ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕಬ್ಬಿನ ಬೆಲೆ ನಿಗದಿ ವಿವಾದ: ಬೆಳಗಾವಿಯಲ್ಲಿ ಜೈಲ್ ಭರೋ ಚಳವಳಿ, ರೈತರು ಪೊಲೀಸ್ ವಶಕ್ಕೆಎಸ್‌ಐಆರ್ ವೇಳೆ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಕುಟುಂಬದ 6 ಸದಸ್ಯರ ಹೆಸರು ಮರುಸೇರ್ಪಡೆಗೆ ಹೈಕೋರ್ಟ್ ಆದೇಶಕಬ್ಬಿಗೆ ಪ್ರತಿ ಟನ್‌ಗೆ 3600 ರೂ ನೀಡಲು ನಿರ್ಧರಿಸಿದ್ದೇವೆ – ಸತೀಶ್‌ ಜಾರಕಿಹೊಳಿ ಘೋಷಣೆಮೂರು ತಿಂಗಳ ಬಳಿಕ ಚುನಾವಣಾ ಆಯೋಗದ ನಿರ್ಧಾರ ಬದಲಾವಣೆ: ಐಟಿ ವಿಭಾಗದ ಮೇಲ್ವಿಚಾರಣೆ ಮತ್ತೆ ಹಿರಿಯ ಅಧಿಕಾರಿಗೆಯುಜಿಸಿ ನಿಯಮಗಳ ಮರುಪರಿಶೀಲನೆಗೆ ಸಮಿತಿ ರಚಿಸುವ ಕುರಿತು ಯೋಚಿಸಲಾಗುತ್ತಿದೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರಹಾಸನದಲ್ಲಿ ಜನನುಡಿ ಪೂರ್ವಭಾವಿ ಸಭೆ – ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಬರ ಪರಿಹಾರ 2,500 ರೂ.ನಿಂದ 5,000 ರೂ.ಗೆ ಹೆಚ್ಚಳ – ಡಿ.ಕೆ. ಶಿವಕುಮಾರ್ರೇಷನ್ ಕಾರ್ಡ್ ಇ-ಕೆವೈಸಿಗೆ ಕೇವಲ 10 ದಿನ ಬಾಕಿ – 41.33 ಲಕ್ಷ ಫಲಾನುಭವಿಗಳು ಬಾಕಿ ಉಳಿಕೆಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ – BK ಹರಿಪ್ರಸಾದ್ಓದೋಣ ಬಾ ಗುರು – 3 : ಗ್ರಾಮ ಭಾರತದ ಬದುಕು ಬವಣೆಬೆಂಗಳೂರು | ಎಸ್‌ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ಪ್ರತಿಭಟನೆಚರ್ಚೆ ನಡೆಸುವುದು ಬೀದಿಯಲ್ಲಲ್ಲ, ಸಂಸತ್ತಿಗೆ ಬನ್ನಿ: ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಿರುಗೇಟುಹವಾಮಾನ ಬದಲಾವಣೆ ಎದುರಿಸಲು ಜಗತ್ತು ಸಿದ್ಧವಾಗಿಲ್ಲ! ವಾರ್ಷಿಕ 305 ಬಿಲಿಯನ್ ಡಾಲರ್ ಅಗತ್ಯ: ವಿಶ್ವಸಂಸ್ಥೆ ವರದಿಭವ್ಯ ದೃಶ್ಯ ವೈಭವಕ್ಕೆ ಮೆಚ್ಚುಗೆ, ಕಥೆಯ ಆಳಕ್ಕೆ ಟೀಕೆ: ಜಾಗತಿಕ ಮಟ್ಟದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ‘ರಾಮಾಯಣ’!ಬಸ್‌ ದರ ಏರಿಕೆ | ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡಿ ಪ್ರತಿಭಟಿಸಿದ ಬಿಜೆಪಿ; ಅಶೋಕ್‌ ಸೇರಿದಂತೆ ಹಲವರು ವಶಕ್ಕೆಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಿ: ಐಟಿ ಕಂಪನಿಗಳಿಗೆ ಡಿ.ಕೆ. ಶಿವಕುಮಾರ್ ಮನವಿಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲವೇ? ಭಾಷೆ, ಸ್ಥಳೀಯರ ಹಕ್ಕು ಮತ್ತು ಕಾರ್ಪೊರೇಟ್ ಹೊಣೆಗಾರಿಕೆಯ ಸುತ್ತ ಹೊಸ ಸಂಘರ್ಷ!ಬೆಳಗಾವಿಯಲ್ಲಿ ಕಬ್ಬಿನ ದರ ವಿವಾದಕ್ಕೆ ತಾತ್ಕಾಲಿಕ ತೆರೆ; ಟನ್‌ಗೆ ₹3,600 ನಿಗದಿಜನಾಕ್ರೋಶಕ್ಕೆ ಬಗ್ಗಿತಾ ECI!? ; ಫಾರ್ಮ್ 6ರಿಂದ SIR ಘೋಷಣೆ ಪ್ರತ್ಯೇಕಿಸಿ, ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಚುನಾವಣಾ ಆಯೋಗವಿಶ್ವದ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತವೇ ಕಿಂಗ್! ದೇಶಗಳ ರ‍್ಯಾಂಕಿಂಗ್‌ನಲ್ಲೂ ಆರನೇ ಸ್ಥಾನ; ಹಳ್ಳ ಹಿಡಿದ ‘ಸ್ವಚ್ಛ ಭಾರತ ಮಿಷನ್’

ಓದೋಣ ಬಾ ಗುರು – 3 : ಗ್ರಾಮ ಭಾರತದ ಬದುಕು ಬವಣೆ

PPeepal Media Desk

Peepal Media Desk ಅಂಕಣ

• 2 ನಿಮಿಷದ ಓದು

ಓದೋಣ ಬಾ ಗುರು – 3 : ಗ್ರಾಮ ಭಾರತದ ಬದುಕು ಬವಣೆ

“..ಗ್ರಾಮ ಭಾರತದ ಬಹುತೇಕ ಕುಟುಂಬಗಳ ಕಥನದಂತಿದೆ ಡಾ.ಟಿಎಸ್ ಗೊರವರ ಅವರ “ಆಡು ಕಾಯೋ ಹುಡುಗನ ದಿನಚರಿ” ಕೃತಿ. ಬೆನ್ನು ಬಿಡದ ಬಡತನದ ನಡುವೆ ಇವರದ್ದೂ ಹೋರಾಟದ ಬದುಕು..” ಪುಸ್ತಕ ವಿಮರ್ಶೆಯ ಮಾಡಿದ್ದಾರೆ ಶಿಲ್ಪಾ ಮ್ಯಾಗೇರಿ ಅವರು ತಪ್ಪದೇ ಓದಿ

ಪತ್ರಕರ್ತರೊಬ್ಬರು “ಅಜ್ಜ ನಿಮ್ಮ ಬಡತನಕ್ಕೆ ಯಾವಾಗ ಮುಕ್ತಿ ಸಿಗುತ್ತೆ” ಎಂದು ಪ್ರಶ್ನಿಸಿದರಂತೆ ಬೇರೆ ಯಾರಾದರೂ ಆಗಿದ್ದರೆ ಅದ್ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಏನೋ ಆದರೆ ಬೇಂದ್ರೆಯವರ ಉತ್ತರ ಕೇಳುಗನಿಗೇ ತಬ್ಬಿಬ್ಬು ಮಾಡಿ ಯೋಚಿಸುವಂತೆ ಮಾಡಿತು.

ಅವರ ಉತ್ತರ ಹೀಗಿತ್ತು, “ತಮ್ಮಾ… ನನ್ನ ಬಡತನಕ್ಕ ಮುಕ್ತಿ ಬರುವಂಗ ಕಾಣವಲ್ದು, ಯಾಕಂದ್ರ ಮುಕ್ತಿಗೇ ಬಡತನ ಬಂದಂಗೈತಿ” ಎಂದರಂತೆ ಅಲ್ಲಿಗೆ ಕೇಳಿದಾತ ಮಾತು ಬಾರದಂತಾಗಿ ಹೋದ. ಅಂದರೆ ಅವರಿಗೆ ಕಟ್ಟಿಕಾಡುತ್ತಿದ್ದ ಬಡತನದ ಬಾಹುಗಳು ಇವರಿಗೆ ಮಿಸುಗಾಡದಂತೆ, ಉಸಿರಾಡದಂತೆ ಬಿಗಿದ ಆ ಬಿಗಿ ಕೊನೆಯವರೆಗೂ ಸಡಿಲಿಸಲಿಲ್ಲ ಎಂಬುದು ವಿಚಿತ್ರವಾದರೂ ಸತ್ಯ.

ಬೇಂದ್ರೆಯವರ ಸಮಗ್ರ ಕಾವ್ಯ ಬರಹಗಳಲ್ಲಿ ಬಹುತೇಕ ಸಾಲುಗಳು ನೋವು ಬಡತನದಲ್ಲಿ ಮಿಂದೆದ್ದು ಬಂದಂತ ಭಾವ ಮೂಡದಿರದು. ಇಲ್ಲಿ ಈ ಹೊತ್ತಿನ ಬರೆಹಕ್ಕೆ ಬೇಂದ್ರೆಯವರ ಬದುಕಿನ ಕೆನೆಪದರವನ್ನು ನೆನೆಯುವಂತೆ ಮಾಡಿದ್ದು ಡಾ. ಟಿ.ಎಸ್.ಗೊರವರ ಅವರ ‘ಆಡು ಕಾಯೋ ಹುಡುಗನ ದಿನಚರಿ’ ಅನುಭವ ಕಥನ. ಗೊರವರ ಅವರ ಈ ಸಂಕಲನ ಓದಿ ಮುಗಿಸುವ ಹೊತ್ತಿಗೆ ನನ್ನೊಳಗೆ ನಾನಿರದೆ ಆ ಜಾಗವೆಲ್ಲ ಇವರ ಬದುಕಿನ ವೈಚಿತ್ರ್ಯ ವೈರುಧ್ಯಗಳೇ ತುಂಬಿ ಹೋದವು.

ಗ್ರಾಮ ಭಾರತದ ಬಹುತೇಕ ಕುಟುಂಬಗಳ ಕಥನದಂತಿದೆ ಈ ಕೃತಿ. ಬೆನ್ನು ಬಿಡದ ಬಡತನದ ನಡುವೆ ಇವರದ್ದೂ ಹೋರಾಟದ ಬದುಕು. ಸೃಜನಶೀಲತೆ, ಅದಮ್ಯ ಚೈತನ್ಯ, ಬರೆಯುವ ಉತ್ಕಟತೆ, ಸವಾಲುಗಳಿಗೆ ಎದೆಯೊಡ್ಡುವ ಉಮೇದು, ಉತ್ಸಾಹ… ಹೀಗೆ ಬಾಲ್ಯದ ಹತ್ತಾರು ಅನುಭವಗಳನ್ನು ಈ ಕೃತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಈ ಬಗೆಯ ಅವರ ಬದುಕಿನ ದಿನಗಳು ಕಣ್ಣ ಮುಂದೆ ಸರಿದಂತಾಗಿ ಓದುಗರಾದ ನಮ್ಮಲ್ಲೂ ಸಾವಿರ ರೇಖೆಗಳು ಹಾದು ಹೋದಂತೆನಿಸುವುದು.

ಎಲ್ಲರ ಬದುಕಿನ ರೀತಿ ಭಿನ್ನವಾಗಿರುವಂತೆ ರೂಢಿ ಆಚರಣೆ ಮತ್ತು ಆಹಾರ ಪದ್ಧತಿಗಳು ಬೇರೆ ಬೇರೆಯಾಗಿರುತ್ತವೆ ನಿಜ. ಆದರೆ ಬಾಲ್ಯಕ್ಕಿಷ್ಟು ಎಂಬಂತೆ ನಿಸರ್ಗವೇ ಒಂದಿಷ್ಟು ವಿಫುಲ ಅವಕಾಶಗಳನ್ನು ಒದಗಿಸಿಕೊಟ್ಟಿರುತ್ತದೆ. ಈ ದಿನಗಳಲ್ಲಿ ಉಂಡಾಡಿದ ಊಟ, ಆಟಗಳು ಇಡೀ ಬದುಕಿಗೆ ಸೇತುವೆಯಾಗುತ್ತವೆ. ಈ ಕೃತಿಯಲ್ಲಿ ಗೊರವರ ಅವರು ಬರೆದುಕೊಂಡ ಸಾಲುಗಳು ಹೀಗಿವೆ: ” ಅವ್ವ ಕೊಡುತ್ತಿದ್ದ ದಪ್ಪನೆಯ ರೊಟ್ಟಿ ಬದನೆಕಾಯಿ, ಸೌತೆಕಾಯಿ ಪಲ್ಯವೇ ಸಾರ್ವತ್ರಿಕ ಊಟವೆಂದು ಭಾವಿಸಿದ್ದೆ ಸಿಹಿ ತಿನಿಸೆಂದರೆ ಸಜ್ಜಕವೊಂದೇ ಎಂದು ತಿಳಿದಿದ್ದೆ. ಆದರೊಮ್ಮ ಮದುವೆಯಲ್ಲಿ ನೋಡಿ ಬೂಂದಿ ಎಂಬ ಖಾದ್ಯವಿದೆ ಎಂದು ತಿಳಿಯಿತು.’ ಎಂದು.

ಮತ್ತೊಂದು ಅಧ್ಯಾಯದಲ್ಲಿ ‘ನನಗಿಂತ ಅದೆಷ್ಟೋ ಹೊತ್ತು ತಡವಾಗಿ ಮಲಗುವ ಅವ್ವ ನಾನು ಹೇಳುವುದಕ್ಕಿಂತ ಮೊದಲೇ ಎದ್ದು ಕೆಲಸ ಮಾಡುತ್ತಿರುವುದನ್ನು ನೋಡಿ ಜೀವ ಚುರ್ರೆನ್ನುತ್ತಿತ್ತು. ಹುಟ್ಟಿದರೆ ಯಾವತ್ತೂ ಅವ್ವನಾಗಿ ಹುಟ್ಟಬಾರದು ಅಂತ ಅನಿಸುತ್ತಿತ್ತು’ ಎಂದು ಬರೆಯುತ್ತಾರೆ. ಇದು ಪ್ರತಿ ಅವ್ವಂದಿರ ಪಡಿಪಾಟಲನ್ನು ತೀವ್ರವಾಗಿ ಚಿತ್ರಿಸುತ್ತದೆ.

ಭಾವೈಕ್ಯತೆಯ ತಾಣವಾಗಿರುವ ಹಳ್ಳಿಗಳಲ್ಲಿ ಇನ್ನೂ ಹಾಲು ಮನಗಳಿವೆ ಎಂಬುದಕ್ಕೆ ಈ ಸಂಕಲನದಲ್ಲಿ ಬರುವ ಮೊಹರಂ ಹಬ್ಬವೇ ಸಾಕ್ಷಿ. ಪ್ರೀತಿ ವಿಶ್ವಾಸ ಸಹಬಾಳ್ವೆ ಎಲ್ಲವನ್ನೂ ನಾವು ಹಳ್ಳಿಗರಿಂದ ಕಲಿಯಬೇಕು. ಈಗೀಗ ಗ್ರಾಮಗಳನ್ನು ರಾಜಕೀಯ ಮನೆಮಾಡಿರುವುದು ನೋವಿನ ಸಂಗತಿ.

ಹೀಗೆ ಈ ಕೃತಿಯ ಹತ್ತಾರು ಸಾಲುಗಳು ನಮ್ಮನ್ನು ತಡೆದು ನಿಲ್ಲಿಸುತ್ತವೆ. ಆಳವನ್ನು ಕಲಕುತ್ತವೆ ನಮ್ಮ ದೇಶದಲ್ಲಿ ಬಾಲ್ಯದ ಸವಿಯನ್ನು ಅರಿಯದ ಅದೆಷ್ಟೋ ಮಕ್ಕಳಿದ್ದಾರೆ. ಇಂತಹ ಹತ್ತಾರು ವಿಷಯಗಳು, ಹಳ್ಳಿಯ ಜವಾರಿ ಮಂದಿಯ ದಿನವಹಿಯನ್ನು ಕಣ್ಣಿಗೆ ಕಟ್ಟಿ ಕೊಡುತ್ತಾರೆ.

ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ತಾತ್ಕಾಲಿಕ ಪ್ರಾಧ್ಯಾಪಕರಾಗಿರುವ ಡಾ. ಟಿ.ಎಸ್. ಗೊರವರ ಅವರು ಗದಗ ಜಿಲ್ಲೆಯ ರಾಜೂರು ಎಂಬ ಪುಟ್ಟ ಗ್ರಾಮದವರು. ಕನ್ನಡದ ಅತ್ಯುತ್ತಮ ಕಥೆಗಾರರಾದ ಅವರು ಹತ್ತು ವರ್ಷಗಳಿಂದ ‘ಅಕ್ಷರ ಸಂಗಾತ’ ಸಾಹಿತ್ಯ ಮಾಸ ಪತ್ರಿಕೆಯನ್ನು ಸತ್ವಪೂರ್ಣವಾಗಿ ವಿಶಿಷ್ಟವಾಗಿ ರೂಪಿಸುತ್ತ ಓದುಗರಿಗೆ ತಲುಪಿಸುತ್ತಿದ್ದಾರೆ.

‘ಆಡು ಕಾಡೋ ಹುಡುಗನ ದಿನಚರಿ’ ಅವರ ಆರಂಭಿಕ ಸಂಕಲನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದು ಪಠ್ಯವಾಗೆ ಗ್ರಾಮೀಣ ಭಾಗದ ಮಧ್ಯಮ ವರ್ಗದ ನಮ್ಮ ಆಜೂ ಬಾಜು ಮನೆಯ ಹುಡುಗನ ಕಥೆಯಂತಿರುವ ಈ ಸಂಕಲನದ ಗದ್ಯದ ಚೆಲುವನ್ನು ಓದಿಯೇ ಅನುಭವಿಸಬೇಕು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು