ಬೆಂಗಳೂರು : ಇನ್ನೇನು ದಸರಾ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ರಾಜ್ಯ ಶಿಕ್ಷಣ ಇಲಾಖೆ ಸಹ ದಸರಾ ಸಂಭ್ರಮವನ್ನ ಹೆಚ್ಚು ಮಾಡಲು ಹೊರಟಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜೆಯನ್ನ (Dasara Holiday) ಘೋಷಣೆ ಮಾಡಿದೆ.
18 ದಿನಗಳ ರಜೆ ಘೋಷಣೆ
ಮೈಸೂರು ದಸರಾ ಹಬ್ಬದ ತಯಾರಿ ಭರ್ಜರಿ ಆಗಿದೆ. ಇದಕ್ಕಾಗಿ ಮೈಸೂರು ಮಾತ್ರವಲ್ಲದೇ ರಾಜ್ಯದಲ್ಲಿ ಸಹ ತಯಾರಿ ಆರಂಭವಾಗಿದೆ. ಈ ದಸರಾ ಹಬ್ಬವನ್ನ ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದೀಗ ರಾಜ್ಯ ಶಿಕ್ಷಣ ಇಲಾಖೆ 18 ದಿನಗಳ ದಸರಾ ರಜೆಯನ್ನ ಘೋಷಣೆ ಮಾಡಿದೆ. ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ಈ ರಜೆ ಘೋಷಣೆ ಮಾಡಿದ್ದು, ಕುಟುಂಬದ ಜೊತೆ ಸಮಯ ಕಳೆಯಲು ಇದು ಉತ್ತಮ ಅವಕಾಶವಾಗಿದೆ. ಈ 18 ದಿನಗಳ ರಜೆಯಲ್ಲಿ ಪ್ರಮುಖ ದಿನಗಳನ್ನು ಬಿಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಇರುವ ಕಾರಣದಿಂದ ಅವುಗಳನ್ನ ಬಿಟ್ಟು ಈ 18 ದಿನಗಳ ರಜೆಯನ್ನ ಘೋಷಣೆ ಮಾಡಲಾಗಿದೆ. ಆ ದಿನ ಮಕ್ಕಳಿಗೆ ಶಾಲೆಗಳಿಗೆ ಬರಬೇಕು ಎಂದು ಆದೇಶ ನೀಡಲಾಗಿದೆ.