ಹಾಸನ : ಇತ್ತೀಚಿನ ದಿನಗಳಲ್ಲಿ ಅಕ್ರಮ ಆಸ್ತಿ ಪ್ರಕರಣಗಳು (Crime) ಹೆಚ್ಚಾಗುತ್ತಿದೆ. ಆರೋಪ ಸಾಬೀತಾದರೆ ಕೆಲವರಿಗೆ ಶಿಕ್ಷೆ ಸಹ ಆಗುತ್ತಿದೆ. ಈಗ ಅಕ್ರಮ ಆಸ್ತಿ ಸಂಪಾದನೆ (Illegal Assets) ಮಾಡಿರುವುದು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಹಾಸನ (Hassana) ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಕೇಂದ್ರ ಸ್ಥಾನಿಕ ಸಹಾಯಕರಾಗಿದ್ದ ಒಬ್ಬರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಎರಡು ವರ್ಷ ಜೈಲು ಶಿಕ್ಷೆ
ಕೇಂದ್ರ ಸ್ಥಾನಿಕ ಸಹಾಯಕರಾಗಿದ್ದ ಕೆ.ಪಿ ಹೊನಕೇರಿಗೆ ಹಾಸನದ ಘನ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದೆ. 208ರ ಮಾರ್ಚ್ 26 ರಂದು ಹಾಸನ ಲೋಕಾಯುಕ್ತ ಪೊಲೀಸರು ಕರ್ನಾಟಕ ಭಷ್ಟಾಚಾರ ನಿಗ್ರಹಕಾಯಿದೆ ಅನ್ವಯ ದಾಳಿ ಮಾಡಿದ್ದರು. ಈ ಬಗ್ಗೆ ಪ್ರಕರಣ ಸಹ ದಾಖಲಾಗಿತ್ತು. ನಂತರ ವಿಚಾರಣೆ ಮಾಡಿದ್ದು, ಅದರಲ್ಲಿ ಆರೋಪ ಸಾಬೀತಾಗಿದೆ. ಹಾಗಾಗಿ ಕೆ.ಪಿ ಹೊನಕೇರಿಗೆ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ಶಿಕ್ಷೆ ವಿಧಿಸಲಾಗಿದೆ. ಇನ್ನು ದಂಡ ಪಾವತಿ ಮಾಡಿದಲ್ಲಿ ತಪ್ಪಿದರೆ ಎರಡು ವರ್ಷದ ಜೊತೆ ಇನ್ನೂ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ಈ ಪ್ರಕರಣದಲ್ಲಿ ತನಿಖಾಕಾರಿ ಆಗಿರುವ ಕರ್ನಾಟಕ ಲೋಕಾಯುಕ್ತದ ಪೊಲೀಸ್ ನಿರೀಕ್ಷಕ ರುದ್ರಮುನಿ ತನಿಖೆ ಪೂರೈಸಿ ಅವರು ಕೋರ್ಟ್‌ಗೆ ಇದಕ್ಕೆ ಸಂಬಂಧಪಟ್ಟ ದೋಷಾರೋಪಣ ಪಟ್ಟಿಯಲ್ಲಿ ಸಲ್ಲಿಕೆ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಅಭಿಯೋಜಕರಾದ ಪರಶುರಾಮ್‌ರವರು ಅವರು ಕೋರ್ಟ್ ಮುಂದೆ ವಾದ ಮಂಡನೆ ಮಾಡಿದ್ದಾರೆ.
