ಹರಿಯಾಣ: ಸಂಭ್ರಮದಲ್ಲಿ ಕಾಂಗ್ರೆಸ್, ಪ್ರಧಾನಿ ಮೋದಿಗೂ ಜಲೇಬಿ ಕಳುಹಿಸುತ್ತೇವೆ: ಪವನ್ ಖೇಡಾ

ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಬರಲಾರಂಭಿಸಿವೆ. ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಇದಾದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಲಡ್ಡು ಮತ್ತು ಜಿಲೇಬಿ ಹಂಚಲಾಗುತ್ತಿದೆ.

ಇದೇ ವೇಳೆ, ನಾವು ಪ್ರಧಾನಿ ಮೋದಿಯವರಿಗೂ ಜಲೇಬಿಯನ್ನು ಕಳುಹಿಸಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇಡಾ ಹೇಳಿದರು, ಇದು ಇದೀಗ ಆರಂಭಿಕ ಟ್ರೆಂಡ್‌ ಮಾತ್ರ, ಇಂದು ಇಡೀ ದಿನ ಜಿಲೇಬಿ ಮತ್ತು ಲಡ್ಡುಗಳನ್ನು ತಿನ್ನುವ ವಿಶ್ವಾಸವಿದೆ. ನಾಯಬ್ ಸಿಂಗ್ ಸೈನಿ ಅವರಿಗೂ ಜಲೇಬಿಯನ್ನು ಕಳುಹಿಸುವುದಾಗಿ ಹೇಳಿದರು. ಜಮ್ಮು-ಕಾಶ್ಮೀರ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.

ಬೆಳಗ್ಗೆ 9 ಗಂಟೆಯವರೆಗಿನ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ 67 ಸ್ಥಾನಗಳೊಂದಿಗೆ ಬಹುಮತ ಪಡೆದಿದೆ. ಅಕ್ಟೋಬರ್ 5ರಂದು ಹರಿಯಾಣದಲ್ಲಿ ಒಂದೇ ಹಂತದಲ್ಲಿ 90 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರ ನಂತರ, ಅಕ್ಟೋಬರ್ 6 ರಂದು ಎಕ್ಸಿಟ್ ಪೋಲ್ಗಳು ಬಹಿರಂಗಗೊಂಡವು. ಎಕ್ಸಿಟ್ ಪೋಲ್ ನಲ್ಲೂ ಕಾಂಗ್ರೆಸ್ ಬಹುಮತ ಪಡೆದಿದೆ. ಕಾಂಗ್ರೆಸ್ ಗೆದ್ದರೆ, 10 ವರ್ಷಗಳ ವನವಾಸದ ನಂತರ ಕಾಂಗ್ರೆಸ್ ಹರಿಯಾಣಕ್ಕೆ ಮರಳುತ್ತದೆ.

ಈ ಬಾರಿ ಹರ್ಯಾಣ ಚುನಾವಣೆಗೆ ಯಾರನ್ನೂ ಸಿಎಂ ಎಂದು ಕಾಂಗ್ರೆಸ್ ಘೋಷಿಸಿಲ್ಲ, ಈ ಹಿನ್ನೆಲೆಯಲ್ಲಿ ಗೆಲುವಿನ ನಂತರ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಪೈಪೋಟಿ ಏರ್ಪಟ್ಟಿದೆ. ಪಕ್ಷದಲ್ಲಿ ಭೂಪೇಂದ್ರ ಹೂಡಾ, ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಸಿಎಂ ಸ್ಥಾನದ ರೇಸ್‌ನಲ್ಲಿದ್ದಾರೆ. ಮೂವರೂ ತಮ್ಮ ಹಕ್ಕು ಸಾಧಿಸಲು ರಾಜಕೀಯ ಫೀಲ್ಡಿಂಗ್ ಮಾಡುತ್ತಿದ್ದಾರೆ.

10 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಯೇ?

ಒಂದೆಡೆ, ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತಿದೆ. ಮತ್ತೊಂದೆಡೆ ಬಿಜೆಪಿ ಹಿಂದುಳಿದಿದ್ದು, 21 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಯ ಮಾಜಿ ಸಿಎಂ ನಯಾಬ್ ಸೈನಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ ನಾವು ಸಂಪೂರ್ಣ ಪ್ರಾಮಾಣಿಕತೆಯಿಂದ ಹರಿಯಾಣದ ಜನರಿಗೆ ಸೇವೆ ಸಲ್ಲಿಸಿದ್ದೇವೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು