ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು (Bengaluru ) ಮಂದಿಗೆ ಜಿಬಿಎ (GBA) ಬಿಗ್ ಶಾಕ್ ಕೊಟ್ಟಿದೆ. ರಸ್ತೆಗಳಲ್ಲಿ ತಿಂಗಳಾನುಗಟ್ಟಲೆ ವಾಹನ ನಿಲ್ಲಿಸಿದರೆ ಭಾರಿ ದಂಡ (Fine) ಹಾಕಲು ತೀರ್ಮಾನ ಮಾಡಿದೆ.
ವೆಹಿಕಲ್ ಹರಾಜು ಹಾಕೋದಕ್ಕೂ ಕೂಡ ಜಿಬಿಎ ನಿರ್ಧಾರ ಮಾಡಿದ್ದು. ಮುಂದಿನ ತಿಂಗಳಿಂದ ಬಿಗಿ ನಿಯಮಗಳು ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಎಲ್ಲಾ ರೂಪುರೇಷೆಗಳು ಸಜ್ಜಾಗಿದೆ. ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರೋ ಕಾರಣ ಜಿಬಿಎ ಈ ಕೆಲಸಕ್ಕೆ ಮುಂದಾಗಿದೆ. ಬೀದಿಬದಿ, ಮನೆ ಮುಂಭಾಗ ಫುಟ್‌ಪಾತ್‌ಗಳಲ್ಲಿ ನಿಲ್ಲಿಸಿರೋ ವೆಹಿಕಲ್‌ಗಳನ್ನು ಟೋಯಿಂಗ್ ಮಾಡಿ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ಹಾಕೋದಷ್ಟೇ ಅಲ್ಲ ಗಾಡಿಗಳನ್ನು ಹರಾಜು ಹಾಕೋಕೆ ಸಹ ಜಿಬಿಎ ಮುಂದಾಗಿದೆ.
ವಾಹನ ದಟ್ಟಣೆ ಹೆಚ್ಚಾಗಿದೆ. ಫುಟ್ ಪಾತ್ ನಲ್ಲಿ ಪಾದಾಚಾರಿಗಳು ಓಡಾಡೋದೇ ಕಷ್ಟಸಾಧ್ಯವಾಗಿದೆ. ಹೀಗಾಗಿ ಜಿಬಿಎ ಸಾರ್ವಜನಿಕರ ಹಿತಾಸಕ್ತಿಯಿಂದ ಈ ಕಾರ್ಯಕ್ಕೆ ಮುಂದಾಗಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳಲ್ಲೂ ಈ ನಿಯಮಗಳು ಜಾರಿಗೆ ಬರಲಿವೆ.ಪ್ರತಿ ಪಾಲಿಕೆಗೂ ಟೋಯಿಂಗ್ ವೆಹಿಕಲ್‌ಗಳನ್ನ ಖರೀದಿ ಮಾಡಲು ತೀರ್ಮಾನ ಮಾಡಲಾಗಿದ್ದು, ಟೋಯಿಂಗ್ ವೆಹಿಕಲ್‌ಗಳನ್ನ ಖರೀದಿ ಮಾಡಿ ಟೆಂಡರ್ ಅನ್ನು ಮುಂದಿನ ತಿಂಗಳ ಒಳಗಡೆ ಮುಕ್ತಾಯ ಮಾಡಿ ಟೋಯಿಂಗ್ ಶುರು ಮಾಡೋ ಮುನ್ಸೂಚನೆಯನ್ನ ಜಿಬಿಎ ನೀಡಿದೆ.
