ್ದಾಗಿರುತ್ತವೆ? ಇಲ್ಲಿದೆ ಮಾಹಿತಿ

ನೀರಿನ ಬಾಟಲಿಯ ಮುಚ್ಚಳಗಳು ಏಕೆ ನೀಲಿ ಬಣ್ಣದ್ದಾಗಿರುತ್ತವೆ? ಇಲ್ಲಿದೆ ಮಾಹಿತಿ

0

ಇತ್ತೀಚಿನ ದಿನಗಳಲ್ಲಿ ನೀರಿನ ಬಾಟಲಿಗಳ ಬಳಕೆ ಹೆಚ್ಚಾಗಿದೆ. ಪ್ರವಾಸಗಳು ಮತ್ತು ಸಭೆಗಳ ಸಮಯದಲ್ಲಿ ನಾವು ನೀರಿನ ಬಾಟಲಿಗಳನ್ನು ಖರೀದಿಸುತ್ತೇವೆ. ಆದರೆ ನಾವು ನೋಡುವ ನೀರಿನ ಬಾಟಲಿಗಳಲ್ಲಿ ಹೆಚ್ಚಿನವು ಕಡು ನೀಲಿ ಮುಚ್ಚಳಗಳನ್ನು ಹೊಂದಿರುತ್ತವೆ.

ಹಾಗಿದ್ದರೆ ಬಹುತೇಕ ನೀರಿನ ಬಾಟಲಿಗಳು ಈ ನೀಲಿ ಬಣ್ಣದ ಕ್ಯಾಪುಗಳನ್ನೇ ಹೊಂದಿರುವುದಕ್ಕೆ ಕಾರಣವೇನು? ಅದೇ ಬಣ್ಣವನ್ನು ಬಳಸಲು ನಿರ್ದಿಷ್ಟ ಕಾರಣವೇನಾದರೂ ಇದೆಯೇ? ಇಂತಹ ಕುತೂಹಲ ಎಂದಾದರೂ ನಿಮ್ಮನ್ನು ಕಾಡಿದೆಯೇ? ಹೌದಾದಲ್ಲಿ ಬನ್ನಿ ಅದಕ್ಕೆ ಕಾರಣ ತಿಳಿಯೋಣ.

ಒಂದು ನೀರಿನ ಬಾಟಲಿಗೆ ನೀಲಿ ಕ್ಯಾಪ್ ಇದ್ದರೆ, ಅದು ಖನಿಜಯುಕ್ತ ನೀರು ಎಂದು ಅರ್ಥ. ಈ ನೀಲಿ ಕ್ಯಾಪ್ ವಾಟರ್ ಬಾಟಲ್‌ಗಳಲ್ಲಿರುವ ನೀರನ್ನು ಮಿನರಲ್ ವಾಟರ್ ಎಂದು ಹೇಳಲಾಗುತ್ತದೆ.

ಇನ್ನೂ ಕೆಲವು ಬಾಟಲಿಗಳಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಮುಚ್ಚಳಗಳಿರುತ್ತವೆ. ಹಸಿರು ಬಣ್ಣದ ಮುಚ್ಚಳದ ಅರ್ಥ ಬಾಟಲ್ ನೀರಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಎಂದು. ಕೆಲವು ನೀರಿನ ಬಾಟಲ್ ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್‌ಗಳಂತಹ ರುಚಿಗಳನ್ನು ಸೇರಿಸುತ್ತವೆ. ಅಂತಹ ಬಾಟಲಿಗಳ ಮೇಲಿನ ಕವರಿನ ಮೇಲಿನ ಅದರಲ್ಲಿ ಸೇರಿಸಿರುವ ರುಚಿಕಾರಕಗಳ ಹೆಸರನ್ನು ನೀವು ಓದಿ ನೋಡಬಹುದು.

ಕೆಲವು ನೀರಿನ ಬಾಟಲಿಗಳು ಕೆಂಪು, ಹಳದಿ, ಕಪ್ಪು ಮತ್ತು ಗುಲಾಬಿ ಬಣ್ಣದ ಮುಚ್ಚಳಗಳನ್ನು ಹೊಂದಿರುತ್ತವೆ. ಕೆಂಪು ಬಣ್ಣದ ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಕಾರ್ಬೊನೇಟೆಡ್ ನೀರನ್ನು ಹೊಂದಿರುತ್ತವೆ ಎಂಬುದನ್ನು ನೆನಪಿಡಿ. ಹಳದಿ ಮುಚ್ಚಳದ ನೀರಿನ ಬಾಟಲಿಯಲ್ಲಿ ವಿಟಮಿನ್ಸ್ ಮತ್ತು ಎಲೆಕ್ಟ್ರೋಲೈಟ್ಸ್‌ ಸೇರಿಸಲಾಗಿರುತ್ತದೆ. ಮುಖ್ಯವಾಗಿ ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಇರುವ ಕಾರಣವೆಂದರೆ ಅವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುವುದು.

ಕೆಲವು ಬಾಟಲಿಗಳಿಗೆ ಕಪ್ಪು ಬಣ್ಣದ ಕ್ಯಾಪ್ ಇರುತ್ತದೆ, ಈ ಬಾಟಲಿಯಲ್ಲಿ ಕ್ಷಾರೀಯ ನೀರು ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಕಪ್ಪು ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಅಪರೂಪ. ಇವುಗಳನ್ನು ಪ್ರೀಮಿಯಂ ನೀರಿನ ಉತ್ಪನ್ನಗಳಿಗೆ ಮಾತ್ರ ಬಳಸಲಾಗುತ್ತದೆ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ.

ಇನ್ನುಳಿದಂತೆ ಕೆಲವು ಬಾಟಲಿಗಳು ಪಿಂಕ್‌ (ಗುಲಾಬಿ) ಕಲರ್‌ ಕ್ಯಾಪ್‌ ಹೊಂದಿರುತ್ತವೆ. ಇಂತಹ ಬಾಟಲಿಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಚಾರಿಟಿಗಳು ಬಳಸುತ್ತವೆ.

You cannot copy content of this page

Exit mobile version