Home ಬ್ರೇಕಿಂಗ್ ಸುದ್ದಿ ಸ್ಯಾಂಡಲ್‌ವುಡ್ ನಟಿ ಕ್ರಿಷಿ ತಾಪಂಡ ಅಪಾರ್ಟ್‌ಮೆಂಟ್‌ನಲ್ಲಿ ಯುವ ಉದ್ಯಮಿ ವೈಶಾಖ್ ಆತ್ಮಹತ್ಯೆ; ಪೊಲೀಸ್ ತನಿಖೆ ಚುರುಕು

ಸ್ಯಾಂಡಲ್‌ವುಡ್ ನಟಿ ಕ್ರಿಷಿ ತಾಪಂಡ ಅಪಾರ್ಟ್‌ಮೆಂಟ್‌ನಲ್ಲಿ ಯುವ ಉದ್ಯಮಿ ವೈಶಾಖ್ ಆತ್ಮಹತ್ಯೆ; ಪೊಲೀಸ್ ತನಿಖೆ ಚುರುಕು

0

ಬೆಂಗಳೂರು: ಆರ್.ಆರ್. ನಗರದ ಎಲಿಗಂಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಕನ್ನಡ ಚಿತ್ರರಂಗದ ನಟಿ ಕ್ರಿಷಿ ತಾಪಂಡ ಅವರ ನಿವಾಸದಲ್ಲಿ ಆಕೆಯ ಸ್ನೇಹಿತ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಧ್ಯ ಈ ಘಟನೆ ಸ್ಯಾಂಡಲ್‌ವುಡ್ ನಲ್ಲಿ ಸಂಚಲನ ಮೂಡಿಸಿದೆ. ಮೃತ ವೈಶಾಕ್ ನಟಿಯ ಆಪ್ತ ಗೆಳೆಯ ಎನ್ನಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ನಟಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ತಕ್ಷಣ ಆರ್.ಆರ್. ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಿಖರ ಕಾರಣ ತನಿಖೆಯಲ್ಲಿದೆ.

ವೈಶಾಕ್ ಈ ಹಿಂದೆ ಪ್ರಖ್ಯಾತ ಉದ್ಯಮಿ ಅರವಿಂದ್ ರೆಡ್ಡಿ ವಿರುದ್ಧ ಜೀವಬೆದರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ನಟಿ ಹಾಗೂ ಮೃತನ ಕುಟುಂಬಸ್ಥರ ಹೇಳಿಕೆ ಪಡೆಯಲಿದ್ದಾರೆ.

You cannot copy content of this page

Exit mobile version