Home ಅಪರಾಧ ರಾಜಧಾನಿಯಲ್ಲಿ ಎಟಿಎಂ ವಾಹನ ದರೋಡೆ 7 ಕೋಟಿ ಏಗರಿಸಿ ಪರಾರಿಯಾದ ಖದೀಮರು

ರಾಜಧಾನಿಯಲ್ಲಿ ಎಟಿಎಂ ವಾಹನ ದರೋಡೆ 7 ಕೋಟಿ ಏಗರಿಸಿ ಪರಾರಿಯಾದ ಖದೀಮರು

0

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ (Bengaluru) ಹಾಡಹಗಲೇ ದೊಡ್ಡ ದರೋಡೆಯೊಂದು ನಡೆದಿದೆ. ಜಯದೇವ ಬಳಿಯ ಡೈರಿ ಸರ್ಕಲ್​​ನಲ್ಲಿ ಎಟಿಎಂಗೆ (ATM Van) ಹಣ ತುಂಬುವ ವಾಹನವನ್ನು ಅಡ್ಡಗಟ್ಟಿದ ದರೋಡೆಕೋರರು 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿದ್ದಾರೆ.HDFC ಬ್ಯಾಂಕ್​ನಿಂದ ಹಣ ತರುತ್ತಿದ್ದ CMS ವಾಹನಕ್ಕೆ ಇನೋವಾದಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿದ್ದಾರೆ. CMS ವಾಹನದಲ್ಲಿದ್ದ 7 ಕೋಟಿ 11 ಲಕ್ಷ ದರೋಡೆ ಮಾಡಿದ್ದಾರೆ. 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. KA 03 8052 ನಂಬರಿನ ಇನ್ನೋವಾ ಕಾರು ಮಾಲೀಕರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

ಸೆಂಟ್ರಲ್ ಆಫೀಸರ್ಸ್ ಎಂದ ಖದೀಮರು

ಸಿಎಂಎಸ್ ವಾಹನ ಎಟಿಎಂಗೆ ಹಣ ತುಂಬಲು ಹೋಗುತ್ತಿತ್ತು. ಆಗ KA 03 8052 ನಂಬರಿನ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರು, ನಾವು ಸೆಂಟ್ರಲ್​ ಟ್ಯಾಕ್ಸ್​ ಆಫೀಸರ್ಸ್ ಎಂದು ಹೇಳಿದ್ದಾರೆ. ಅವ್ರ ವೇಷಭೂಷಣ ನೋಡಿದ ಸಿಎಂಎಸ್ ಸಿಬ್ಬಂದಿ, ಒಂದು ಕ್ಷಣ ಮರುಳಾಗಿದ್ದಾರೆ. ತಕ್ಷಣವೇ ಎಟಿಎಂಗೆ ಹಣ ತುಂಬೋದನ್ನು ನಿಲ್ಲಿಸಿದ್ದಾರೆ.ಹಣದ ಸಮೇತ ಸಿಬ್ಬಂದಿಯನ್ನು ತಮ್ಮ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡ ರಾಬರ್ಸ್​, ಡಾಕ್ಯುಮೆಂಟ್ ವೆರಿಫೈ ಮಾಡಬೇಕು ಎಂದಿದ್ದಾರೆ. ಡೈರಿ ಸರ್ಕಲ್ ಬಳಿ ಕರೆದೋಯ್ದು ಸಿಎಂಎಸ್ ಸಿಬ್ಬಂದಿಯನ್ನು ಕೆಳಗಿಳಿಸಿ ಹಣದ ಸಮೇತ ರಾಬರ್ಸ್ ಎಸ್ಕೇಪ್ ಆಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಲೂಟಿ ಕೇಸ್‌ನ ತನಿಖೆ ಚುರುಕಾರಿದ್ದು, CMS ಚಾಲಕ, ಸಿಬ್ಬಂದಿ ಮೇಲೆಯೇ ಅನುಮಾನ ಬರುತ್ತಿದೆ. ಸಿದ್ದಾಪುರ-ಆಡುಗೋಡಿ ಪೊಲೀಸರು ಚಾಲಕನ ಪೂರ್ವಾಪರ ವಿಚಾರಣೆ ಮಾಡ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ‌ ಪರಿಶೀಲನೆ ಆರಂಭಿಸಿದ್ದಾರೆ.

ತಮಿಳುನಾಡಿಗೆ ಹೋಯ್ತು ಕಾರ್

7 ಕೋಟಿ 11 ಲಕ್ಷ ಹಣ ದೋಚಿದ ಕಾರ್ ಬೆಂಗಳೂರಿನಿಂದ ಹೊರ ಹೋಗಿದೆ. ಅಷ್ಟೂ ಹಣ ತುಂಬಿಕೊಂಡಿರೋ ಇನ್ನೋವಾ ಕಾರ್ ಹೊಸೂರು ಮೂಲಕ ತಮಿಳು ನಾಡಿನತ್ತ ಹೋಗಿದೆ. ಆದ್ದರಿಂದ ಪೊಲೀಸರು ತಮಿಳುನಾಡಿಗೂ ಹೋಗುವ ಸಾಧ್ಯತೆ ಇದೆ.

You cannot copy content of this page

Exit mobile version