ಭ್ರಷ್ಟಾಚಾರ ಪ್ರಕರಣ : ಸರ್ಕಾರದಿಂದ ಯಡಿಯೂರಪ್ಪರಿಗೆ ತಟ್ಟಲಿದೆ ಪ್ರಾಸಿಕ್ಯೂಷನ್ ಬಿಸಿ

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ 2020 ರ ನವೆಂಬರ್ 19ರಂದು ಯಡಿಯೂರಪ್ಪ ವಿರುದ್ಧ ಸಲ್ಲಿಸಿದ ಭ್ರಷ್ಟಾಚಾರ ದೂರು ಆಧರಿಸಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಯಡಿಯೂರಪ್ಪ ವಿರುದ್ದ ಭ್ರಷ್ಟಾಚಾರ ದೂರಿನ ವಿಚಾರವಾಗಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ನಿರಾಕರಿಸಿದ್ದ ಈ ಹಿಂದಿನ ನಿರ್ಣಯ ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಇದೀಗ ಮತ್ತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.

ಯಡಿಯೂರಪ್ಪ ಮತ್ತು ಅವರ ಕುಟುಂಬ ವಿರುದ್ಧದ ಭ್ರಷ್ಟಾಚಾರದ ದೂರಿನಲ್ಲಿ 16 ಗಂಭೀರ ಪ್ರಕರಣಗಳನ್ನು ಮಾಡಲಾಗಿದೆ. ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನಿರಾಕರಿಸಿ 2021ರ ಜೂನ್ 24ರಂದು ಮಾಡಿರುವ ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸಬೇಕೆಂದು ಕೋರಲು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದಿಂದ ನಿರ್ಣಯ ಕೈಗೊಳ್ಳಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು