ಕೋಲಾರ : ಆಟೋಗೆ ಸ್ಕೊಡಾ ಕಾರಿನ ನಡುವೆ ಬೀಕರ ಅಪಘಾತ – ಇಬ್ಬರು ದುರ್ಮರಣ
ಲಿಂಕ್ ನಕಲಿಸಲಾಗಿದೆ ✓
ಕೋಲಾರ : ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತೂಪಲ್ಲಿ ಬಳಿ ಪ್ಯಾಸೆಂಜರ್ ಆಟೋ ಮತ್ತು ಸ್ಕೊಡಾ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road mishap) ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಆಟೋಗೆ ಹಿಂಬದಿಯಿಂದ ಸ್ಕೊಡಾ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಸ್ತೆಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಗುರುತಿಸಿದ ಪೊಲೀಸರು
ಮೃತರನ್ನು ಲಕ್ಷ್ಮಿಪುರ ಗ್ರಾಮದ ಯಾಸ್ಮೀನ್ (35) ಮತ್ತು ಹರಳಕುಂಟೆ ಗ್ರಾಮದ ಶಬ್ಬೀರ್ ಭಾಷ (40) ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯಗಳು:
#Auto Skoda Car Accident
#karnataka
#Kolar Accident
#Kolar Auto Accident
#Kolar Road Accident
#news
#Two Killed in Road Accident
ರ
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ