ಲಕ್ನೋ: ಶನಿವಾರ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಆಕೆಯ ಜತೆಗಿದ್ದ ಮತ್ತೊಬ್ಬರು ಬಿಜೆಪಿ ಕಾರ್ಯಕರ್ತರು ತನ್ನನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರ ಹೊಸದಾಗಿ ಬಿಡುಗಡೆಯಾದ ಮೀರತ್-ಲಖನೌ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ತಾನಿಯಾ ಎಂಬ ಯುವತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತಾನು ಮತ್ತು ತನ್ನ ಸಹೋದ್ಯೋಗಿ ಆಹಾರಕ್ಕಾಗಿ ಮುಂದಿನ ಕಂಪಾರ್ಟ್‌ಮೆಂಟ್‌ಗೆ ಹೋದಾಗ, ಪಕ್ಷದ ಕಾರ್ಯಕರ್ತರು ‘ಇದು ಬಿಜೆಪಿ ಕ್ಯಾಬಿನ್’ ಎಂದು ಅವರನ್ನು ತಡೆದರು ಎಂದು ಅವರು ಆರೋಪಿಸಿದ್ದಾರೆ. ಅವರು ತಮ್ಮ ಆಸನಗಳಿಗೆ ಹಿಂತಿರುಗಲು ಕಂಪಾರ್ಟ್‌ಮೆಂಟ್ ಮೂಲಕ ಹಿಂತಿರುಗಲು ಪ್ರಯತ್ನಿಸಿದಾಗ, ಬಿಜೆಪಿ ಕಾರ್ಯಕರ್ತರು ಮತ್ತೆ ಅವರನ್ನು ತಡೆದು, ಅನುಚಿತವಾಗಿ ವರ್ತಿಸಿದರು ಮತ್ತು ತಳ್ಳಿ ಕಿರುಕುಳ ನೀಡಿದರು ಎಂದು ಅವರು ಆರೋಪಿಸಿದ್ದಾರೆ.
ತಾನು ಕೂಡಾ ಬಿಜೆಪಿಯವಳೇ ಆಗಿದ್ದು, ಇಂತಹವರಿಂದ ಬಿಜೆಪಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ ಯುವತಿಯ ಜೊತೆಗಿದ್ದ ವ್ಯಕ್ತಿ ಕೂಡ ಮಾಧ್ಯಮಗಳ ಮುಂದೆ ಬಿಜೆಪಿ ಕಾರ್ಯಕರ್ತರು ತನ್ನನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಬಂದು ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಹಾಗೂ ಯುವಕನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಘಟನೆಯ ವೀಡಿಯೊ ತುಣುಕನ್ನು ಹಂಚಿಕೊಂಡಿದೆ. ಈ ವೀಡಿಯೋ ಬಿಜೆಪಿಯ ನಡವಳಿಕೆ ಮತ್ತು ಚಾರಿತ್ರ್ಯದ ಸಾಕ್ಷಿಯಾಗಿದೆ ಎಂದು ಅದು ಬಿಜೆಪಿಯನ್ನು ಟೀಕಿಸಿದೆ.