ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ನೇತನ್ಯಾಹು ನಂತರ ಈಗ ಟ್ರಂಪ್! ಜಾಗೃತರಾದ ಅಮೆರಿಕದ ಮತದಾರಭಾರತದ ಸ್ವಂತ AI ಕ್ರಾಂತಿಗೆ ಹೊಸ ವೇಗ: 22 ಭಾಷೆಗಳಲ್ಲಿ ಕಾರ್ಯನಿರ್ವಹಿಸುವ EKA-1 ಬಿಡುಗಡೆ, ಕನ್ನಡಕ್ಕೂ ಹೊಸ ಅವಕಾಶವೇ?ಕರ್ನಾಟಕದ ನೆಲದಲ್ಲಿ ಮಹಾರಾಷ್ಟ್ರ ಪೊಲೀಸರ ತನಿಖೆಗೆ ಹೈಕೋರ್ಟ್ ಬ್ರೇಕ್: ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸುವಂತಿಲ್ಲಸರ್ಕಾರಿ ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ ಬಳಕೆ? ಕೇಂದ್ರ ಸಚಿವ ಲಲನ್ ಸಿಂಗ್ ಹೇಳಿಕೆಬಸ್ ದರ | ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ: ಬಿ ವೈ ವಿಜಯೇಂದ್ರಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ – ಆರ್. ಅಶೋಕ್ಸಾಲು ಸಮಸ್ಯೆಗಳು ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ – GBA ಚುನಾವಣೆ ಇನ್ನಷ್ಟು ವಿಳಂಬಬಿಜೆಪಿಯ ಫಾರಿನ್‌ ಫಂಡ್‌ ಕಥೆರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್‌ ಆರೋಪಎರಡು ಮಕ್ಕಳ ನೀತಿಗೆ ಸುಪ್ರೀಂ ಕೋರ್ಟ್ ಮರುಪರಿಶೀಲನೆಯ ಅಸ್ತು: ಜನಸಂಖ್ಯೆ ಇಳಿಯುತ್ತಿರುವಾಗ ಹಳೆಯ ಕಾನೂನುಗಳಿಗೇಕೆ ಶಿಕ್ಷೆ?ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ – 2006ರ ಹಳೆಯ ಕೇಸ್ ಮರುಜೀವಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅಸ್ತು; ಇಂದು ಮಧ್ಯರಾತ್ರಿಯಿಂದಲೇ ಜಾರಿಯಾರು ಸೂಳೆಯರು? : ದೇಹ, ಸಮ್ಮತಿ ಮತ್ತು ದ್ವಂದ್ವ ನೈತಿಕತೆಯ ಸುತ್ತಬೊಗಸೆಗೆ ದಕ್ಕಿದ್ದು-99 : ಸರ್ವಾಧಿಕಾರಿ ದೇಶದಲ್ಲಿ ಭಟ್ಟಂಗಿಗಳು ‘ಕ್ಲಿಕ್’; ಎದುರಾಡಿದರೆ ‘ಕಿಕ್’!ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾದಚಾರಿಗಳಿಗೆ ಕೊನೆಗೂ ಸುರಕ್ಷತೆಯ ಆಸರೆ: ಮೂರು ಜಂಕ್ಷನ್‌ಗಳಲ್ಲಿ ₹60 ಲಕ್ಷದ ಕಾಮಗಾರಿಟ್ರಂಪ್‌ಗೆ ಅಮೆರಿಕದ ಜನರ ರಾಜಕೀಯ ಏಟು: ಭಾರತದ ಮೇಲೆ ಇದರ ಪರಿಣಾಮವೇನು?ಕರ್ನಾಟಕದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಿಸ್ಕೂಲ್‌ಗಳು ಮುಚ್ಚುವ ಭೀತಿ: 4 ಲಕ್ಷ ಮಹಿಳೆಯರ ಉದ್ಯೋಗಕ್ಕೆ ಕುತ್ತುಅಮೆರಿಕ ಮಧ್ಯಂತರ ಚುನಾವಣೆ: ಸೋಲೊಪ್ಪಿಕೊಂಡು ಡೆಮಾಕ್ರಟ್‌ಗಳಿಗೆ ಅಭಿನಂದನೆ ಸಲ್ಲಿಸಿದ ಟ್ರಂಪ್ರಾಹುಲ್ ಗಾಂಧಿ ಜಾರ್ಜ್ ಸೋರೋಸ್‌ನಿಂದ ಹಣ ಪಡೆದು ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪಕಾಂಗ್ರೆಸ್‌ನದ್ದು ‘ಸ್ಟಿಂಗ್ ಕರ್ನಾಟಕ ಮಾಡೆಲ್’: ಜೆಡಿಎಸ್ ವಾಗ್ದಾಳಿ

ನೇತನ್ಯಾಹು ನಂತರ ಈಗ ಟ್ರಂಪ್! ಜಾಗೃತರಾದ ಅಮೆರಿಕದ ಮತದಾರ

PPeepal Media Desk

Peepal Media Desk ಅಂಕಣ

• 6 ನಿಮಿಷದ ಓದು

ನೇತನ್ಯಾಹು ನಂತರ ಈಗ ಟ್ರಂಪ್! ಜಾಗೃತರಾದ ಅಮೆರಿಕದ ಮತದಾರ

“..ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತಕ್ಕೆ ಭರ್ತಿ 2 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ, ದೇಶದ ಜನತೆ ನೀಡಿದ ತೀರ್ಪು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಿದ್ದೆಗೆಡಿಸಿದೆ..” ವಿಮರ್ಶಕ ವಿ.ಆರ್.ಕಾರ್ಪೆಂಟರ್ ಅವರ ಬರಹದಲ್ಲಿ

ಅಮೆರಿಕದ ರಾಜಕೀಯ ಇತಿಹಾಸದಲ್ಲಿ 2026ರ ಮಧ್ಯಂತರ ಚುನಾವಣೆ ಕೇವಲ ಒಂದು ಚುನಾವಣೆಯಾಗಿ ಉಳಿಯುವುದಿಲ್ಲ; ಅದೊಂದು ಮಹತ್ವದ ತಿರುವಾಗಿ, ಆಡಳಿತಾರೂಢರ ಅಹಂಕಾರಕ್ಕೆ ಬಿದ್ದ ಭಾರಿ ಪೆಟ್ಟಾಗಿ ದಾಖಲಾಗುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿ ಗೋಚರಿಸುತ್ತಿವೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತಕ್ಕೆ ಭರ್ತಿ 2 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ, ದೇಶದ ಜನತೆ ನೀಡಿದ ತೀರ್ಪು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಿದ್ದೆಗೆಡಿಸಿದೆ.

ನವೆಂಬರ್ 3ರಂದು ನಡೆದ ಚುನಾವಣೆಯ ಮತ ಎಣಿಕೆ ನವೆಂಬರ್ 4ರವರೆಗೂ ಮುಂದುವರಿದಿದ್ದು, ಅಸೋಸಿಯೇಟೆಡ್ ಪ್ರೆಸ್ (AP) ಬಿಡುಗಡೆ ಮಾಡಿರುವ ಆರಂಭಿಕ ಫಲಿತಾಂಶಗಳು ಅಮೆರಿಕದ ರಾಜಕೀಯ ಸಮೀಕರಣ ಬುಡಮೇಲಾಗುತ್ತಿರುವುದನ್ನು ಸ್ಪಷ್ಟವಾಗಿ ಸಾರುತ್ತಿವೆ. ಇದು ಕೇವಲ ಎರಡು ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ನಡುವಿನ ಕೇವಲ ಕುರ್ಚಿಗಳ ಕಾದಾಟವಲ್ಲ. ಬದಲಾಗಿ, ಕಳೆದ ಎರಡು ವರ್ಷಗಳಲ್ಲಿ ಟ್ರಂಪ್ ಆಡಳಿತ ಜಾರಿಗೆ ತಂದ ನೀತಿಗಳು, ತೆಗೆದುಕೊಂಡ ನಿರ್ಧಾರಗಳು ಮತ್ತು ಆಡಳಿತದ ಶೈಲಿಗೆ ಅಲ್ಲಿನ ಪ್ರಜ್ಞಾವಂತ ಮತದಾರರು ನೀಡಿದ ಕಟುವಾದ ರಾಜಕೀಯ ಪ್ರತಿಕ್ರಿಯೆ.

ಡೆಮಾಕ್ರಟಿಕ್ ಪಕ್ಷ ಸೆನೆಟ್ನಲ್ಲಿ ಬಹುಮತದ ಕತ್ತುಪಟ್ಟಿ ಹಿಡಿದಿರುವುದು ಮಾತ್ರವಲ್ಲ. ಪ್ರತಿನಿಧಿಗಳ ಸಭೆಯಲ್ಲಿಯೂ ಬಹುಮತದತ್ತ ದಾಪುಗಾಲು ಹಾಕುತ್ತಿರುವುದು ಟ್ರಂಪ್ ಪಾಲಿಗೆ ಮುಂದಿನ ದಿನಗಳು ಸುಗಮವಾಗಿಲ್ಲ ಎಂಬುದರ ಮುನ್ಸೂಚನೆಯಾಗಿದೆ.

ಮೊದಲು ಅಮೆರಿಕದ ಕಾಂಗ್ರೆಸ್ನ ಮೇಲ್ಮನೆಯಾದ ಸೆನೆಟ್ನ ಕಡೆಗೆ ಕಣ್ಣು ಹಾಯಿಸೋಣ. 100 ಸ್ಥಾನಗಳ ಬಲ ಹೊಂದಿರುವ ಸೆನೆಟ್, ಅಮೆರಿಕದ ಶಾಸನಾತ್ಮಕ ಪ್ರಕ್ರಿಯೆಯಲ್ಲಿ ಅಕ್ಷರಶಃ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೊಸ ಕಾನೂನುಗಳ ರಚನೆ, ತಿದ್ದುಪಡಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ, ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ಪ್ರಮುಖ ಆಡಳಿತಾತ್ಮಕ ಹುದ್ದೆಗಳ ಅನುಮೋದನೆಯಂತಹ ಅತ್ಯಂತ ಸೂಕ್ಷ್ಮ ಹಾಗೂ ಪ್ರಬಲ ಅಧಿಕಾರಗಳು ಇರುವುದು ಇದೇ ಸೆನೆಟ್ ಕೈಯಲ್ಲಿ.

2026ರ ಈ ಚುನಾವಣೆಗೆ ಮುನ್ನ, ರಿಪಬ್ಲಿಕನ್ ಪಕ್ಷ 53 ಸ್ಥಾನಗಳೊಂದಿಗೆ ಸೆನೆಟ್ನಲ್ಲಿ ಅಬಾಧಿತ ಬಹುಮತ ಹೊಂದಿತ್ತು. ಡೆಮಾಕ್ರಟಿಕ್ ಪಕ್ಷ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಸ್ವತಂತ್ರ ಸದಸ್ಯರ ಬಲ ಕೇವಲ 47 ಕ್ಕೆ ಸೀಮಿತವಾಗಿತ್ತು. ಆದರೆ, ಮತದಾರರ ನಾಡಿಮಿಡಿತ ಬದಲಾಗಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ಡೆಮಾಕ್ರಟಿಕ್ ಪಕ್ಷ ಕನಿಷ್ಠ 6 ರಿಪಬ್ಲಿಕನ್ ಹಿಡಿತದ ಸ್ಥಾನಗಳನ್ನು ನಿರ್ದಾಕ್ಷಿಣ್ಯವಾಗಿ ಕಸಿದುಕೊಂಡು ಸೆನೆಟ್ನ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಈಗಿನ ತಾಜಾ ಗ್ರಾಫಿಕ್ಸ್ ಆಧಾರದ ಮೇಲೆ ಹೇಳುವುದಾದರೆ, ಡೆಮಾಕ್ರಟಿಕ್ ಪಕ್ಷ 52 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, ರಿಪಬ್ಲಿಕನ್ ಪಕ್ಷ 41 ಸ್ಥಾನಗಳಿಗೆ ಕುಸಿದಿದೆ. ಇನ್ನೂ ಕೆಲವು ಸ್ಥಾನೆಗಳ ಎಣಿಕೆ ಬಾಕಿ ಇರುವುದರಿಂದ ಇದು ಆ ಕ್ಷಣದ ಅಂಕಿ-ಅಂಶವಾದರೂ, ಟ್ರಂಪ್ ಆಡಳಿತಕ್ಕೆ ಸೆನೆಟ್ನಲ್ಲಿ ಆಗಿರುವ ಹಾನಿ ಅಪಾರ.

ಈ ಚುನಾವಣೆಯ ಅತ್ಯಂತ ರೋಚಕ ಮತ್ತು ಟೀಕಾತ್ಮಕವಾಗಿ ವಿಶ್ಲೇಷಿಸಲೇಬೇಕಾದ ಅಂಶವೆಂದರೆ ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಲ್ಲೇ ಡೆಮಾಕ್ರಟಿಕ್ ಪಕ್ಷ ಮಾಡಿರುವ ಅಚ್ಚರಿಯ ಪ್ರವೇಶ. ದಶಕಗಳಿಂದ ಕನ್ಸರ್ವೇಟಿವ್ ರಾಜಕಾರಣದ ಪ್ರಯೋಗಶಾಲೆಗಳಂತಿದ್ದ, ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಮತದಾರರೇ ತುಂಬಿ ತುಳುಕುತ್ತಿದ್ದ ಟೆಕ್ಸಾಸ್, ಕಾನ್ಸಾಸ್, ದಕ್ಷಿಣ ಕೆರೊಲಿನಾ, ಉತ್ತರ ಕೆರೊಲಿನಾ ಮತ್ತು ಓಹಿಯೊದಂತಹ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ವಿಶೇಷವಾಗಿ ಟೆಕ್ಸಾಸ್ನ ಸೆನೆಟ್ ಕದನ ಇಡೀ ಅಮೆರಿಕದ ಗಮನ ಸೆಳೆದಿದೆ. ರಿಪಬ್ಲಿಕನ್ನರ ಪರಮಾವಧಿ ಪ್ರಾಬಲ್ಯದ ನೆಲೆಯಾಗಿದ್ದ ಟೆಕ್ಸಾಸ್ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೇಮ್ಸ್ ತಲಾರಿಕೊ ಅವರ ಗೆಲುವು ಕೇವಲ ವ್ಯಕ್ತಿಯೊಬ್ಬರ ಗೆಲುವಲ್ಲ, ಅದು ಟ್ರಂಪ್ ಆಡಳಿತದ ನೀತಿಗಳ ವಿರುದ್ಧದ ಸಾಂಸ್ಥಿಕ ಬಂಡಾಯ. ಅದೇ ರೀತಿ ಓಹಿಯೊದಲ್ಲಿ ಶೆರೋಡ್ ಬ್ರೌನ್ ಅವರ ದಿಗ್ವಿಜಯ, ಉತ್ತರ ಕೆರೊಲಿನಾದಲ್ಲಿ ರಾಯ್ ಕೂಪರ್ ಅವರ ಗೆಲುವು ರಾಷ್ಟ್ರೀಯ ರಾಜಕೀಯ ಲೆಕ್ಕಾಚಾರಗಳನ್ನೇ ತಲೆಕೆಳಗು ಮಾಡಿವೆ. ಇದು ಒಂದೇ ರಾಜ್ಯದ ಭಿನ್ನಮತವಲ್ಲ; ಅಮೆರಿಕದ ಮೂಲೆ ಮೂಲೆಗಳಲ್ಲಿ ವಿವಿಧ ರಾಜ್ಯಗಳ ಮತದಾರರು ಸ್ಥಳೀಯ ಮತ್ತು ರಾಷ್ಟ್ರೀಯ ವಿಚಾರಗಳನ್ನು ಒರೆಗೆ ಹಚ್ಚಿ, ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿರುವುದರ ಸ್ಪಷ್ಟ ದ್ಯೋತಕ.

ಸೆನೆಟ್ನಲ್ಲಿ ಅನುಭವಿಸಿದ ಆಘಾತದ ಬೆನ್ನಲ್ಲೇ, ಅಮೆರಿಕ ಕಾಂಗ್ರೆಸ್ನ ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿಪ್ಸ್’ನಲ್ಲೂ ಟ್ರಂಪ್ ಪಾಳೆಯಕ್ಕೆ ಮರ್ಮಾಘಾತ ಕಾದಿರುವ ಮುನ್ಸೂಚನೆ ಸಿಕ್ಕಿದೆ. ಒಟ್ಟು 435 ಸ್ಥಾನಗಳಿರುವ ಹೌಸ್ನಲ್ಲಿ, ಬಹುಮತಕ್ಕೆ 218 ಸ್ಥಾನಗಳ ಅಗತ್ಯವಿದೆ. ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಈ ಚುನಾವಣೆಯಲ್ಲಿ, ಹೌಸ್ನ ಎಲ್ಲಾ 435 ಸ್ಥಾನಗಳಿಗೂ ಅಗ್ನಿಪರೀಕ್ಷೆ ಎದುರಾಗುತ್ತದೆ.

ಲಭ್ಯವಾಗಿರುವ 328 ಸ್ಥಾನಗಳ ಫಲಿತಾಂಶದಲ್ಲಿ, ಡೆಮಾಕ್ರಟಿಕ್ ಪಕ್ಷ ಬರೋಬ್ಬರಿ 205 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, ರಿಪಬ್ಲಿಕನ್ ಪಕ್ಷ ಕೇವಲ 123 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಡೆಮಾಕ್ರಟಿಕ್ ಪಕ್ಷಕ್ಕೆ ಹೌಸ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಬೇಕಿರುವುದು ಇನ್ನು ಕೇವಲ 13 ಸ್ಥಾನಗಳು ಮಾತ್ರ. ಅಂದರೆ, ಉಳಿದಿರುವ ಎಣಿಕೆಗಳಲ್ಲಿ ಈ ಗುರಿ ತಲುಪುವುದು ಡೆಮಾಕ್ರಟಿಕ್ ಪಕ್ಷಕ್ಕೆ ಕಷ್ಟದ ಮಾತೇನಲ್ಲ.

ಒಂದು ವೇಳೆ ಹೌಸ್ನ ನಿಯಂತ್ರಣವೂ ಡೆಮಾಕ್ರಟಿಕ್ ಪಕ್ಷದ ಪಾಲಾದರೆ, ಟ್ರಂಪ್ ಆಡಳಿತಕ್ಕೆ ಶಾಸನಾತ್ಮಕವಾಗಿ ಅಕ್ಷರಶಃ ದಿಗ್ವಂಧನ ಬೀಳಲಿದೆ. ಆಡಳಿತದ ಬಜೆಟ್ ಮಂಡನೆ, ಟ್ರಂಪ್ ಅವರ ಬಹುನಿರೀಕ್ಷಿತ ತೆರಿಗೆ ನೀತಿ, ವಿವಾದಾತ್ಮಕ ವಲಸೆ ನೀತಿ, ಬಿಲಿಯನ್ಗಟ್ಟಲೆ ಡಾಲರ್ ಸರ್ಕಾರಿ ವೆಚ್ಚ ಮತ್ತು ಒಟ್ಟಾರೆ ಆಡಳಿತದ ಕಾರ್ಯವೈಖರಿಯ ಮೇಲೆ ಹೌಸ್ನಲ್ಲಿ ಇನ್ನು ಮುಂದೆ ಉಗ್ರ ಸ್ವರೂಪದ ಚರ್ಚೆ, ವಿರೋಧ ಮತ್ತು ತನಿಖೆಗಳು ನಡೆಯುವುದು ಖಚಿತ.

ಈ ಚುನಾವಣೆಯ ಅತ್ಯಂತ ಪ್ರಧಾನ ಮತ್ತು ವಿಶ್ಲೇಷಣಾತ್ಮಕ ಪ್ರಶ್ನೆ ಎಂದರೆ, ಟ್ರಂಪ್ ಆಡಳಿತದ ವಿರುದ್ಧ ಮತದಾರರ ಈ ಮಟ್ಟದ ಅಸಮಾಧಾನಕ್ಕೆ ಕಾರಣವೇನು? ಅಮೆರಿಕದ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಪಕ್ಷವು ಮೊದಲ 2 ವರ್ಷಗಳ ನಂತರದ ಮಧ್ಯಂತರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವುದು ಹೊಸ ತ ವಿದ್ಯಮಾನವೇನಲ್ಲ. ಈ ಚುನಾವಣೆಗಳನ್ನು ಅಧ್ಯಕ್ಷರ ಕಾರ್ಯವೈಖರಿಯನ್ನು ಅಳೆಯುವ ಮೌಲ್ಯಮಾಪನ ಪರೀಕ್ಷೆ’ ಎಂದೇ ಕರೆಯಲಾಗುತ್ತದೆ. ಆದರೆ 2026ರ ಚುನಾವಣೆಯ ಹಿನ್ನಡೆ ಕೇವಲ ಸಹಜ ಅಲೆಯಲ್ಲ. ಎಪಿ ವರದಿಯ ಪ್ರಕಾರ, ಮತದಾರರ ಆಕ್ರೋಶದ ಮೂಲ ಇರುವುದ ಜೇಬಿನಲ್ಲಿ ಮತ್ತು ಅಡುಗೆಮನೆಯಲ್ಲಿ.

ಹೌದು, ಗಗನಕ್ಕೇರಿರುವ ಜೀವನ ವೆಚ್ಚ, ಹಣದುಬ್ಬರದಿಂದ ಉಂಟಾದ ಆರ್ಥಿಕ ಉಸಿರುಗಟ್ಟುವಿಕೆ ಮತ್ತು ಸಾಮಾನ್ಯ ಮನುಷ್ಯನನ್ನು ಮರೆತ ಸರ್ಕಾರದ ಕಾರ್ಯವೈಖರಿ ಇಲ್ಲಿ ನಿರ್ಣಾಯಕವಾಗಿವೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಆಕಾಶ ಮುಟ್ಟಿರುವ ಮನೆ ಬಾಡಿಗೆ, ದುಬಾರಿಯಾದ ಆರೋಗ್ಯ ಸೇವೆ, ಆಹಾರ ಮತ್ತು ಇಂಧನ ವೆಚ್ಚಗಳು ಅಮೆರಿಕದ ಸಾಮಾನ್ಯ ಕುಟುಂಬಗಳ ಬೆನ್ನೆಲುಬು ಮುರಿದಿವೆ.

ಜಗತ್ತಿನ ಅತಿ ಶ್ರೀಮಂತ ರಾಷ್ಟ್ರದಲ್ಲಿಯೂ ಸಾಮಾನ್ಯ ಕುಟುಂಬಗಳ ಆರ್ಥಿಕ ಸಂಕಷ್ಟಗಳು ರಾಜಕೀಯ ಕ್ರಾಂತಿಗೆ ನಾಂದಿ ಹಾಡಬಲ್ಲವು ಎಂಬುದನ್ನು ಈ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ಆದರೆ, ಕೇವಲ ಆರ್ಥಿಕತೆ ಮಾತ್ರವಲ್ಲ; ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿ, ಆಡಳಿತದಲ್ಲಿನ ಪಾರದರ್ಶಕತೆಯ ಕೊರತೆ, ಮಿತಿಮೀರಿದ ಅಧಿಕಾರದ ಬಳಕೆ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ವಾಯತ್ತತೆಯ ಮೇಲಿನ ಪ್ರಹಾರ ಮತ್ತು ಅಧ್ಯಕ್ಷರ ದಬ್ಬಾಳಿಕೆಯ ರಾಜಕೀಯ ಕಾರ್ಯವೈಖರಿಯ ಬಗ್ಗೆಯೂ ಮತದಾರರು ತಮ್ಮ ತೀರ್ಪನ್ನು ನೀಡಿದ್ದಾರೆ.

ಈ ಹಂತದಲ್ಲಿ ‘ಮಧ್ಯಂತರ ಚುನಾವಣೆ’ ಅಥವಾ ಮಿಡ್ಟರ್ಮ್ ಎಲೆಕ್ಷನ್ ಎಂದರೇನು ಮತ್ತು ಅದರ ರಾಜಕೀಯ ತೂಕವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅಮೆರಿಕದ ಅಧ್ಯಕ್ಷರಿಗೆ 4 ವರ್ಷಗಳ ಅಧಿಕಾರಾವಧಿ ಇರುತ್ತದೆ. ಆದರೆ ಕಾಂಗ್ರೆಸ್ನ ಕೆಳಮನೆಯಾದ ಹೌಸ್ನ ಪ್ರತಿಯೊಬ್ಬ ಸದಸ್ಯನ ಅವಧಿ ಕೇವಲ 2 ವರ್ಷ. ಇನ್ನು ಮೇಲ್ಮನೆಯಾದ ಸೆನೆಟ್ ಸದಸ್ಯರ ಅವಧಿ 6 ವರ್ಷಗಳಾಗಿದ್ದು, ಪ್ರತಿ 2 ವರ್ಷಗಳಿಗೊಮ್ಮೆ ಸರಿಸುಮಾರು ಮೂರನೇ ಒಂದು ಭಾಗದಷ್ಟು ಸೆನೆಟ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.

ಅಧ್ಯಕ್ಷೀಯ ಚುನಾವಣೆಯ ಕರಾರುವಾಕ್ ಮಧ್ಯಭಾಗದಲ್ಲಿ ಬರುವ ಕಾರಣಕ್ಕಾಗಿಯೇ ಇದನ್ನು ಮಧ್ಯಂತರ ಚುನಾವಣೆ ಎನ್ನಲಾಗುತ್ತದೆ. ಈ ಚುನಾವಣೆಯ ಫಲಿತಾಂಶ ಆಡಳಿತದ ಮುಂದಿನ ಭವಿಷ್ಯವನ್ನು ಬರೆಯುತ್ತದೆ. ಅಧ್ಯಕ್ಷರು ತಮ್ಮದೇ ಪಕ್ಷದ ಬಹುಮತದೊಂದಿಗೆ ಕಾಂಗ್ರೆಸ್ನ ಎರಡೂ ಸದನಗಳನ್ನು ನಿಯಂತ್ರಿಸಿದರೆ, ಅವರು ತಂದ ಯಾವುದೇ ಬಿಲ್ ಸುಲಭವಾಗಿ ಕಾನೂನಾಗುತ್ತದೆ. ಆದರೆ, ಈಗ ಆಗುತ್ತಿರುವಂತೆ ಪ್ರತಿಪಕ್ಷವು ಕಾಂಗ್ರೆಸ್ನ ಒಂದು ಅಥವಾ ಎರಡೂ ಸದನಗಳಲ್ಲಿ ಬಹುಮತ ಸಾಧಿಸಿದರೆ, ಅಧ್ಯಕ್ಷರ ಶಾಸನಾತ್ಮಕ ರೆಕ್ಕೆಗಳನ್ನು ಕತ್ತರಿಸಿದಂತೆಯೇ ಸರಿ. 2026ರ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಪಕ್ಷ ಸೆನೆಟ್ನ ನಿಯಂತ್ರಣ ಪಡೆದಿರುವುದು ಮತ್ತು ಹೌಸ್ನಲ್ಲಿಯೂ ಬಹುಮತದ ಸನಿಹದಲ್ಲಿರುವುದು, ಟ್ರಂಪ್ ಆಡಳಿತದ ಮುಂದಿನ 2 ವರ್ಷಗಳ ಹಾದಿಯನ್ನು ಮುಳ್ಳಿನ ಹಾಸಿಗೆಯನ್ನಾಗಿ ಮಾಡಲಿದೆ.

ಹಾಗಾದರೆ, ಟ್ರಂಪ್ ಅವರ ಮುಂದಿನ 2 ವರ್ಷಗಳ ಆಡಳಿತ ಹೇಗಿರಬಹುದು? ಸೆನೆಟ್ ಮತ್ತು ಹೌಸ್ ಎರಡರಲ್ಲೂ ಡೆಮಾಕ್ರಟಿಕ್ ಪಕ್ಷದ ಕಾವಲುಗಾರರು ಕುಳಿತರೆ, ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ಸಮತೋಲನದ ಹೊಸ, ಬಿರುಗಾಳಿಯ ಅಧ್ಯಾಯವೇ ಆರಂಭವಾಗಲಿದೆ. ವಿಶ್ಲೇಷಣಾತ್ಮಕವಾಗಿ ನೋಡುವುದಾದರೆ ನಾಲ್ಕು ಪ್ರಮುಖ ಸವಾಲುಗಳು ಟ್ರಂಪ್ ಮುಂದಿವೆ. ಮೊದಲನೆಯದಾಗಿ, ಟ್ರಂಪ್ ಆಡಳಿತದ ಪ್ರತಿಯೊಂದು ನೀತಿ, ತೀರ್ಮಾನ ಮತ್ತು ಒಪ್ಪಂದಗಳ ಕುರಿತು ಕಾಂಗ್ರೆಸ್ನಲ್ಲಿ ಇನ್ನು ಮುಂದೆ ಕಠಿಣ ಪರಿಶೀಲನೆ ಮತ್ತು ಉನ್ನತ ಮಟ್ಟದ ತನಿಖೆಗಳು ಶುರುವಾಗಲಿವೆ.

ಎರಡನೆಯದಾಗಿ, ಆಡಳಿತದ ಬಜೆಟ್ ಮಂಡನೆ ಮತ್ತು ಹಣಕಾಸು ಹಂಚಿಕೆಯ ನಿರ್ಧಾರಗಳಿಗೆ ಡೆಮಾಕ್ರಟಿಕ್ ಪಕ್ಷದಿಂದ ಪ್ರತಿ ಹೆಜ್ಜೆಯಲ್ಲೂ ಅಡೆತಡೆ ಎದುರಾಗಲಿದೆ.

ಮೂರನೆಯದಾಗಿ, ಟ್ರಂಪ್ ಅವರ ಅಚ್ಚುಮೆಚ್ಚಿನ ವಲಸೆ ನೀತಿ, ಕಾರ್ಪೊರೇಟ್ ತೆರಿಗೆ ವ್ಯವಸ್ಥೆ, ಆರೋಗ್ಯ ಸೇವೆ ಮತ್ತು ಸರ್ಕಾರಿ ವೆಚ್ಚದ ವಿಚಾರಗಳಲ್ಲಿ ಉಭಯ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಲಿದೆ.

ನಾಲ್ಕನೆಯದಾಗಿ, ಅಧ್ಯಕ್ಷರು ಮಾಡಬಹುದಾದ ಯಾವುದೇ ನ್ಯಾಯಾಂಗ ಮತ್ತು ಆಡಳಿತಾತ್ಮಕ ಉನ್ನತ ಕನೇಮಕಾತಿಗಳಿಗೆ ಸೆನೆಟ್‌ನ ಅನುಮೋದನೆ ಕಡ್ಡಾಯವಾಗಿರುವುದರಿಂದ, ಡೆಮಾಕ್ರಟೆಕ್ ಪಕ್ಷದ ಒಪ್ಪಿಗೆಯಿಲ್ಲದೆ ಟ್ರಂಪ್ ತಮ್ಮ ಆಪ್ತರನ್ನು ಹುದ್ದೆಗಳಲ್ಲಿ ಕೂರಿಸುವುದು ಅಸಾಧ್ಯ. ಆದಾಗ್ಯೂ, ಸಂವಿಧಾನವು ಅಧ್ಯಕ್ಷರಿಗೆ ತನ್ನದೇ ಆದ ವಿಶೇಷ ಅಧಿಕಾರಗಳನ್ನು ನೀಡಿದೆ.

ಕಾಂಗ್ರೆಸ್ ಕೈತಪ್ಪಿದ ಮಾತ್ರಕ್ಕೆ ಟ್ರಂಪ್ ಅಧಿಕಾರ ಸಂಪೂರ್ಣ ಶೂನ್ಯವಾಗುವುದಿಲ್ಲ. ಕಾನೂನು ರೂಪಿಸುವ ಪ್ರಕ್ರಿಯೆ, ಅಧ್ಯಕ್ಷರ ಬಳಿಯಿರುವ ಪ್ರಬಲ ‘ವೀಟೋ’ (Veto) ಅಧಿಕಾರ ಇವೆಲ್ಲವೂ ಮುಂದಿನ ದಿನಗಳಲ್ಲಿ ಬಹುದೊಡ್ಡ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಲಿವೆ. ಡೆಮಾಕ್ರಟಿಕ್ ಪಕ್ಷವೂ ತಾನು ಅಂದುಕೊಂಡಿದ್ದೆಲ್ಲವನ್ನೂ ಸುಲಭವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ.

ಈ 2026ರ ಫಲಿತಾಂಶವನ್ನು ಕೇವಲ ಈ ಕ್ಷಣದ ಸೋಲು-ಗೆಲುವಾಗಿ ನೋಡಬಾರದು; ಇದು 2028ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮುನ್ನುಡಿಯಾಗಿದೆ. ಮಧ್ಯಂತರ ಚುನಾವಣೆಗಳು ನೇರವಾಗಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ ಎಂಬುದು ನಿಜವಾದರೂ, ಅವು ರಾಜಕೀಯ ಪಕ್ಷಗಳ ಸಂಘಟನಾ ಸಾಮರ್ಥ್ಯ, ಆಳವಾದ ಮತದಾರರ ಮನೋಭಾವ, ಭಾವ, ಭವಿಷ್ಯದ ಅಭ್ಯರ್ಥಿಗಳ ಜನಪ್ರಿಯತೆ ಮತ್ತು ಮುಂದಿನ ಚುನಾವಣಾ ತಂತ್ರಗಳ ಕುರಿತು ದಿಕ್ಕೂಚಿಯಾಗಿ ಕೆಲಸ ಮಾಡುತ್ತವೆ.

ಡೆಮಾಕ್ರಟಿಕ್ ಪಕ್ಷಕ್ಕೆ ಈ ಗೆಲುವು ಮೃತಸಂಜೀವಿನಿಯಂತಿದ್ದು, ತನ್ನ ತಳಮಟ್ಟದ ಸಂಘಟನೆಯನ್ನು ಪುನರ್‌ನಿರ್ಮಿಸಲು ಮತ್ತು ಮುಂದಿನ ರಾಷ್ಟ್ರೀಯ ಚುನಾವಣೆಗೆ ಬಲಿಷ್ಠ ರಾಜಕೀಯ ನೆಲೆ ಸಿದ್ಧಪಡಿಸಲು ಅಪಾರ ವಿಶ್ವಾಸ ತುಂಬಿದೆ.

ಮತ್ತೊಂದೆಡೆ, ರಿಪಬ್ಲಿಕನ್ ಪಕ್ಷಕ್ಕೆ ಇದು ಎಚ್ಚರಿಕೆಯ ಗಂಟೆ. ತನ್ನ ಚುನಾವಣಾ ಕಾರ್ಯತಂತ್ರ, ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಮತ್ತು ಆಡಳಿತದ ಆದ್ಯತೆಗಳನ್ನು ತಕ್ಷಣವೇ ಮರುಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಪ್ರಭಾವ ಕುಗ್ಗುತ್ತಿದೆಯೇ ಮತ್ತು ರಿಪಬ್ಲಿಕನ್ ಪಕ್ಷದ ಭವಿಷ್ಯದ ನಾಯಕತ್ವ ಯಾರ ಕೈಗೆ ಹೋಗಬೇಕು ಎಂಬ ಆಂತರಿಕ ಚರ್ಚೆಗಳು ಈ ಫಲಿತಾಂಶದ ನಂತರ ಸ್ಫೋಟಗೊಳ್ಳುವುದು ನಿಶ್ಚಿತ.

ಅಂತಿಮವಾಗಿ, ಈ ಇಡೀ ಪ್ರಕ್ರಿಯೆ ನೀಡುತ್ತಿರುವ ಪ್ರಜಾಪ್ರಭುತ್ವದ ಸಂದೇಶವಾದರೂ ಏನು? ಅಮೆರಿಕದ ಈ ಚುನಾವಣೆಯ ಫಲಿತಾಂಶವನ್ನು ಕೇವಲ ಒಂದು ಪಕ್ಷದ ಗೆಲುವು. ಮತ್ತೊಂದರ ಸೋಲು ಎಂಬ ಕಿರಿದಾದ ಚೌಕಟ್ಟಿನಲ್ಲಿ ಬಂಧಿಸಲಾಗದು. ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಪೂರ್ಣ ಅಧಿಕಾರ ನೀಡಿದ ಅದೇ ಮತದಾರ, ಕೇವಲ 2 ವರ್ಷಗಳ ನಂತರ ಅದೇ ಪಕ್ಷದ ಕಾರ್ಯವೈಖರಿಯನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸುವ ತಾಕತ್ತು ತೋರಿದ್ದಾನೆ. ಆಡಳಿತದ ವಿರುದ್ಧ, ನಾಯಕರ ಅಹಂಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಪ್ರಜಾಪ್ರಭುತ್ವ ವ್ಯವಸ್ಥೆ ಒದಗಿಸಿರುವ ಈ ಅಸ್ತವನ್ನು ಅಮೆರಿಕನ್ನರು ಅತ್ಯಂತ ತ ಪ್ರಜ್ಞಾಪೂರ್ವಕವಾಗಿ ಪ್ರಜ್ಞಾಪೂರ್ವಕ ಬಳಸಿದ್ದಾರೆ. ಅಧಿಕಾರದಲ್ಲಿರುವವರನ್ನು ಮತ್ತೆ ಮತ್ತೆ ಪರಿಶೀಲಿಸುವ, ಎಚ್ಚರಿಸುವ ಪ್ರಕ್ರಿಯೆಯೇ ಪ್ರಜಾಪ್ರಭುತ್ವದ ಜೀವನಾಡಿ.

2026ರ ಈ ಆರಂಭಿಕ ಫಲಿತಾಂಶಗಳು ಹೇಳುತ್ತಿರುವ ಅತಿ ದೊಡ್ಡ ಸತ್ಯವೆಂದರೆ; ಅಧಿಕಾರ ಶಾಶ್ವತವಲ್ಲ, ನಾಯಕರು ಅಜೇಯರಲ್ಲ, ಕೇವಲ ಜನರ ವಿಶ್ವಾಸವೇ ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಏಕೈಕ ಮತ್ತು ನಿಜವಾದ ಆಧಾರ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅಧಿಕಾರಾವಧಿಯಲ್ಲಿ ಇನ್ನೂ 2 ವರ್ಷಗಳು ಬಾಕಿ ಇವೆ. ಆದರೆ ಈ ಕಠಿಣವಾದ ಮುಂದಿನ 2 ವರ್ಷಗಳಲ್ಲಿ ಅವರು ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಹೇಗೆ ಬದಲಿಸಿಕೊಳ್ಳುತ್ತಾರೆ? ವಿರೋಧಿ ಪಾಳೆಯದ ನಿಯಂತ್ರಣದಲ್ಲಿರುವ ಕಾಂಗ್ರೆಸ್‌ನೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ? ಮತ್ತು ಕೈತಪ್ಪಿ ಹೋಗುತ್ತಿರುವ ಮತದಾರರ ವಿಶ್ವಾಸವನ್ನು ಮರಳಿ ಗಳಿಸಲು ಯಾವ ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ ಎಂಬುದು ಅಮೆರಿಕದ ಮಾತ್ರವಲ್ಲ, ಇಡೀ ವಿಶ್ವದ ಮುಂದಿನ ರಾಜಕೀಯ ಇತಿಹಾಸವನ್ನು ನಿರ್ಧರಿಸಲಿದೆ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು