ಬಹುತೇಕ ಮರೆತೇ ಹೋಯ್ತು ಎಂಬಂತಿದ್ದ ಸೌಜನ್ಯ ಪ್ರಕರಣವನ್ನು ತನ್ನ ವಿಭಿನ್ನ ಮತ್ತು ಸರಳ ನಿರೂಪಣಾ ಶೈಲಿಯಿಂದ ಎತ್ತಿ ಹಿಡಿದು ರಾಜ್ಯದ ಕೋಟ್ಯಂತರ ಜನತೆಗೆ ತಲುಪಿಸಿದ ಸಮೀರ್ ಎಂಡಿ ಅವರ ವಿಡಿಯೋವನ್ನು ಮತ್ತೆ ಯೂಟ್ಯೂಬ್ ಬ್ಲಾಕ್ ಲಿಸ್ಟ್ ಗೆ ಹಾಕಿದೆ. ಈ ಬಗ್ಗೆ ಸಮೀರ್ ತಮ್ಮ Instagram ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
“ಸೌಜನ್ಯ ಪ್ರಕರಣದ ಬಗ್ಗೆ ನಾನು ಮಾಡಿದ ಧರ್ಮಸ್ಥಳ ಹಾರರ್ ಪಾರ್ಟ್ 1 ವಿಡಿಯೋ 19 ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋ ಯೂಟ್ಯೂಬ್ ನಿಂದ ಬ್ಲಾಕ್ ಆಗಿದೆ. ಕೋರ್ಟ್ ಆರ್ಡರ್ ಕಾರಣಕ್ಕೆ ಈ ವಿಡಿಯೋವನ್ನು ಬ್ಲಾಕ್ ಮಾಡಲಾಗಿದೆ” ಎಂದು ಸಮೀರ್ ಮಾಹಿತಿ ಹಂಚಿಕೊಂಡಿದ್ದಾರೆ.

ಯೂಟ್ಯೂಬ್ ಸಮೀರ್ ಅವರಿಗೆ ಈ ಮಾಹಿತಿಯನ್ನು ನೋಟಿಫಿಕೇಶನ್ ಮೂಲಕ ತಿಳಿಸಿದೆ. ಈ ಒಂದು ಕಚಡಾ ಕೆಲಸ ಯಾರು ಮಾಡಿದ್ದಾರೆ ಎಂದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದಷ್ಟು ಬೇಗ ಈ ವಿಡಿಯೋ ವಾಪಸ್ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಧ್ಯಕ್ಕೆ ಈ ವಿಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಿಲ್ಲ ಎಂದು ಸಮೀರ್ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಮೂರು ವಾರಗಳ ಹಿಂದೆ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನಾಚಾರಗಳು, ಕೊಲೆಗಳ ಬಗ್ಗೆ ಸವಿವರವಾಗಿ ಮಾಹಿತಿ ಹಂಚಿಕೊಂಡಿದ್ದರು. ಮಾಹಿತಿ ಹಳೆಯದೇ ಆದರೂ ಈ ಮಟ್ಟಿಗಿನ ವೀಕ್ಷಣೆ ಸಧ್ಯಕ್ಕೆ ಯಾವ ವಿಡಿಯೋ ತೆಗೆದುಕೊಂಡಿರಲಿಲ್ಲ. ಆ ನಂತರ ಸಮೀರ್ ಅವರ ಮೇಲೆ ಪೊಲೀಸರು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಹಲವು ಬೆದರಿಕೆಗಳೂ ಬಂದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಈ ಹಿಂದೆಯೂ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬ್ಲಾಕ್ ಗೆ ಹಾಕಲಾಗಿತ್ತು. ಇದೆಲ್ಲವನ್ನೂ ಮೀರಿ ಸಮೀರ್ ಎಂಡಿ ಅವರ ವಿಡಿಯೋ ಕೇವಲ ಅವರದೇ ಅಕೌಂಟ್ ನಲ್ಲಿ 1.9 ಕೋಟಿ ವೀಕ್ಷಣೆ ಪಡೆದುಕೊಂಡು ಮುಂದೆ ನುಗ್ಗಿತ್ತು. ಸಮೀರ್ ವಿಡಿಯೋ ಬ್ಲಾಕ್ ಆಗಬಹುದೆಂದು ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಹಲವು ಯೂಟ್ಯೂಬ್ ಚಾನಲ್ ಗಳೂ ತಮ್ಮ ತಮ್ಮ ಅಕೌಂಟ್ ಮೂಲಕವೂ ಇದೇ ವಿಡಿಯೋವನ್ನು ಹಂಚಿಕೊಂಡಿದ್ದರು. ಒಟ್ಟಾರೆ ಎರಡೂವರೆಯಿಂದ ಮೂರು ಕೋಟಿ ವರೆಗೂ ಧರ್ಮಸ್ಥಳದ ಸೌಜನ್ಯ ಪ್ರಕರಣದ ವಿಡಿಯೋ ಯೂಟ್ಯೂಬ್ ವೇದಿಕೆಯಲ್ಲಿ ವೀಕ್ಷಣೆ ಪಡೆದುಕೊಂಡಿದೆ.