ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
KPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆಅವರಿವರ ಕಣ್ಣಲ್ಲಿ ಅವಳ ‘ಪ್ರೇಮ’!ಸಿಜೆಐ ಸೂರ್ಯ ಕಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ರಾಜ್ಯದಾದ್ಯಂತ ಲೋಕಾಯುಕ್ತರ ದಿಢೀರ್ ಕಾರ್ಯಾಚರಣೆ: ಅರಣ್ಯಾಧಿಕಾರಿ, ವೈದ್ಯರು ಸೇರಿದಂತೆ ಹಲವು ಸರ್ಕಾರಿ ನೌಕರರ ಮನೆಗಳ ಮೇಲೆ ದಾಳಿಕಾಳುಮೆಣಸಿಗೆ ಬಂಗಾರದ ಬೆಲೆ! ಕೆ.ಜಿ.ಗೆ ₹773 ದಾಟಿದ ದರ; ₹800ರ ಗಡಿಯತ್ತ ಕಪ್ಪು ಚಿನ್ನದ ಓಟ!ಅಮರನಾಥ ಯಾತ್ರೆಯ ಹಾದಿಯಲ್ಲಿ ಭೂಕುಸಿತದ ಭೀತಿ; ಶೇ.84ರಷ್ಟು ಇಳಿಜಾರುಗಳು ಅಪಾಯದ ವಲಯದಲ್ಲಿ! ; ಅಧ್ಯಯನ ವರದಿಯಲ್ಲಿ ಆತಂಕಕಾರಿ ಅಂಶ ಬಹಿರಂಗಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಲಿ: ಸಿಎಂಗೆ ಪ್ರಹ್ಲಾದ್ ಜೋಶಿ ಪತ್ರಬಿಹಾರ | ಕಾನೂನು ಸಚಿವರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು: 90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಸೂರೆಎಐ, ಡೀಪ್‌ಟೆಕ್ ಕ್ಷೇತ್ರದಲ್ಲಿ ಕರ್ನಾಟಕದ ಹೊಸ ಹೆಜ್ಜೆ: ಆರು ಮಹತ್ವದ ತಂತ್ರಜ್ಞಾನ ಆದ್ಯತೆಯ ಘೋಷಣೆ, 63,200 ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಎಐ ತರಬೇತಿಯ ಗುರಿರಾಹುಲ್ ಗಾಂಧಿ ಹೇಳಿಕೆಗೆ ಟ್ರೋಲ್‌ಗಳ ವ್ಯಂಗ್ಯ; ಹೊಯ್ಸಳೇಶ್ವರ ದೇವಾಲಯದ ಶಿಲ್ಪದ ಮೂಲಕ ತಿರುಗೇಟು!ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು:‌ ಹೆದರಿ ಗುಜರಾತ್‌ ತೊರೆದ ಬಿಲ್ಕಿಸ್‌ ಬಾನೊ ಕುಟುಂಬಕೇರಳಂ ನಲ್ಲಿ ಹಕ್ಕಿಜ್ವರ ಭೀತಿ: 26 ಸಾವಿರ ಕೋಳಿಗಳು, ಬಾತುಕೋಳಿಗಳ ಹತ್ಯೆಗೆ ಸಿದ್ಧತೆ! 10 ಕಿ.ಮೀ. ವ್ಯಾಪ್ತಿಯಲ್ಲಿ ಕಣ್ಗಾವಲುಧರ್ಮದ ಆಧಾರದಲ್ಲಿ ಮತದಾರರ ವಿಶ್ಲೇಷಣೆ ಅಸಾಧ್ಯ: ಯೋಗಿ ಆದಿತ್ಯನಾಥ್‌ ಹೇಳಿಕೆಗೆ ಉತ್ತರಿಸಿದ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿನನ್ನ ವಾದವನ್ನೇ ಆಲಿಸದೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ, ಜಾಮೀನು ನಿರ್ಧಾರದ ವಿರುದ್ಧ ಹೋರಾಡುತ್ತೇನೆ: ಬಿಲ್ಕಿಸ್‌ ಬಾನೊಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐಎಸ್‌ಐಆರ್‌ ಕುರಿತು ಏಕಮತದ ತೀರ್ಮಾನ ಕೈಗೊಂಡಿರುವುದಕ್ಕೆ ಇಸಿಐ ದಾಖಲೆಗಳನ್ನು ಸಲ್ಲಿಸಿಲ್ಲ: ಸುಪ್ರೀಂಕೋರ್ಟಿನಲ್ಲಿ ವಾದ ಸಲ್ಲಿಸಿದ ಅರ್ಜಿದಾರರುಬೇಡಿಕೆ ಈಡೇರಿಸುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ: ಆರೋಗ್ಯ ಸಚಿವರ ಮನವಿಯನ್ನು ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರುದಕ್ಷಿಣ ಕನ್ನಡ | ಕೋಲ್ಡ್‌ ಪ್ರೆಸ್ಡ್‌ ಹೆಸರಿನಲ್ಲಿ ಕಚ್ಚಾ ಎಣ್ಣೆ ಮಾರಾಟ: 1,240 ಕೆ.ಜಿ. ಅಡುಗೆ ಎಣ್ಣೆ ವಶಕ್ಕೆ ಪಡೆದ ಆಹಾರ ಸುರಕ್ಷತಾ ಇಲಾಖೆ

ಅವರಿವರ ಕಣ್ಣಲ್ಲಿ ಅವಳ ‘ಪ್ರೇಮ’!

PPeepal Media Desk

Peepal Media Desk ಕವಿತೆ

• 1 ನಿಮಿಷದ ಓದು

ಅವರಿವರ ಕಣ್ಣಲ್ಲಿ ಅವಳ ‘ಪ್ರೇಮ’!

ಕವಯಿತ್ರಿ ವಿಜಯಶ್ರೀ ಹಾಲಾಡಿ ಅವರ ಕವನ

ಪ್ರೇಮ ಕವಿತೆಗಳನ್ನು
ಅವಳೀಗ ಬರೆಯುವುದಿಲ್ಲ
ಬರೆದರೂ ಪ್ರಕಟಣೆಗೆ
ಕಳಿಸದೆ, ಫೇಸ್ಬುಕ್ ಲ್ಲೂ
ಕಾಣಿಸದೆ ಬಚ್ಚಿಡುತ್ತಾಳೆ!

ಗಂಡ- ಎದೆಯೆತ್ತರ ಬೆಳೆದ
ಮಕ್ಕಳು, ತುಂಬು ಕುಟುಂಬದ;
ಮೆನೊಪಾಸ್ ಯಾತನೆಯಲ್ಲಿ
ಬಳಲುತ್ತಿರುವ ಅವಳಿಗೆ
ಪ್ರೇಮ ಕವಿತೆಗಳನ್ನು
ಬರೆಯಲು ನಿಷೇಧವಿದೆ!

ಹೌದು,
ಈ ವಯಸ್ಸಿನಲ್ಲಿ
ಯಾಕಾದರೂ ಪ್ರೇಮವನ್ನು
ಬರೆಯಬೇಕು?
ಅಂತಹ ‘ಗಲೀಜು’
ಸಾಲುಗಳನ್ನು ಓದಿದ
ಅವಳ ಮಕ್ಕಳು,
ನೆಂಟರಿಷ್ಟರು, ಅಕ್ಕಪಕ್ಕದವರು
ಮುಜುಗರ ಅನುಭವಿಸಿ
ತಲೆಕೆಟ್ಟಿದೆಯೆಂದು ನಗುವುದಿಲ್ಲವೆ?
ಅಥವಾ
ಅಪನಂಬಿಕೆ ತಾಳಿ
ಹೀನಾಯವಾಗಿ ಕಾಣುವುದಿಲ್ಲವೆ?
ಗಂಡನಿಗೇನಾದರೂ ಗೊತ್ತಾದರೆ
ರಾದ್ಧಾಂತವೇ ಜರುಗುವುದಿಲ್ಲವೇ?

ಅಧ್ಯಾತ್ಮ -ಸಂಪ್ರದಾಯ;
ಅವೆಲ್ಲ ಬೇಡವೆಂದರೆ
ಬಡತನದ ತಲ್ಲಣಗಳು
ದುರಿತಕಾಲದ ನೋವುನುರಿಗಳು
ಭೂಮಿತಾಯಿಯ ಚೆಲುವು..
ಸಾಲುಗಟ್ಟಿ ನಿಂತಿಲ್ಲವೆ
ಸಾವಿರಾರು ಸರಕುಗಳು?

ಮತ್ತೊಂದು ಸಂಶಯ!
ಸುಮ್ಮನೇ ಪ್ರೀತಿಪ್ರೇಮವನ್ನು
ಹುಟ್ಟಿಸಿಕೊಂಡು ಬರೆಯಲಾಗುತ್ತದೆಯೇ?
ನಿರೀಕ್ಷೆ ನಿರಾಸೆ
ತಹತಹ ಉತ್ಕಟತೆ
ವಿರಹ ಕಾಯುವಿಕೆ
ಕಾರಣವಿಲ್ಲದೆ ಸುಖಾಸುಮ್ಮನೆ
ಪದ್ಯವಾಗಿ ಹೊರಹೊಮ್ಮುತ್ತವೆಯೆ?!
ಗುಟ್ಟಾಗಿ ಯಾರನ್ನೋ ಪ್ರೇಮಿಸುತ್ತಿದ್ದಾಳೆ!
ನಿಜ…
ಇದೆಲ್ಲ ಎಲ್ಲಿಯವರೆಗೆ
ಮುಂದುವರಿದಿದೆಯೋ
ಇನ್ನೂ ಏನೇನು
ಸಂಭವಿಸಿದೆಯೋ
ಆ ದೇವರಿಗೇ ಗೊತ್ತು!

PPeepal Media Desk

Peepal Media Desk

Peepal Media · ಕವಿತೆ ವಿಭಾಗ

ಸಂಬಂಧಿತ ಸುದ್ದಿಗಳು