ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ದೇಶಗಳ ಸರಕು ಹಡಗುಗಳ ಸಂಚಾರಕ್ಕೆ – ಇರಾನ್ ನಿಂದ ಮುಕ್ತ ಅವಕಾಶಕಬ್ಬಿನ ಬೆಲೆ ನಿಗದಿ ವಿವಾದ: ಬೆಳಗಾವಿಯಲ್ಲಿ ಜೈಲ್ ಭರೋ ಚಳವಳಿ, ರೈತರು ಪೊಲೀಸ್ ವಶಕ್ಕೆಎಸ್‌ಐಆರ್ ವೇಳೆ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಕುಟುಂಬದ 6 ಸದಸ್ಯರ ಹೆಸರು ಮರುಸೇರ್ಪಡೆಗೆ ಹೈಕೋರ್ಟ್ ಆದೇಶಕಬ್ಬಿಗೆ ಪ್ರತಿ ಟನ್‌ಗೆ 3600 ರೂ ನೀಡಲು ನಿರ್ಧರಿಸಿದ್ದೇವೆ – ಸತೀಶ್‌ ಜಾರಕಿಹೊಳಿ ಘೋಷಣೆಮೂರು ತಿಂಗಳ ಬಳಿಕ ಚುನಾವಣಾ ಆಯೋಗದ ನಿರ್ಧಾರ ಬದಲಾವಣೆ: ಐಟಿ ವಿಭಾಗದ ಮೇಲ್ವಿಚಾರಣೆ ಮತ್ತೆ ಹಿರಿಯ ಅಧಿಕಾರಿಗೆಯುಜಿಸಿ ನಿಯಮಗಳ ಮರುಪರಿಶೀಲನೆಗೆ ಸಮಿತಿ ರಚಿಸುವ ಕುರಿತು ಯೋಚಿಸಲಾಗುತ್ತಿದೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರಹಾಸನದಲ್ಲಿ ಜನನುಡಿ ಪೂರ್ವಭಾವಿ ಸಭೆ – ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಬರ ಪರಿಹಾರ 2,500 ರೂ.ನಿಂದ 5,000 ರೂ.ಗೆ ಹೆಚ್ಚಳ – ಡಿ.ಕೆ. ಶಿವಕುಮಾರ್ರೇಷನ್ ಕಾರ್ಡ್ ಇ-ಕೆವೈಸಿಗೆ ಕೇವಲ 10 ದಿನ ಬಾಕಿ – 41.33 ಲಕ್ಷ ಫಲಾನುಭವಿಗಳು ಬಾಕಿ ಉಳಿಕೆಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ – BK ಹರಿಪ್ರಸಾದ್ಓದೋಣ ಬಾ ಗುರು – 3 : ಗ್ರಾಮ ಭಾರತದ ಬದುಕು ಬವಣೆಬೆಂಗಳೂರು | ಎಸ್‌ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ಪ್ರತಿಭಟನೆಚರ್ಚೆ ನಡೆಸುವುದು ಬೀದಿಯಲ್ಲಲ್ಲ, ಸಂಸತ್ತಿಗೆ ಬನ್ನಿ: ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಿರುಗೇಟುಹವಾಮಾನ ಬದಲಾವಣೆ ಎದುರಿಸಲು ಜಗತ್ತು ಸಿದ್ಧವಾಗಿಲ್ಲ! ವಾರ್ಷಿಕ 305 ಬಿಲಿಯನ್ ಡಾಲರ್ ಅಗತ್ಯ: ವಿಶ್ವಸಂಸ್ಥೆ ವರದಿಭವ್ಯ ದೃಶ್ಯ ವೈಭವಕ್ಕೆ ಮೆಚ್ಚುಗೆ, ಕಥೆಯ ಆಳಕ್ಕೆ ಟೀಕೆ: ಜಾಗತಿಕ ಮಟ್ಟದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ‘ರಾಮಾಯಣ’!ಬಸ್‌ ದರ ಏರಿಕೆ | ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡಿ ಪ್ರತಿಭಟಿಸಿದ ಬಿಜೆಪಿ; ಅಶೋಕ್‌ ಸೇರಿದಂತೆ ಹಲವರು ವಶಕ್ಕೆಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಿ: ಐಟಿ ಕಂಪನಿಗಳಿಗೆ ಡಿ.ಕೆ. ಶಿವಕುಮಾರ್ ಮನವಿಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲವೇ? ಭಾಷೆ, ಸ್ಥಳೀಯರ ಹಕ್ಕು ಮತ್ತು ಕಾರ್ಪೊರೇಟ್ ಹೊಣೆಗಾರಿಕೆಯ ಸುತ್ತ ಹೊಸ ಸಂಘರ್ಷ!ಬೆಳಗಾವಿಯಲ್ಲಿ ಕಬ್ಬಿನ ದರ ವಿವಾದಕ್ಕೆ ತಾತ್ಕಾಲಿಕ ತೆರೆ; ಟನ್‌ಗೆ ₹3,600 ನಿಗದಿಜನಾಕ್ರೋಶಕ್ಕೆ ಬಗ್ಗಿತಾ ECI!? ; ಫಾರ್ಮ್ 6ರಿಂದ SIR ಘೋಷಣೆ ಪ್ರತ್ಯೇಕಿಸಿ, ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಚುನಾವಣಾ ಆಯೋಗ

ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ದೇಶಗಳ ಸರಕು ಹಡಗುಗಳ ಸಂಚಾರಕ್ಕೆ – ಇರಾನ್ ನಿಂದ ಮುಕ್ತ ಅವಕಾಶ

ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ದೇಶಗಳ ಸರಕು ಹಡಗುಗಳ ಸಂಚಾರಕ್ಕೆ – ಇರಾನ್ ನಿಂದ ಮುಕ್ತ ಅವಕಾಶ

ಟೆಹ್ರಾನ್/ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳಿಂದ ಇರಾನ್ ವಿನಾಯಿತಿ ನೀಡಿದೆ. ಭಾರತ ಮಾತ್ರವಲ್ಲದೆ ಇರಾಕ್, ಕತಾರ್ ಮತ್ತು ಚೀನಾ ದೇಶಗಳ ಹಡಗುಗಳಿಗೂ ಇರಾನ್ ಹಾದಿ ಮುಕ್ತಗೊಳಿಸಿದೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ ಅಮೀರ್ ಹಯಾತ್ ಮೊಖದ್ದಮ್ ಅವರು ‘ಇರಾನಿಯನ್ ಸ್ಟೂಡೆಂಟ್ಸ್ ನ್ಯೂಸ್ ಏಜೆನ್ಸಿ’ಗೆ ನೀಡಿದ ಸಂದರ್ಶನದಲ್ಲಿ ಈ ವಿನಾಯಿತಿಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. “ನಾವು ಪ್ರಸ್ತುತ ಭಾರತ, ಚೀನಾ, ಇರಾಕ್ ಮತ್ತು ಕತಾರ್ ದೇಶಗಳಿಗೆ ಹೋರ್ಮುಜ್ ಜಲಸಂಧಿಯಲ್ಲಿನ ಸಂಚಾರ ನಿರ್ಬಂಧಗಳಿಂದ ವಿನಾಯಿತಿ ನೀಡಿದ್ದೇವೆ. ಈ ದೇಶಗಳ ಹಡಗುಗಳು ಮುಕ್ತವಾಗಿ ಸಂಚರಿಸಬಹುದು ಮತ್ತು ಅಮೆರಿಕದವರು ಕೂಡ ಇವುಗಳನ್ನು ತಡೆಯುವುದಿಲ್ಲ” ಎಂದು ಅವರು ಸಂದರ್ಶನದಲ್ಲಿ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ನಿಂದ ಯಾಕೆ ಈ ನಿರ್ಧಾರ?

ಇತರ ದೇಶಗಳ ಹಡಗುಗಳ ಮೇಲಿನ ನಿರ್ಬಂಧಗಳು ಮುಂದುವರಿದಿದ್ದರೂ, ಆಯ್ದ ದೇಶಗಳೊಂದಿಗೆ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇರಾನ್, ಹಾರ್ಮುಜ್ ಜಲಸಂಧಿಯ ಪ್ರವೇಶಾವಕಾಶವನ್ನು ಒಂದು ಸಾಧನವಾಗಿ (leverage) ಬಳಸಿಕೊಳ್ಳುತ್ತಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಟೆಹ್ರಾನ್‌ಗೆ ಅಗತ್ಯವಿರುವ ಬಹುತೇಕ ಔಷಧಗಳು ಇದೇ ಹಾದಿಯ ಮೂಲಕ ಬರಬೇಕಿದೆ.

ಪ್ರಸ್ತುತ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳಿಂದಾಗಿ ಅದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಔಷಧಿಯನ್ನು ಆಮದು ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಔಷಧ ತಯಾರಿಕಾ ರಫ್ತುದಾರ ದೇಶವಾಗಿರುವುದರಿಂದ, ಭಾರತದಿಂದ ಅತ್ಯಗತ್ಯ ವೈದ್ಯಕೀಯ ಸಾಮಗ್ರಿ ಹಾಗೂ ಔಷಧಿಗಳ ಪೂರೈಕೆಯನ್ನು ಸುಗಮಗೊಳಿಸಲು ಭಾರತೀಯ ಹಡಗುಗಳಿಗೆ ಈ ವಿನಾಯಿತಿ ನೀಡಲಾಗಿದೆ. ಇದೇ ವೇಳೆ, ಚೀನಾದ ವಿಷಯದಲ್ಲಿ ಈ ನಿರ್ಧಾರವು ಹೆಚ್ಚು ರಾಜಕೀಯ ಸ್ವರೂಪದ್ದಾಗಿದೆ ಎಂದು ತೋರುತ್ತದೆ. ಬೀಜಿಂಗ್‌ನ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಈ ವಿನಾಯಿತಿ ನೀಡಲಾಗಿದೆ ಎಂದು ಮೊಕದ್ದಮ್ ತಿಳಿಸಿದ್ದಾರೆ. ವಿಶೇಷವಾಗಿ ವ್ಯಾಪಾರ ಮತ್ತು ಇಂಧನ ವಲಯದಲ್ಲಿ ಚೀನಾವು ಇರಾನ್ ನ ಪ್ರಮುಖ ಪಾಲುದಾರ ದೇಶವಾಗಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಂದ ಇರಾನ್ ಒತ್ತಡವನ್ನು ಎದುರಿಸುತ್ತಿರುವಾಗ, ಚೀನಾದ ರಾಜತಾಂತ್ರಿಕ ಬೆಂಬಲ ಸಹ ಇರಾನ್ ಗೆ ಮಹತ್ವದ್ದಾಗಿದೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು