ದೆಹಲಿ : ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಬರೋಬ್ಬರಿ 13 ವರ್ಷದ ಬಳಿಕ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ. ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದು, ಭಾರೀ ಕಾಲ್ತುಳಿತ ಉಂಟಾಗಿದೆ.
ಕೊಹ್ಲಿ 13 ವರ್ಷದ ಬಳಿಕ ರಣಜಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸುವ ಹಿನ್ನಲೆ ಏಕಾಏಕಿ ಅಭಿಮಾನಿಗಳು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದ ಒಳಗೆ ನುಗ್ಗಿದ ಪರಿಣಾಮ ಅಭಿಮಾನಿಗಳ ನಡುವೆ ತಳ್ಳಾಟ ನಡೆದಿದ್ದು, ಕಾಲ್ತುಳಿತಕ್ಕೆ ಕಾರಣವಾಯಿತು.
ಈಗಾಗಲೇ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ಜಡೇಜಾ ಸೇರಿದಂತೆ ಹಲವಾರು ಸ್ಟಾರ್ ಆಟಗಾರರು ರಣಜಿ ಪಂದ್ಯಗಳನ್ನು ಆಡುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡ ದೆಹಲಿ ತಂಡದ ಪರ ಕಣಕ್ಕಿಳಿದಿದ್ದಾರೆ. ಇದನ್ನು ನೋಡಲು ಬೆಳ್ಳಂಬೆಳಗ್ಗೆಯೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ.
ಇನ್ನು ವಿಶೇಷ ಅಂದರೆ ಕೊಹ್ಲಿ ಹಲವಾರು ವರ್ಷದ ಬಳಿಕ ದೇಶೀಯ ಟೂರ್ನಿ ಆಡುತ್ತಿರುವ ಹಿನ್ನಲೆ ದಿಲ್ಲಿ ಕ್ರಿಕೆಟ್ ಅಸೋಸಿಯೇಷನ್ ಅಭಿಮಾನಿಗಳಿಗೆ ಸ್ಟೇಡಿಯಂಗೆ ಫ್ರೀ ಎಂಟ್ರಿಯನ್ನು ಘೋಷಿಸಿದ್ದು, ಕೇವಲ ಆಧಾರ್ ಕಾರ್ಡ್ ತೋರಿಸಿದ್ರೆ ಸಾಕು. ಗೌತಮ್ ಗಂಭೀರ್ ಸ್ಟ್ಯಾಂಡ್‌ನ 16, 17 ಗೇಟ್‌ಗಳಿಂದ ಎಂಟ್ರಿ ಅಂತ ಅಶೋಕ್ ಕುಮಾರ್ ಶರ್ಮಾ ಹೇಳಿದ್ದಾರೆ.