ಹಾಸನ : ಜಿಲ್ಲೆಯಲ್ಲಿ ಹೃದಯಾಘಾತದಿಂದ ಜನರು ಸಾವನ್ನಪ್ಪುವ ಪ್ರಕರಣಗಳು ಮುಂದುವರಿದಿದ್ದು, ಭಗತ್ ಸಿಂಗ್ ರಸ್ತೆಯಲ್ಲಿ ಕಳೆದ ರಾತ್ರಿ ಗೃಹಿಣಿಯೊಬ್ಬರು ಮೃತಪಟ್ಟಿದ್ದಾರೆ. ನಗರದ ದಾಸರಕೊಪ್ಪಲಿನಲ್ಲಿ ವಾಸವಾಗಿದ್ದ ಬಿ.ಎನ್.ವಿಮಲಾ (55) ಎಂಬ ಮಹಿಳೆ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಕಲೇಶಪುರ ತೋಟದಗದ್ದೆಯ ಕುಮಾರ್ ಎಂಬುವವರ ಧರ್ಮಪತ್ನಿಯಾಗಿದ್ದ ವಿಮಲಾ, ಕುಟುಂಬದೊಂದಿಗೆ ಭಗತ್ ಸಿಂಗ್ ರಸ್ತೆಯ ಮನೆಯಲ್ಲಿ ನೆಲೆಸಿದ್ದರು. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 35 ಮಂದಿ ಮೃತಪಟ್ಟಿರುವುದು ದಾಖಲಾಗಿದೆ. ಈ ಸರಣಿ ಸಾವುಗಳು ಜಿಲ್ಲೆಯ ಜನರಲ್ಲಿ ಭಯ ಹಾಗೂ ಆತಂಕವನ್ನು ಹೆಚ್ಚಿಸಿದ್ದು, ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.