ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು:‌ ಹೆದರಿ ಗುಜರಾತ್‌ ತೊರೆದ ಬಿಲ್ಕಿಸ್‌ ಬಾನೊ ಕುಟುಂಬಕೇರಳಂ ನಲ್ಲಿ ಹಕ್ಕಿಜ್ವರ ಭೀತಿ: 26 ಸಾವಿರ ಕೋಳಿಗಳು, ಬಾತುಕೋಳಿಗಳ ಹತ್ಯೆಗೆ ಸಿದ್ಧತೆ! 10 ಕಿ.ಮೀ. ವ್ಯಾಪ್ತಿಯಲ್ಲಿ ಕಣ್ಗಾವಲುಧರ್ಮದ ಆಧಾರದಲ್ಲಿ ಮತದಾರರ ವಿಶ್ಲೇಷಣೆ ಅಸಾಧ್ಯ: ಯೋಗಿ ಆದಿತ್ಯನಾಥ್‌ ಹೇಳಿಕೆಗೆ ಉತ್ತರಿಸಿದ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿನನ್ನ ವಾದವನ್ನೇ ಆಲಿಸದೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ, ಜಾಮೀನು ನಿರ್ಧಾರದ ವಿರುದ್ಧ ಹೋರಾಡುತ್ತೇನೆ: ಬಿಲ್ಕಿಸ್‌ ಬಾನೊಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐಎಸ್‌ಐಆರ್‌ ಕುರಿತು ಏಕಮತದ ತೀರ್ಮಾನ ಕೈಗೊಂಡಿರುವುದಕ್ಕೆ ಇಸಿಐ ದಾಖಲೆಗಳನ್ನು ಸಲ್ಲಿಸಿಲ್ಲ: ಸುಪ್ರೀಂಕೋರ್ಟಿನಲ್ಲಿ ವಾದ ಸಲ್ಲಿಸಿದ ಅರ್ಜಿದಾರರುಬೇಡಿಕೆ ಈಡೇರಿಸುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ: ಆರೋಗ್ಯ ಸಚಿವರ ಮನವಿಯನ್ನು ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರುದಕ್ಷಿಣ ಕನ್ನಡ | ಕೋಲ್ಡ್‌ ಪ್ರೆಸ್ಡ್‌ ಹೆಸರಿನಲ್ಲಿ ಕಚ್ಚಾ ಎಣ್ಣೆ ಮಾರಾಟ: 1,240 ಕೆ.ಜಿ. ಅಡುಗೆ ಎಣ್ಣೆ ವಶಕ್ಕೆ ಪಡೆದ ಆಹಾರ ಸುರಕ್ಷತಾ ಇಲಾಖೆಹೋಟೆಲ್‌ ಕೋಣೆಯಲ್ಲಿ ಗಾಂಜಾ ಇಟ್ಟು ಸುಳ್ಳು ಪ್ರಕರಣ ದಾಖಲಿಸಲು ಸಂಚು, ವಿಡಿಯೊ ವೈರಲ್‌; ಠಾಣಾಧಿಕಾರಿ ವರ್ಗಾವಣೆಭದ್ರಾ ಅರಣ್ಯಕ್ಕೆ 56 ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ: ಪ್ರಸ್ತಾವನೆ ಕೈಬಿಡುವಂತೆ ಅರಣ್ಯ ಸಚಿವರಿಗೆ ಶಾಸಕ ರಾಜೇಗೌಡ ಮನವಿಹಾಸನದ ಬೇಲೂರಿನಲ್ಲಿ ಕಾಡಾನೆ ಸೆರೆ – ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆಅನುದಿನದ ಅಂತರಂಗ: ತುಳಿದಷ್ಟೂ ಬೆಳೆಯುತ್ತೇನೆ ತಿಳಿದಿರಲಿ ನಿಮಗೆಬೊಗಸೆಗೆ ದಕ್ಕಿದ್ದು-101 : ಮೇಲ್ವರ್ಗದ ರಕ್ಷಣೆ, ಕೆಳವರ್ಗದ ಗುಲಾಮಿಯೇ ಸರ್ವಾಧಿಕಾರದ ಗುರಿ!SIR ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಸುಪ್ರೀಂ ಕೋರ್ಟ್ ಅಂಗಳಕ್ಕೆ!ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆಗೆ ಸಿದ್ಧತೆ: 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಕೇಂದ್ರದ ವಿರುದ್ಧ ಸುಪ್ರೀಂ ದೂರು – ರಾಜ್ಯ ಬರಬೇಕಾದ 2186 ಕೋಟಿ ರೂ. ಬಾಕಿಕೋಲಾರ : ಆಟೋಗೆ ಸ್ಕೊಡಾ ಕಾರಿನ ನಡುವೆ ಬೀಕರ ಅಪಘಾತ – ಇಬ್ಬರು ದುರ್ಮರಣಎಂಎಸ್ ಧೋನಿ ಐಪಿಎಲ್ ನಿವೃತ್ತಿ: 2027ರಿಂದ CSK ಮೆಂಟರ್ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ – ಮಧು ಬಂಗಾರಪ್ಪಸಾತನೂರು: ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ; ಬೋನಿಗೆ.

ನನ್ನ ವಾದವನ್ನೇ ಆಲಿಸದೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ, ಜಾಮೀನು ನಿರ್ಧಾರದ ವಿರುದ್ಧ ಹೋರಾಡುತ್ತೇನೆ: ಬಿಲ್ಕಿಸ್‌ ಬಾನೊ

PPeepal Media

Peepal Media ದೇಶ

• 1 ನಿಮಿಷದ ಓದು

ನನ್ನ ವಾದವನ್ನೇ ಆಲಿಸದೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ, ಜಾಮೀನು ನಿರ್ಧಾರದ ವಿರುದ್ಧ ಹೋರಾಡುತ್ತೇನೆ: ಬಿಲ್ಕಿಸ್‌ ಬಾನೊ

2002ರ ಗುಜರಾತ್‌ ಗಲಭೆ ಸಂದರ್ಭದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವ ಸುಪ್ರೀಂಕೋರ್ಟ್‌ ಆದೇಶಕ್ಕೆ ಬಿಲ್ಕಿಸ್‌ ಬಾನೊ ತೀವ್ರ ಆಘಾತ ಮತ್ತು ನೋವು ವ್ಯಕ್ತಪಡಿಸಿದ್ದಾರೆ. ತಮ್ಮನ್ನು ವಿಚಾರಣೆಗೆ ಕರೆಯದೆ, ತಮ್ಮ ವಾದವನ್ನು ಆಲಿಸದೆ ನ್ಯಾಯಾಲಯ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿರುವ ಅವರು, ಈ ಆದೇಶದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.

ಹಿರಿಯ ವಕೀಲೆ ಶೋಭಾ ಗುಪ್ತಾ ಮೂಲಕ ನವೆಂಬರ್‌ 17ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಿಲ್ಕಿಸ್‌ ಬಾನೊ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ನವೆಂಬರ್‌ 16ರಂದು ಸುಪ್ರೀಂಕೋರ್ಟ್‌ ಇಬ್ಬರು ಅಪರಾಧಿಗಳ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತ್ತು. 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನು ಉಲ್ಲೇಖಿಸಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿತ್ತು.

“ನನ್ನ ವಾದವನ್ನೇ ಆಲಿಸಲಿಲ್ಲ. ಈ ಆದೇಶದ ವಿರುದ್ಧ ಹೋರಾಡುತ್ತೇನೆ. ಹೋರಾಡಲೇಬೇಕು” ಎಂದು ಬಿಲ್ಕಿಸ್‌ ಬಾನೊ ಹೇಳಿದ್ದಾರೆ.

“ನೋವು, ಆಘಾತ ಮತ್ತು ನಂಬಲಾಗದ ಪರಿಸ್ಥಿತಿಯಿಂದ ಕಣ್ಣೀರು ಮತ್ತೆ ಹರಿಯುತ್ತಿರುವಾಗಲೂ ಈ ಹೇಳಿಕೆ ನೀಡುತ್ತಿದ್ದೇನೆ. ಎರಡನೇ ಬಾರಿಯೂ ನನ್ನನ್ನು ಕರೆಯದೆ, ನನ್ನ ಮಾತುಗಳನ್ನು ಕೇಳದೆ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ ಎಂಬುದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಪತ್ರಿಕಾ ವರದಿಗಳ ಮೂಲಕವೇ ಈ ವಿಷಯ ನನಗೆ ತಿಳಿಯಿತು” ಎಂದು ಅವರು ಹೇಳಿದ್ದಾರೆ.

“ನಾನು ಒಂದರ ನಂತರ ಮತ್ತೊಂದು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಪ್ರತಿ ಬಾರಿ ನ್ಯಾಯ ಸಿಕ್ಕಾಗಲೂ ಕೃತಜ್ಞತೆ ಸಲ್ಲಿಸಿದ್ದೇನೆ. ನ್ಯಾಯದ ಮೇಲಿನ ನನ್ನ ನಂಬಿಕೆಯನ್ನು ಮತ್ತೆ ಕಟ್ಟಿಕೊಂಡಿದ್ದೇನೆ. ಕುಟುಂಬ ಮತ್ತು ಸ್ನೇಹಿತರ ಪ್ರೀತಿಯ ನೆರವಿನಿಂದ ನನ್ನ ಬದುಕಿನ ಅವಶೇಷಗಳಿಂದ ಮತ್ತೆ ಜೀವನ ಕಟ್ಟಿಕೊಂಡಿದ್ದೇನೆ. ನೆಮ್ಮದಿಯಿಂದ ಬದುಕಲು ಬಯಸಿದ್ದೇನೆ. ಮತ್ತೆ ನಗುವುದನ್ನೂ ಕಲಿತಿದ್ದೇನೆ. ಆದರೆ ಇಂದು, ಕಷ್ಟಪಟ್ಟು ಹೋರಾಡಿ ಪಡೆದುಕೊಂಡ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ” ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಹೋರಾಟದ ಉದ್ದೇಶವನ್ನೂ ಬಿಲ್ಕಿಸ್‌ ಬಾನೊ ಸ್ಪಷ್ಟಪಡಿಸಿದ್ದಾರೆ. “ನನ್ನ ಮಕ್ಕಳಿಗಾಗಿ ಈ ಹೋರಾಟ ಮಾಡುತ್ತೇನೆ. ಅವರು ತಮ್ಮ ಜೀವನದುದ್ದಕ್ಕೂ ಈ ಭಯ ಮತ್ತು ಗಾಯಗಳ ನೆನಪುಗಳೊಂದಿಗೆ ಬದುಕುವಂತಾಗಬಾರದು. ಬದುಕಬೇಕಿದ್ದ ನನ್ನ ಮೂರು ವರ್ಷದ ಮಗಳು ಸಲೇಹಾಳಿಗಾಗಿ ಮತ್ತು ಆಕೆಯ ನೆನಪಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತೇನೆ. ಎಲ್ಲ ಮಹಿಳೆಯರಿಗಾಗಿ ಹೋರಾಡುತ್ತೇನೆ. ಯಾವುದೇ ಮಹಿಳೆ, ಸಂತ್ರಸ್ತೆ ಅಥವಾ ನಾಗರಿಕರು ತಮ್ಮ ಅಸ್ತಿತ್ವ, ಸಮಾನತೆ ಮತ್ತು ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುವ ಪರಿಸ್ಥಿತಿ ಎದುರಿಸಬಾರದು” ಎಂದು ಹೇಳಿದ್ದಾರೆ.

2002ರ ಫೆಬ್ರವರಿ 27ರಂದು ಗೋಧ್ರಾ ರೈಲು ದಹನ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ದಾಹೋಡ್‌ ಜಿಲ್ಲೆಯ ರಾಂಧಿಕ್‌ಪುರದ ಹೊರವಲಯದಲ್ಲಿ ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅವರ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ ಕುಟುಂಬದ ಏಳು ಮಂದಿ ಹತ್ಯೆಯಾಗಿದ್ದರು.

ಇದನ್ನೂ ಓದಿ:

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು