2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ (ICC World Cup) ಮುಂಚಿತವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಒಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಪೂರ್ಣ ಮಹಿಳೆಯರೇ ನಿರ್ವಹಿಸಲಿದ್ದಾರೆ.
ಬರ್ಮಿಂಗ್ಲಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಕಳೆದ ಎರಡು ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗಳಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿ ಸಮಿತಿಗಳು ಈ ಹಿಂದೆ ಕಾಣಿಸಿಕೊಂಡಿದ್ದರೂ, ಮಹಿಳಾ ವಿಶ್ವಕಪ್‌ನಲ್ಲಿ ಇಂತಹ ಸಮಿತಿಯನ್ನು ನಿಯೋಜಿಸಲಾಗುತ್ತಿರುವುದು ಇದೇ ಮೊದಲು.
ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥೇಯತ್ವದಲ್ಲಿ ನಡೆಯುವ ವಿಶ್ವಕಪ್ ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ ಭಾರತ–ಶ್ರೀಲಂಕಾ ನಡುವಿನ ಪಂದ್ಯದಿಂದ ಆರಂಭಗೊಳ್ಳಲಿದೆ. ಎಂಟು ತಂಡಗಳು ಭಾಗವಹಿಸುವ ಈ ಟೂರ್ನಿಯ ಫೈನಲ್ ನವೆಂಬರ್ 2ರಂದು ನಡೆಯಲಿದೆ. ಪಂದ್ಯಗಳನ್ನು ಭಾರತದ ನಾಲ್ಕು ನಗರಗಳಲ್ಲಿ ಹಾಗೂ ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿದೆ
ಇನ್ನು ಈ ಬಗ್ಗೆ ಐಸಿಸಿ ಅಧ್ಯಕ್ಷ ಜಯ್ ಶಾ, ಈ ಕ್ರಮವನ್ನು ಮಹಿಳಾ ಕ್ರಿಕೆಟ್‌ಗೆ ನಿರ್ಣಾಯಕ ಕ್ಷಣವೆಂದು ಶ್ಲಾಘಿಸಿದ್ದಾರೆ. ಹೆಚ್ಚಿನ ಮಹಿಳಾ ಭಾಗವಹಿಸುವಿಕೆಗೆ ಪ್ರೇರಣೆ ನೀಡುವ ಜೊತೆಗೆ, ಕ್ರೀಡೆಯಲ್ಲಿ ಭವಿಷ್ಯದ ಹಾದಿ ತೋರಿಸುವವರಿಗೆ ದಾರಿ ಮಾಡಿಕೊಡುವ ಸಾಮರ್ಥ್ಯ ಇದಕ್ಕಿದೆ ಎಂದರು. ಎಲ್ಲಾ ಮಹಿಳಾ ಪಂದ್ಯಾಧಿಕಾರಿಗಳ ಸಮಿತಿಯ ಸೇರ್ಪಡೆ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯನ್ನು ಮುನ್ನಡೆಸುವ ಐಸಿಸಿಯ ಅಚಲ ಬದ್ಧತೆಯ ಪ್ರಬಲ ಪ್ರತಿಬಿಂಬವಾಗಿದೆ ಎಂದು ಶಾ ತಿಳಿಸಿದರು.ಅಂಪೈರ್‌ಗಳ ಪ್ಯಾನಲ್‌ನಲ್ಲಿ ಭಾರತದ ಮಾಜಿ ಆಟಗಾರ್ತಿಯರಾದ ವೃಂದಾ ರಾಥಿ, ಎನ್. ಜನನಿ ಮತ್ತು ಗಾಯತ್ರಿ ವೇಣುಗೋಪಾಲನ್ ಸ್ಥಾನ ಪಡೆದಿದ್ದಾರೆ. ಇದೇ ವೇಳೆ, ಮೊದಲ ಮಹಿಳಾ ಮ್ಯಾಚ್ ರೆಫ್ರಿಯಾಗಿರುವ ಜಿ.ಎಸ್. ಲಕ್ಷ್ಮಿ ಸೇರಿದಂತೆ ನಾಲ್ವರು ಮಹಿಳಾ ರೆಫ್ರಿಗಳು ಪಂದ್ಯಗಳನ್ನು ನಿರ್ವಹಿಸಲಿದ್ದಾರೆ.
2025 ರ ಮಹಿಳಾ ವಿಶ್ವಕಪ್ ನ ಅಧಿಕಾರಿಗಳ ಪಟ್ಟಿಯನ್ನು ವೀಕ್ಷಿಸುವುದಾದರೆ,
ಮ್ಯಾಚ್ ರೆಫ್ರಿಗಳು: ಟ್ರುಡಿ ಆ್ಯಂಡರ್ಸನ್, ಶಾಂಡ್ರೆ ಪ್ರಿಟ್ಸ್, ಜಿ.ಎಸ್.ಲಕ್ಷ್ಮಿ, ಮಿಚೆಲ್ ಪೆರೀರಾ.
ಅಂಪೈರ್ಸ್: ಲಾರೆನ್ ಅಜೆನ್‌ಬಗ್, ಕ್ಯಾಂಡೇಸ್ ಲಾ ಬೋರ್ಡೆ, ಕಿಮ್ ಕಾಟನ್, ಸಾರಾ ದಂಬನೆವನ, ಶಾತಿರಾ ಜಾಖರ್ ಜೆಸಿ, ಕೆರಿನ್ ಕ್ಲಾಸ್ಟ್, ಜನನಿ ಎನ್., ನಿಮಲಿ ಪೆರೀರಾ, ಕ್ಷೇರ್ ಪೊಲೊಸಾಕ್, ವೃಂದಾ ರಾಥಿ, ನ್ಯೂ ರೆಡ್‌ಫೆರ್ನ್, ಎಲೊಯಿಸ್ ಶೆರಿದನ್, ಗಾಯತ್ರಿ ವೇಣುಗೋಪಾಲನ್, ಜಾಕ್ವೆಲಿನ್ ವಿಲಿಯಮ್ಸ್