ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲುಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತೆ ಮುನ್ನೆಲೆಗೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರದ ಸಿದ್ಧತೆಬೆಂಗಳೂರಿನ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಬಂಧನಓಲಾ ಕಂಪನಿಗೆ ₹10 ಲಕ್ಷ ದಂಡ: ಗ್ರಾಹಕರನ್ನು ಹೆಚ್ಚುವರಿ ಪಾವತಿಗೆ ಪ್ರೇರೇಪಿಸುವ ಫೀಚರ್ ಸ್ಥಗಿತಗೊಳಿಸಲು CCPA ಆದೇಶಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ: 1,574 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದ ಭರವಸೆಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್ಒಂದು ಕಾಲದಲ್ಲಿ ಪತ್ರಕರ್ತರಿಗೆ ಕುರ್ಚಿ ಹಾಕುತ್ತಿದ್ದೆ: ಬಿಜೆಪಿಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟುಬುಲ್ಡೋಜರ್‌ ಈಗ ಉತ್ತರ ಪ್ರದೇಶದ ಬ್ರ್ಯಾಂಡ್: ಯೋಗಿ ಆದಿತ್ಯನಾಥ್ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆ? ಚೀನಾದಿಂದ ಭಾರತದ ಆಮದು ಮುಂದುವರಿಕೆ; ವಾಣಿಜ್ಯ ಕೊರತೆ 112 ಬಿಲಿಯನ್ ಡಾಲರ್‌ಗೆ ಏರಿಕೆವಿಶೇಷ ಸಂಸತ್ ಅಧಿವೇಶನ ನಡೆಸಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ; ಕಾಂಗ್ರೆಸ್‌ ಟೀಕೆಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹಲಂಚ ಪಡೆಯುತ್ತಿದ್ದಾಗ ರಾಮನಗರ ಉಪ ತಹಶೀಲ್ದಾರ್‌ ಅಂದರ್‌ – ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ2022ರ ಮತಾಂತರ ನಿಷೇಧ ಕಾಯ್ದೆಯನ್ನೇ ಮರುಜಾರಿಗೆ ಕಾಂಗ್ರೆಸ್ ಬದ್ಧ: ಬಿ.ಕೆ. ಹರಿಪ್ರಸಾದ್ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿE-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!

ಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!

PPeepal Media Desk

Peepal Media Desk ರಾಜಕೀಯ, ವಿಶೇಷ

• 2 ನಿಮಿಷದ ಓದು

ಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!

ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಇದೀಗ ಹೊಸ ರಾಜಕೀಯ ಚರ್ಚೆಯೊಂದು ಆರಂಭವಾಗಿದೆ. ಮೆಟ್ರೋ ನಿರ್ಮಾಣಕ್ಕೆ ಹಣ ಹಾಕಿದವರು ಯಾರು? ಯೋಜನೆಯ ಆರ್ಥಿಕ ಹೊರೆಯನ್ನು ಹೊತ್ತವರು ಯಾರು? ಆದರೆ ಉದ್ಘಾಟನೆಯ ಸಂದರ್ಭದಲ್ಲಿ ವೇದಿಕೆಯ ಮೇಲೆ ನಿಲ್ಲುವವರು ಯಾರು? ವಿದೇಶಗಳಲ್ಲಿ ಕಾರ್ಪೊರೇಟರ್ ಗಳು ಉದ್ಘಾಟನೆ ಮಾಡಿ ಮುಗಿಸಬಹುದಾದ ಕಾರ್ಯಕ್ರಮಕ್ಕೆ ಭಾರತದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಪ್ರಧಾನಿ ಕರೆಸುವ ಶೋಕಿ ದುಂದುವೆಚ್ಚವಷ್ಟೇ ಅಲ್ಲ ಶೋಕಿ ಕೂಡಾ.

ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎತ್ತರಿಸಿದ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಸಂಪರ್ಕ ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯೇ. ಆದರೆ ಈ ಅಭಿವೃದ್ಧಿಯ ಹಿಂದಿರುವ ಹಣಕಾಸಿನ ಲೆಕ್ಕಾಚಾರವನ್ನೂ ಒಮ್ಮೆ ತೆರೆದು ನೋಡಬೇಕು.

ಇಲ್ಲಿ ಆರಂಭವಾಗುವುದೇ ಅಸಲಿ ಲೆಕ್ಕಾಚಾರದ ಕತೆ!
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಲೆಕ್ಕಾಚಾರದ ಪ್ರಕಾರ, ಮೆಟ್ರೋ ಮೊದಲ, ಎರಡನೇ, 2ಎ, 2ಬಿ ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ 77,891 ಕೋಟಿ ರೂಪಾಯಿ. ಇದರಲ್ಲಿ ರಾಜ್ಯ ಸರ್ಕಾರದ ಪಾಲು 65,291 ಕೋಟಿ ರೂಪಾಯಿ. ಅಂದರೆ ಶೇ.83.8ರಷ್ಟು. ಕೇಂದ್ರ ಸರ್ಕಾರದ ಪಾಲು 12,600 ಕೋಟಿ ರೂಪಾಯಿ. ಅಂದರೆ ಕೇವಲ ಶೇ.16.2ರಷ್ಟು ಮಾತ್ರ.

ಇದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರದ್ದೇ ಆದ ಮತ್ತೊಂದು ಲೆಕ್ಕಾಚಾರವಿದೆ. ಕೇಂದ್ರ ಸರ್ಕಾರದ ಬದ್ಧತೆಯನ್ನು 41,558 ಕೋಟಿ ರೂಪಾಯಿ ಎಂದು ಅವರು ಪ್ರತಿಪಾದಿಸುತ್ತಾರೆ. ರಾಜ್ಯದ ಪಾಲು 36,333 ಕೋಟಿ ರೂಪಾಯಿ ಎನ್ನುತ್ತಾರೆ. ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ ವಿದೇಶಿ ಸಾಲವನ್ನು ಯಾವ ಸರ್ಕಾರದ ಕೊಡುಗೆಯೆಂದು ಪರಿಗಣಿಸಬೇಕು ಎಂಬುದಾಗಿದೆ. ಕೇಂದ್ರದ ಸಾರ್ವಭೌಮ ಖಾತರಿಯ ಆಧಾರದಲ್ಲಿ ಪಡೆದ ಸಾಲವನ್ನೂ ಕೇಂದ್ರದ ಹಣಕಾಸಿನ ಬೆಂಬಲವೆಂದು ಬಿಜೆಪಿ ಪರಿಗಣಿಸಿದರೆ, ಆ ಸಾಲದ ಮರುಪಾವತಿ ಮತ್ತು ಬಡ್ಡಿಯ ಹೊಣೆ ರಾಜ್ಯದ ಮೇಲಿದೆ ಎಂಬುದು ಕರ್ನಾಟಕದ ವಾದ.

ಅಂದರೆ ಒಂದೇ ಮೆಟ್ರೋ ಯೋಜನೆಗೆ ಎರಡು ಲೆಕ್ಕಾಚಾರಗಳು! ಲೆಕ್ಕ ಹಾಕುವ ವಿಧಾನ ಬದಲಾದರೆ ಕೊಡುಗೆಯ ಪ್ರಮಾಣವೂ ಬದಲಾಗುತ್ತದೆ. ಆದರೆ ಸಾಲ ತೀರಿಸುವ ದಿನ ಬಂದಾಗ ಯಾವ ಲೆಕ್ಕಾಚಾರ ಕೆಲಸಕ್ಕೆ ಬರುತ್ತದೆ ಎಂಬುದೇ ಜನಸಾಮಾನ್ಯರ ಪ್ರಶ್ನೆ.

ಇಲ್ಲಿ ಮತ್ತೊಂದು ವಿಚಾರವಿದೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಪಾಲುದಾರರು ಎಂಬ 50:50 ಮಾದರಿಯ ಚರ್ಚೆ ನಡೆಯುತ್ತದೆ. ಆದರೆ ಜಂಟಿ ಉದ್ಯಮದಲ್ಲಿನ ಸಮಾನ ಪಾಲುದಾರಿಕೆ ಮತ್ತು ಇಡೀ ಯೋಜನೆಯ ಹಣಕಾಸಿನ ಹೊಣೆಗಾರಿಕೆ ಎರಡೂ ಒಂದೇ ಅಲ್ಲ. ಭೂಸ್ವಾಧೀನ, ಯೋಜನಾ ವೆಚ್ಚದ ಏರಿಕೆ, ವಿದೇಶಿ ಸಾಲದ ಬಡ್ಡಿ, ವಿನಿಮಯ ದರದ ವ್ಯತ್ಯಾಸ ಹಾಗೂ ಕಾರ್ಯಾಚರಣೆಯ ನಷ್ಟಗಳಂತಹ ಹೊರೆಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಹೀಗಿರುವಾಗ, ಮೆಟ್ರೋ ಯೋಜನೆಯ ಹಣಕಾಸಿನ ಹೊಣೆಗಾರಿಕೆಯಲ್ಲಿ ಕೇಂದ್ರ ಮತ್ತು ರಾಜ್ಯದ ನಿಜವಾದ ಪಾಲು ಎಷ್ಟೆಂಬುದರ ಬಗ್ಗೆ ಸಾರ್ವಜನಿಕ ಚರ್ಚೆ ನ್ಯಾಯಸಮ್ಮತವೇ ಸರಿ.

ಇನ್ನು ಉದ್ಘಾಟನಾ ಸಮಾರಂಭದ ವಿಚಾರಕ್ಕೆ ಬರೋಣ.
ಒಂದು ನಗರಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ಖಂಡಿತವಾಗಿಯೂ ದೊಡ್ಡ ಸಾಧನೆ. ಅದನ್ನು ಜನರಿಗೆ ಸಮರ್ಪಿಸುವುದು ಸಾರ್ವಜನಿಕ ಕಾರ್ಯಕ್ರಮವೂ ಹೌದು. ಆದರೆ ಯೋಜನೆಗೆ ಹಣಕಾಸು ಒದಗಿಸಿದ ಎಲ್ಲ ಸಂಸ್ಥೆಗಳು, ಸರ್ಕಾರಗಳು, ಅಧಿಕಾರಿಗಳು, ಎಂಜಿನಿಯರ್‌ಗಳು, ಕಾರ್ಮಿಕರು ಮತ್ತು ತೆರಿಗೆದಾರರ ಕೊಡುಗೆಯನ್ನು ಬದಿಗಿಟ್ಟು ಒಬ್ಬರೇ ಅಭಿವೃದ್ಧಿಯ ಸಂಪೂರ್ಣ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ರಾಜಕೀಯ ಶೋಕಿಯ ಬಗ್ಗೆ ಪ್ರಶ್ನೆ ಮೂಡುವುದು ಸಹಜ.

ವಿದೇಶಗಳಲ್ಲಿನ ಸಾರ್ವಜನಿಕ ಮೂಲಸೌಕರ್ಯ ಉದ್ಘಾಟನೆಗಳ ಸರಳತೆಯ ಉದಾಹರಣೆಗಳನ್ನು ಮುಂದಿಡುವವರು, ಭಾರತದಲ್ಲಿ ಪ್ರತಿಯೊಂದು ಯೋಜನೆಯ ಉದ್ಘಾಟನೆಯೂ ಪ್ರಧಾನಿ ಮಟ್ಟದ ಕಾರ್ಯಕ್ರಮವಾಗಬೇಕೇ ಎಂದು ಪ್ರಶ್ನಿಸುತ್ತಾರೆ. ಆದರೆ ಭಾರತದಲ್ಲಿ ಪ್ರಧಾನಮಂತ್ರಿಯವರು ಉದ್ಘಾಟಿಸುವುದನ್ನು ರಾಷ್ಟ್ರೀಯ ಮಹತ್ವದ ಕಾರ್ಯಕ್ರಮವೆಂದು ಪರಿಗಣಿಸುವವರೂ ಇದ್ದಾರೆ. ಹಾಗಿದ್ದರೂ, ಉದ್ಘಾಟನೆಯ ವೈಭವಕ್ಕಿಂತ ಯೋಜನೆಯ ಅನುಷ್ಠಾನ ಮತ್ತು ಸಾರ್ವಜನಿಕರಿಗೆ ಸಿಗುವ ಪ್ರಯೋಜನ ಮುಖ್ಯವಾಗಬೇಕಲ್ಲವೇ?

ಪ್ರಧಾನಿಯವರು ಬಂದು ರಿಬ್ಬನ್ ಕತ್ತರಿಸಿದರೆ ಮೆಟ್ರೋ ಹಳಿಗಳ ನಿರ್ಮಾಣದ ವೆಚ್ಚ ಕಡಿಮೆಯಾಗುವುದಿಲ್ಲ. ಸಾಲದ ಬಡ್ಡಿ ಮಾಯವಾಗುವುದಿಲ್ಲ. ಭೂಸ್ವಾಧೀನಕ್ಕೆ ಖರ್ಚಾದ ಹಣ ವಾಪಸ್ ಬರುವುದಿಲ್ಲ. ಸಂಚಾರ ದಟ್ಟಣೆಯಿಂದ ಬಳಲುವ ಬೆಂಗಳೂರಿಗರಿಗೆ ಉತ್ತಮ ಸಾರಿಗೆ ಸೌಲಭ್ಯ ಸಿಗಬೇಕು ಎಂಬುದೇ ಯೋಜನೆಯ ಮೂಲ ಉದ್ದೇಶ.

ಹೀಗಾಗಿ ಪ್ರಶ್ನೆ ಪ್ರಧಾನಿ ಉದ್ಘಾಟನೆ ಮಾಡಬಾರದು ಎಂದಲ್ಲ. ಉದ್ಘಾಟನೆಯ ಜೊತೆಗೆ ಕೇಂದ್ರ ಸರ್ಕಾರ ತನ್ನ ಹಣಕಾಸಿನ ಜವಾಬ್ದಾರಿಯನ್ನೂ ಸಮರ್ಪಕವಾಗಿ ನಿಭಾಯಿಸಬೇಕಲ್ಲವೇ ಎಂಬುದು ಇಲ್ಲಿ ಏಳುವ ಪ್ರಶ್ನೆ.

ಮೆಟ್ರೋ ರೈಲು ಹಳಿಗಳ ಮೇಲೆ ಓಡಬಹುದು. ಆದರೆ ಅದರ ಹಣಕಾಸಿನ ಲೆಕ್ಕಾಚಾರ ಮಾತ್ರ ರಾಜಕೀಯ ಹಳಿಗಳ ಮೇಲೆ ಓಡಬಾರದು!

ಕರ್ನಾಟಕದ ತೆರಿಗೆದಾರರ ಹಣದಿಂದ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಆಸ್ತಿಗೆ ಕೇಂದ್ರವೂ ತನ್ನ ನ್ಯಾಯಯುತ ಕೊಡುಗೆ ನೀಡುತ್ತಿದೆಯೇ? ಅಭಿವೃದ್ಧಿಯ ಶ್ರೇಯಸ್ಸು ಪಡೆಯುವ ವಿಚಾರದಲ್ಲಿ ಮಾತ್ರವಲ್ಲ, ಅದರ ಆರ್ಥಿಕ ಹೊಣೆಗಾರಿಕೆ ಹಂಚಿಕೊಳ್ಳುವ ವಿಚಾರದಲ್ಲಿಯೂ ಸಹಭಾಗಿತ್ವ ಇರಬೇಕು.

ಫೋಟೋಗೆ ಪ್ರಧಾನಿ, ಲೆಕ್ಕಕ್ಕೆ ಕರ್ನಾಟಕ, ಪ್ರಯಾಣಕ್ಕೆ ಜನಸಾಮಾನ್ಯರು… ಇದು ಯಾವ ಮಾದರಿಯ ಅಭಿವೃದ್ಧಿ ಲೆಕ್ಕಾಚಾರ. ವಿದೇಶಗಳಲ್ಲಿ ಕಾರ್ಪೋರೇಟರ್ ಗಳು ಬಂದು ಮುಗಿಸಬಹುದಾದ ಉದ್ಘಾಟನೆಗೆ ಭಾರತ ಅದರಲ್ಲೂ ಬೆಂಗಳೂರಲ್ಲಿ ಪ್ರಧಾನಿ ಮಟ್ಟದ ರಾಷ್ಟ್ರೀಯ ಕಾರ್ಯಕ್ರಮವಾಗುವುದು ಯಾಕೆ.? ಎಲ್ಲಾ ಹೊರೆಯನ್ನು ಕೇಂದ್ರವೇ ಹೊರುವುದಾದರೆ ಕಾರ್ಯಕ್ರಮ ಇರಲಿ, ಜಾತ್ರೆ ನಡೆಸಿದರೂ ಯಾರೂ ಕೇಳಲೊಲ್ಲರು.

ಶೇ.16.2 ಎಂಬುದು ಕರ್ನಾಟಕ ಸರ್ಕಾರ ಮಂಡಿಸಿರುವ ಲೆಕ್ಕಾಚಾರದಲ್ಲಿನ ಕೇಂದ್ರದ ನೇರ ಕೊಡುಗೆಯ ಪ್ರಮಾಣ. ತೇಜಸ್ವಿ ಸೂರ್ಯ ಅವರ ಶೇ.53.35ರ ಲೆಕ್ಕದಲ್ಲಿ ಕೇಂದ್ರದ ಸಾರ್ವಭೌಮ ಖಾತರಿಯಡಿ ಪಡೆದ ಅಂತಾರಾಷ್ಟ್ರೀಯ ಸಾಲವನ್ನೂ ಸೇರಿಸಲಾಗಿದೆ. ಈ ಎರಡು ಲೆಕ್ಕಗಳನ್ನು ಒಂದೇ ರೀತಿಯ ಕೊಡುಗೆಯೆಂದು ಪರಿಗಣಿಸಬಾರದು.

PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು