ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕರ್ನಾಟಕದ ನೆಲದಲ್ಲಿ ಮಹಾರಾಷ್ಟ್ರ ಪೊಲೀಸರ ತನಿಖೆಗೆ ಹೈಕೋರ್ಟ್ ಬ್ರೇಕ್: ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸುವಂತಿಲ್ಲಸರ್ಕಾರಿ ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ ಬಳಕೆ? ಕೇಂದ್ರ ಸಚಿವ ಲಲನ್ ಸಿಂಗ್ ಹೇಳಿಕೆಬಸ್ ದರ | ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ: ಬಿ ವೈ ವಿಜಯೇಂದ್ರಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ – ಆರ್. ಅಶೋಕ್ಸಾಲು ಸಮಸ್ಯೆಗಳು ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ – GBA ಚುನಾವಣೆ ಇನ್ನಷ್ಟು ವಿಳಂಬಬಿಜೆಪಿಯ ಫಾರಿನ್‌ ಫಂಡ್‌ ಕಥೆರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್‌ ಆರೋಪಎರಡು ಮಕ್ಕಳ ನೀತಿಗೆ ಸುಪ್ರೀಂ ಕೋರ್ಟ್ ಮರುಪರಿಶೀಲನೆಯ ಅಸ್ತು: ಜನಸಂಖ್ಯೆ ಇಳಿಯುತ್ತಿರುವಾಗ ಹಳೆಯ ಕಾನೂನುಗಳಿಗೇಕೆ ಶಿಕ್ಷೆ?ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ – 2006ರ ಹಳೆಯ ಕೇಸ್ ಮರುಜೀವಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅಸ್ತು; ಇಂದು ಮಧ್ಯರಾತ್ರಿಯಿಂದಲೇ ಜಾರಿಯಾರು ಸೂಳೆಯರು? : ದೇಹ, ಸಮ್ಮತಿ ಮತ್ತು ದ್ವಂದ್ವ ನೈತಿಕತೆಯ ಸುತ್ತಬೊಗಸೆಗೆ ದಕ್ಕಿದ್ದು-99 : ಸರ್ವಾಧಿಕಾರಿ ದೇಶದಲ್ಲಿ ಭಟ್ಟಂಗಿಗಳು ‘ಕ್ಲಿಕ್’; ಎದುರಾಡಿದರೆ ‘ಕಿಕ್’!ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾದಚಾರಿಗಳಿಗೆ ಕೊನೆಗೂ ಸುರಕ್ಷತೆಯ ಆಸರೆ: ಮೂರು ಜಂಕ್ಷನ್‌ಗಳಲ್ಲಿ ₹60 ಲಕ್ಷದ ಕಾಮಗಾರಿಟ್ರಂಪ್‌ಗೆ ಅಮೆರಿಕದ ಜನರ ರಾಜಕೀಯ ಏಟು: ಭಾರತದ ಮೇಲೆ ಇದರ ಪರಿಣಾಮವೇನು?ಕರ್ನಾಟಕದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಿಸ್ಕೂಲ್‌ಗಳು ಮುಚ್ಚುವ ಭೀತಿ: 4 ಲಕ್ಷ ಮಹಿಳೆಯರ ಉದ್ಯೋಗಕ್ಕೆ ಕುತ್ತುಅಮೆರಿಕ ಮಧ್ಯಂತರ ಚುನಾವಣೆ: ಸೋಲೊಪ್ಪಿಕೊಂಡು ಡೆಮಾಕ್ರಟ್‌ಗಳಿಗೆ ಅಭಿನಂದನೆ ಸಲ್ಲಿಸಿದ ಟ್ರಂಪ್ರಾಹುಲ್ ಗಾಂಧಿ ಜಾರ್ಜ್ ಸೋರೋಸ್‌ನಿಂದ ಹಣ ಪಡೆದು ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪಕಾಂಗ್ರೆಸ್‌ನದ್ದು ‘ಸ್ಟಿಂಗ್ ಕರ್ನಾಟಕ ಮಾಡೆಲ್’: ಜೆಡಿಎಸ್ ವಾಗ್ದಾಳಿಎಂಎಲ್‌ಸಿ ಸೋಲಿನ ಹೊಣೆ ಹೊತ್ತು 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿ: ಕೆ.ಎನ್. ರಾಜಣ್ಣಹಿರಿಯೂರು ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ: ಎಚ್‌ಡಿಕೆ

ಗರ್ಭಿಣಿಯರು – ಮೊದಲ ಹಂತದ ಚಿಕಿತ್ಸಾ ಪದ್ಧತಿ

PPeepal Media

Peepal Media ಆರೋಗ್ಯ

• 2 ನಿಮಿಷದ ಓದು

ಗರ್ಭಿಣಿಯರು – ಮೊದಲ ಹಂತದ ಚಿಕಿತ್ಸಾ ಪದ್ಧತಿ

ಸಮಸ್ಯೆಯಿಲ್ಲದ ಹೆರಿಗೆ ಮತ್ತು ಆರೋಗ್ಯವಂತ ಮಗುವಿನ ಜನನಕ್ಕಾಗಿ ಕಾಲ ಕಾಲಕ್ಕೆ ಸರಿಯಾಗಿ ತಪಾಸಣೆ, ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಬಹಳ ಮುಖ್ಯ- ಶೋಭಲತಾ ಸಿ, ಆರೋಗ್ಯ ಕಾರ್ಯಕರ್ತೆ

ಹಿಂದೆ ಸ್ತ್ರೀ ತಾನು ಗರ್ಭವತಿ ಎಂದು ತಿಳಿದಾಗ ನಾಚಿಕೊಳ್ಳುವ ಕಾಲವೊಂದಿತ್ತು. ಆದರೆ ಇಂದು ಕಾಲ ಬದಲಾಗಿದೆ. ಗರ್ಭದ ಪ್ರತಿ ಹಂತದಲ್ಲೂ ವೈದ್ಯರ ಸಂಪರ್ಕದಲ್ಲಿರಬೇಕಾದುದು ತಾಯಿ – ಮಗುವಿನ ಆರೋಗ್ಯದ ದೃಷ್ಟಿಯಿಂದ ಹಿತಕರ. ಇಂದು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು  ಮನೆ – ಮನೆಗೆ ಬಂದು ಆರೋಗ್ಯ ವಿಚಾರಿಸಿ, ಚಿಕಿತ್ಸಾ ಮಾಹಿತಿ ನೀಡುತ್ತಿದ್ದರೂ, ಕೆಲವರು ಅದನ್ನು ಲೆಕ್ಕಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಅನುಭವದಿಂದ ತಿಳಿದು ಬರುತ್ತದೆ.

ಗರ್ಭದ ಮೊದಲ ಹಂತದಲ್ಲಿ ಮುಟ್ಟಿನ ದಿನ ತಪ್ಪಿದಾಗ ಆಸ್ಪತ್ರೆ ಅಥವಾ ಲ್ಯಾಬ್ ನ್ನು ಸಂಪರ್ಕಿಸಿ, ಅಥವಾ ಸ್ವತಃ ಕಾರ್ಡ್ ಪರೀಕ್ಷೆಯ ಮೂಲಕ ಗರ್ಭಿಣಿ ಹೌದಾ ಅಲ್ಲವಾ ಎಂದು ಖಚಿತಪಡಿಸಿಕೊಳ್ಳಬೇಕು. ಗರ್ಭಿಣಿ ಎಂದು ತಿಳಿದರೂ ಕೆಲವರು ವೈದ್ಯರ ಬಳಿ ಹೋಗದೆ ಸುಮ್ಮನಿರುವುದೂ ಇದೆ. ಆದರೆ, ಆರೋಗ್ಯಪೂರ್ಣ ಮಗುವನ್ನು ಪಡೆಯಲು ವೈದ್ಯರ ಸೂಕ್ತ ಸಲಹೆ ಅನಿವಾರ್ಯ. ಮೊದಲಾಗಿ ಗರ್ಭವು ಗರ್ಭಾಶಯದಲ್ಲಿಯೇ ಬೆಳೆಯುತ್ತಿದೆ ಎಂಬುದನ್ನು ಸ್ಕ್ಯಾನಿಂಗ್ ಮೂಲಕ ಖಚಿತ ಪಡಿಸಿಕೊಳ್ಳುವುದು, ಮಗುವಿನ ಹೃದಯ ಬಡಿತ ಚೆನ್ನಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವೊಮ್ಮೆ ಗರ್ಭವು ಗರ್ಭನಾಳದಲ್ಲಿ ಬೆಳೆದು ಗರ್ಭನಾಳ ಒಡೆದು, ರಕ್ತಸ್ರಾವದಿಂದ ಗರ್ಭಿಣಿಯ ಜೀವಕ್ಕೆ ಅಪಾಯ ಉಂಟಾಗುವ ಸನ್ನಿವೇಶಗಳೂ ಸಂಭವಿಸುವುದಿದೆ. ಗರ್ಭನಾಳದಲ್ಲಿ  ಗರ್ಭವು ಬೆಳೆಯುತ್ತಿದ್ದರೆ, ವೈದ್ಯರು ಸೂಕ್ತ ಚಿಕಿತ್ಸೆಯ ಮೂಲಕ ಪರಿಹಾರ ಸೂಚಿಸುತ್ತಾರೆ. ಅಂತಹ ಸಂದರ್ಭದಲ್ಲಿ ವೈದ್ಯರ ಸಲಹೆಯನ್ನು ನಿರ್ಲಕ್ಷಿಸುವವರೂ ಇದ್ದಾರೆ. ಆದರೆ, ಅದು ಜೀವದೊಂದಿಗಿನ ಆಟವಾಗಿ ಪರಿಣಮಿಸುವುದು. 

ಗರ್ಭವು ಅಡೆತಡೆಯಿಲ್ಲದೆ ಬೆಳೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡ ವೈದ್ಯರು ಗರ್ಭಿಣಿಯ ಆರೋಗ್ಯಕ್ಕೆ ಬೇಕಾದ ವಿಟಮಿನ್ ಔಷಧಿಗಳನ್ನು ನೀಡುತ್ತಾರೆ. ಗರ್ಭದ ಮೊದಲ ಹಂತದಲ್ಲಿ ವಾಕರಿಕೆ, ತಲೆ ಸುತ್ತುವಿಕೆ ಹೆಚ್ಚಿನ ಸ್ತ್ರೀಯರಿಗೆ ಸಾಮಾನ್ಯ. ಮೂರರಿಂದ ನಾಲ್ಕು ತಿಂಗಳ ಕಾಲಾವಧಿಯಲ್ಲಿ ವೈದ್ಯರ ಸಲಹೆಯಂತೆ ನಡೆದುಕೊಂಡು ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಕೆಲವೊಮ್ಮೆ ಡ್ರಿಪ್ಸ್ ಕೂಡಾ ಹಾಕಿಕೊಳ್ಳಬೇಕಾಗಿ ಬರಬಹುದು. ವಾಂತಿಗೆ ಹೆದರಿ ಆಹಾರ – ನೀರಿನ ಸೇವನೆಯನ್ನು ಕಡಿಮೆ ಮಾಡಿದರೆ ಇತರ ಕೆಲವು ಕಾಯಿಲೆಗಳಿಗೆ ತುತ್ತಾಗ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಗಾಳಿಮಾತುಗಳನ್ನು ಕೇಳದೆ ವೈದ್ಯರ ಸಂಪರ್ಕದಲ್ಲಿರಬೇಕಾದುದು ಅತ್ಯಾವಶ್ಯಕ. ಸಾಮಾನ್ಯವಾಗಿ ನಾಲ್ಕು ತಿಂಗಳ ಬಳಿಕ ವಾಕರಿಕೆ ಕಡಿಮೆಯಾಗುವುದು.

ಗರ್ಭದ ಎರಡರಿಂದ ಮೂರನೆಯ ತಿಂಗಳ ಕಾಲಾವಧಿಯಲ್ಲಿ ಮಗುವಿನ ಬೆಳವಣಿಗೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಎರಡನೇ ಹಂತದ ಸ್ಕ್ಯಾನ್ ಮಾಡುತ್ತಾರೆ. ಆರೋಗ್ಯಪೂರ್ಣ (ಅಶಕ್ತವಲ್ಲದ) ಮಗುವಿಗೆ ಜನ್ಮ ನೀಡುವಂತೆ ಮಾಡುವುದೇ ಇದರ ಉದ್ದೇಶವಾಗಿರುತ್ತದೆ. ಪದೇ ಪದೇ ಸ್ಕ್ಯಾನ್ ಮಾಡುವುದರಿಂದ ತಾಯಿ – ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಎಂಬ ತಪ್ಪು ಅಭಿಪ್ರಾಯ ಕೆಲವರಲ್ಲಿದೆ.  ದುಷ್ಪರಿಣಾಮ ಉಂಟಾಗುವ ಯಾವುದೇ ಸಲಹೆ ಸೂಚನೆಗಳನ್ನು ವೈದ್ಯರು ನೀಡುವುದಿಲ್ಲ ಎಂಬುದನ್ನು ಇಂತಹವರು ಮನದಟ್ಟು  ಮಾಡಿಕೊಳ್ಳಬೇಕಾಗಿದೆ.

ಗರ್ಭಾವಧಿಯ ಮೊದಲ ಹಂತದಲ್ಲಿ ರಕ್ತಸ್ರಾವ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ನೀಡುವ ಚಿಕಿತ್ಸೆಗೆ ಒಳಗಾಗಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ  ತಾಯಿ – ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಮಸ್ಯೆಯಿಲ್ಲದ ಹೆರಿಗೆ ಮತ್ತು ಆರೋಗ್ಯವಂತ ಮಗುವಿನ ಜನನಕ್ಕಾಗಿ ಕಾಲ ಕಾಲಕ್ಕೆ ಸರಿಯಾಗಿ ತಪಾಸಣೆ, ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಬಹಳ ಮುಖ್ಯ.

ಶೋಭಲತಾ ಸಿ

ಆರೋಗ್ಯ ಕಾರ್ಯಕರ್ತೆ, ಕಾಸರಗೋಡು

ಇದನ್ನೂ ಓದಿ-ದೈಹಿಕ ಶುಚಿತ್ವ | ಬೆವರಿನ ವಾಸನೆ ಬಗ್ಗೆ ಅಸಡ್ಡೆ ಬೇಡ

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ಆರೋಗ್ಯ ವಿಭಾಗ

ಸಂಬಂಧಿತ ಸುದ್ದಿಗಳು