Home ಬೆಂಗಳೂರು ಜಾತಿಗಣತಿಗೆ ಅಧಿಕೃತ ಆದೇಶ, ಸಮೀಕ್ಷೆಗೆ ಸಿದ್ದರಾಗಿ ಎಂದ ರಾಜ್ಯ ಸರ್ಕಾರ

ಜಾತಿಗಣತಿಗೆ ಅಧಿಕೃತ ಆದೇಶ, ಸಮೀಕ್ಷೆಗೆ ಸಿದ್ದರಾಗಿ ಎಂದ ರಾಜ್ಯ ಸರ್ಕಾರ

0

ಬೆಂಗಳೂರು : ರಾಜ್ಯದಲ್ಲಿ ಜಾತಿ ಜನಗಣತಿ (Caste Census) ನಡೆಯುವ ವಿಚಾರವಾಗಿ ಅನೇಕ ಗೊಂದಲಗಳು ಸೃಷ್ಟಿಯಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಅಧಿಕೃತ ಆದೇಶ ಪ್ರಕಟ ಮಾಡಿದ್ದು, ಸೆ.22 ರಿಂದ ಅ.07 ರವರೆಗೆ ಸಮೀಕ್ಷೆ ಮಾಡಲಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.


ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ಮಾಡಲಾಗುತ್ತಿದೆ. ಈ ಸಮೀಕ್ಷೆಗೆ ಸಿದ್ದರಾಗಿರಿ ಎಂದು ಜನರಿಗೆ ಸರ್ಕಾರ ತಿಳಸಿದ್ದು, ಸದ್ಯ ಇರುವ ಕೆಲ ಗೊಂದಲಗಳ ಬಗ್ಗೆ ಮಾತ್ರ ಯಾವುದೇ ಸ್ಪಷ್ಣನೆಯನ್ನ ಮಾತ್ರ ಕೊಟ್ಟಿಲ್ಲ.

ಇನ್ನು ಈಗಾಗಲೇ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್‌ ಅವರಿಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಸಮೀಕ್ಷೆ ವಿಚಾರವಾಗಿ ಸಮೀಕ್ಷೆ ಮಾಡುವವರಿಗೆ ಅಗತ್ಯವಾದ ತರಬೇತಿಯನ್ನ ಕೊಡಬೇಕು ಹಾಗೂ ಜನರು ಸಹ ಈ ಸಮೀಕ್ಷೆಯಲ್ಲಿ ಸರಿಯಾಗಿ ಭಾಗವಹಿಸುವಂತೆ ಮಾಡಲು ತಿಳಿಸಿದೆ.

ರಾಜ್ಯದಲ್ಲಿ ಸಮೀಕ್ಷೆಯ ವಿಚಾರವಾಗಿ ಸರ್ಕಾರದ ಸಚಿವರಲ್ಲಿ ಅನೇಕ ಗೊಂದಲಗಳು ಹುಟ್ಟಿಕೊಂಡಿದ್ದವು. ಅದರಲ್ಲೂ ಸಮೀಕ್ಷೆ ಆಗುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಸಹ ಹುಟ್ಟಿಕೊಂಡಿತ್ತು. ಆದರೆ ಸರ್ಕಾರ ಈ ಆದೇಶವನ್ನ ನೀಡುವ ಮೂಲಕ ಎಲ್ಲಾದಕ್ಕೂ ಉತ್ತರ ನೀಡಿದೆ.

ಅಂತಿಮ ನಿರ್ಧಾರ ಆಯೋಗವೇ ಮಾಡಲಿದೆ
ಬೆಂಗಳೂರಲ್ಲಿ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವರು, ಹಿಂದುಳಿದ ವರ್ಗಗಳ ಆಯೋಗ  ಶಾಸನಬದ್ಧ ಸಂಸ್ಥೆಯಾಗಿದ್ದು, ಅವರಿಗೆ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಸಮೀಕ್ಷೆಯ ಬಗ್ಗೆ ಅಭಿಪ್ರಾಯಗಳನ್ನು ಆಯೋಗಕ್ಕೆ ವಿವರಿಸಲಾಗಿದ್ದು, ಅಂತಿಮ ನಿರ್ಧಾರ ಆಯೋಗವೇ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

You cannot copy content of this page

Exit mobile version