Home ಬ್ರೇಕಿಂಗ್ ಸುದ್ದಿ ಅಂಬೇಡ್ಕರ್ ನಗರದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ಅಂಬೇಡ್ಕರ್ ನಗರದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

Oplus_131072

ಹಾಸನ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಡಿಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ವನ್ನು ಅಂಬೇಡ್ಕರ್ ನಗರದ ಉರ್ದು ಶಾಲೆ ಹಾಗೂ ದೇವೇಗೌಡ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಚರಿಸಲಾಯಿತು.

ನೆರೆದಿದ್ದ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಮಾದಕ ವಸ್ತು ಗಳಿಂದ ಮಾನವನ ಆರೋಗ್ಯದ ಮೇಲೆ ಆಗುವ ದುಷ್ಟಪರಿಣಾಮ ಗಳ ಬಗ್ಗೆ ಮತ್ತು ಕೌಟುಂಬಿಕ ಜೀವನ ಮೇಲೆ ಆಗುವ ದುಷ್ಪರಿಣಾಮಗಳನ್ನು ತಿಳಿಸಿದರು.

ಹಾಸನ ತಾಲೂಕು ಯೋಜನಾಧಿಕಾರಿ ಧನಂಜಯ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಾಸನ ತಾಲೂಕಿನಲ್ಲಿ 2600 ಸ್ವಸಹಾಯ ಸಂಘಗಳಿದ್ದು ಬ್ಯಾಂಕುಗಳಿಂದ ಆರ್ಥಿಕ ಸೌಕರ್ಯ ಒದಗಿಸಿ ಅವರ ಮೂಲಸೌಕರ್ಯ, ಕೃಷಿ , ಮಕ್ಕಳ ಶಿಕ್ಷಣ, ಸಣ್ಣ ಸಣ್ಣ ವ್ಯಾಪಾರ ಇತ್ಯಾದಿ ಕೆಲಸ ಕಾರ್ಯಗಳಿಗೆ ವಿನಿಯೋಗ ಆಗುತ್ತಿದೆ  ಮತ್ತು  ತುಂಬಾ ಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಮಾಶಾಸನ ವಿತರಣೆ, ಜಲಮಂಗಲ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ, ಜನಜಾಗೃತಿ ವೇದಿಕೆಯ ಮಧ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ಸುಜ್ಞಾನನಿಧಿ ಶಿಷ್ಯವೇತನ, ಕೆರೆ ಹೂಳೆತ್ತುವ ಕಾರ್ಯಕ್ರಮ ಇತ್ಯಾದಿಗಳ ಕುರಿತು ವಿವರಿಸಿದರು.

ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ನಾ ವ್ಯವಹಾರ ದ ಬಗ್ಗೆ ಮತ್ತು ಸಂಘದ ಸದಸ್ಯರಿಗೆ ಪ್ರಗತಿನಿಧಿ ವಿತರಣೆಯಲ್ಲಿ ವಿಧಿಸುವ ಬಡ್ಡಿ ಮತ್ತು ಸಂಘ ವಾರದಾಸಭೆ ಮತ್ತು ದಾಖಲಾತಿ ನಿರ್ವಹಣೆ ಯಬಗ್ಗೆ ಯೋಜನೆಯ ಇತರ ಕಾರ್ಯಕ್ರಮ ಗಳ ಬಗ್ಗೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜೀವನ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಜನಜಾಗೃತಿ ವೇದಿಕೆ ಮುಖಾಂತರ ಹಾಗೂ ಸಮುದಾಯ ಅಭಿವೃದ್ಧಿ ವಿಭಾಗದ ಮೂಲಕ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಮಾಜಕ್ಕೆ ಅನುಕೂಲಕರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಯೋಗಾನಂದ, ಶಾಲೆಯ  ಮುಖ್ಯೋಪಾಧ್ಯಾಯರಾದ ಹೇಮ, ಮೇಲ್ವಿಚಾರಕಿ ನಿರ್ಮಲ, ಜ್ಞಾನವಿಕಾಸ ಸಮನ್ವಯಧಿಕಾರಿ ಸರಸ್ವತಿ, ಮತ್ತು ವಲಯದ ಸೇವಾಪ್ರತಿನಿಧಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರು ಸೇವಾ ಪ್ರತಿನಿಧಿಗಳು ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.

You cannot copy content of this page

Exit mobile version