ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲುಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತೆ ಮುನ್ನೆಲೆಗೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರದ ಸಿದ್ಧತೆಬೆಂಗಳೂರಿನ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಬಂಧನಓಲಾ ಕಂಪನಿಗೆ ₹10 ಲಕ್ಷ ದಂಡ: ಗ್ರಾಹಕರನ್ನು ಹೆಚ್ಚುವರಿ ಪಾವತಿಗೆ ಪ್ರೇರೇಪಿಸುವ ಫೀಚರ್ ಸ್ಥಗಿತಗೊಳಿಸಲು CCPA ಆದೇಶಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ: 1,574 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದ ಭರವಸೆಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್ಒಂದು ಕಾಲದಲ್ಲಿ ಪತ್ರಕರ್ತರಿಗೆ ಕುರ್ಚಿ ಹಾಕುತ್ತಿದ್ದೆ: ಬಿಜೆಪಿಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟುಬುಲ್ಡೋಜರ್‌ ಈಗ ಉತ್ತರ ಪ್ರದೇಶದ ಬ್ರ್ಯಾಂಡ್: ಯೋಗಿ ಆದಿತ್ಯನಾಥ್ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆ? ಚೀನಾದಿಂದ ಭಾರತದ ಆಮದು ಮುಂದುವರಿಕೆ; ವಾಣಿಜ್ಯ ಕೊರತೆ 112 ಬಿಲಿಯನ್ ಡಾಲರ್‌ಗೆ ಏರಿಕೆವಿಶೇಷ ಸಂಸತ್ ಅಧಿವೇಶನ ನಡೆಸಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ; ಕಾಂಗ್ರೆಸ್‌ ಟೀಕೆಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹಲಂಚ ಪಡೆಯುತ್ತಿದ್ದಾಗ ರಾಮನಗರ ಉಪ ತಹಶೀಲ್ದಾರ್‌ ಅಂದರ್‌ – ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ2022ರ ಮತಾಂತರ ನಿಷೇಧ ಕಾಯ್ದೆಯನ್ನೇ ಮರುಜಾರಿಗೆ ಕಾಂಗ್ರೆಸ್ ಬದ್ಧ: ಬಿ.ಕೆ. ಹರಿಪ್ರಸಾದ್ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿE-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!

ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟು

ಓವೈಸಿ ನೇತೃತ್ವದ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿರುವ ಚಂದ್ರಶೇಖರ್ ಆಜಾದ್, ಬಿಜೆಪಿಯ ಬಿ ಟೀಮ್ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧವೂ ಪ್ರಶ್ನೆಗಳನ್ನು ಎತ್ತಿದ್ದಾರೆ.

PPeepal Media

Peepal Media ದೇಶ

• 2 ನಿಮಿಷದ ಓದು

ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟು

ಲಖನೌ: ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್‌-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಜೊತೆ ಮೈತ್ರಿ ಮಾಡಿಕೊಂಡಿರುವ ಆಜಾದ್ ಸಮಾಜ್ ಪಾರ್ಟಿ (ಕಾನ್ಶಿರಾಮ್) ಮುಖ್ಯಸ್ಥ ಚಂದ್ರಶೇಖರ್ ಆಜಾದ್, ತಮ್ಮ ಪಕ್ಷ ಬಿಜೆಪಿಯ ‘ಬಿ ಟೀಮ್’ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ವಿರೋಧ ಪಕ್ಷಗಳೇ ಹಲವು ರಾಜ್ಯಗಳಲ್ಲಿ ಪರಸ್ಪರ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸಿರುವಾಗ ತಮ್ಮ ಮೈತ್ರಿಯನ್ನು ಮಾತ್ರ ಪ್ರಶ್ನಿಸುವುದೇಕೆ ಎಂದು ಅವರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನು (ಎಸ್‌ಪಿ) ಪ್ರಶ್ನಿಸಿದ್ದಾರೆ.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಲಖನೌನಲ್ಲಿ ನವೆಂಬರ್ 12ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ‘ಸಾಮಾಜಿಕ ಪರಿವರ್ತನಾ ಮೋರ್ಚಾ’ ಹೆಸರಿನ ಮೈತ್ರಿಕೂಟವನ್ನು ಘೋಷಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಬಿ ಟೀಮ್ ಎಂಬ ಆರೋಪಗಳಿಗೆ ಆಜಾದ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಂಜಾಬ್‌ನ ಚುನಾವಣಾ ರ‍್ಯಾಲಿಯೊಂದರಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಬಿಜೆಪಿಯ ಬಿ ಟೀಮ್ ಎಂದು ಟೀಕಿಸಿದ್ದ ವಿಚಾರವನ್ನು ಪ್ರಸ್ತಾಪಿಸಿದ ಆಜಾದ್, ಪಕ್ಷವೊಂದು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಅದನ್ನು ಬಿಜೆಪಿಯ ಬಿ ಟೀಮ್ ಎನ್ನುವುದಾದರೆ, ಇತರ ಪಕ್ಷಗಳ ಚುನಾವಣಾ ನಡೆಗಳನ್ನೂ ಇದೇ ಮಾನದಂಡದಲ್ಲಿ ನೋಡಬೇಕಲ್ಲವೇ ಎಂದು ಪ್ರಶ್ನಿಸಿದರು.

“ಒಂದು ಪಕ್ಷ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಅದು ಬಿಜೆಪಿಯ ಬಿ ಟೀಮ್ ಆಗುತ್ತದೆ ಎಂದಾದರೆ, ಮಧ್ಯಪ್ರದೇಶದಲ್ಲಿ 70, ಉತ್ತರಾಖಂಡದಲ್ಲಿ 54 ಮತ್ತು ಜಮ್ಮುವಿನಲ್ಲಿ 20 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಿದ್ದೇಕೆ?” ಎಂದು ಅವರು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದೇಕೆ? ದೆಹಲಿ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದ್ದೇಕೆ? ಎಂಬ ಪ್ರಶ್ನೆಗಳನ್ನೂ ಆಜಾದ್ ಮುಂದಿಟ್ಟರು. 2024ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಒಟ್ಟಿಗೆ ಸ್ಪರ್ಧಿಸಿದ್ದವು. ಆಗ ಎಎಪಿ ಬಿಜೆಪಿಯ ಬಿ ಟೀಮ್ ಆಗಿರಲಿಲ್ಲವೇ ಅಥವಾ ನಂತರವಷ್ಟೇ ಹಾಗಾಯಿತೇ ಎಂದು ಅವರು ಪ್ರಶ್ನಿಸಿದರು.

2023ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ತಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದನ್ನೂ ಆಜಾದ್ ನೆನಪಿಸಿಕೊಂಡರು.

ಹಿಂದುಳಿದ ಮತ್ತು ಅಂಚಿನ ಸಮುದಾಯಗಳ ಪರ ಹೋರಾಟ:

ತಮ್ಮ ಪಕ್ಷವು ನಿರ್ದಿಷ್ಟ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದೆ ಎಂದು ಆಜಾದ್ ಹೇಳಿದ್ದಾರೆ. ಅಂಚಿನಲ್ಲಿರುವ ಸಮುದಾಯಗಳ ಜನರ ಮೇಲೆ ಹಿಂಸೆ ಮತ್ತು ಅನ್ಯಾಯ ನಡೆದಾಗ ಇತರ ರಾಜಕೀಯ ಪಕ್ಷಗಳು ಧ್ವನಿ ಎತ್ತುವುದಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

“ಇಂದು ನಾವು ನಮ್ಮ ಜನರಿಗಾಗಿ ಹೋರಾಡುತ್ತಿದ್ದೇವೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರ ಜೀವಕ್ಕೆ ಅಪಾಯ ಎದುರಾದಾಗ ನಿಮ್ಮ ಕಡೆಯಿಂದ ಒಂದು ಮಾತೂ ಕೇಳಿಬರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಒವೈಸಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಜಾದ್ ಘೋಷಣೆ:

ಸುದ್ದಿಗೋಷ್ಠಿಯಲ್ಲಿ ಮೈತ್ರಿಯನ್ನು ಘೋಷಿಸಿದ ಅಸಾದುದ್ದೀನ್ ಓವೈಸಿ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಚಂದ್ರಶೇಖರ್ ಆಜಾದ್ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರು. ‘ಸಾಮಾಜಿಕ ಪರಿವರ್ತನಾ ಮೋರ್ಚಾ’ ಹೆಸರಿನಲ್ಲಿ ರಚನೆಯಾಗಿರುವ ಈ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉದ್ದೇಶಿಸಿದೆ ಎಂದು ವರದಿ ತಿಳಿಸಿದೆ.

ಮೋರ್ಚಾ ಕೇವಲ ಮೂರನೇ ರಂಗವಲ್ಲ; ಬದಲಿಗೆ ಶೋಷಿತರು, ವಂಚಿತರು, ಹಿಂದುಳಿದವರು ಮತ್ತು ಅಂಚಿನ ಸಮುದಾಯಗಳನ್ನು ಪ್ರತಿನಿಧಿಸುವ ಸಾಮಾಜಿಕ ಬದಲಾವಣೆಯ ವೇದಿಕೆ ಎಂದು ಆಜಾದ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯುವುದು ಮೈತ್ರಿಯ ಉದ್ದೇಶ ಎಂದು ಓವೈಸಿ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೂ ಮೈತ್ರಿಕೂಟಕ್ಕೆ ಸೇರುವಂತೆ ಉಭಯ ನಾಯಕರು ಆಹ್ವಾನ ನೀಡಿದ್ದಾರೆ. “ಸರ್ಕಾರದ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಲು ಎಸ್‌ಪಿ ಮತ್ತು ಕಾಂಗ್ರೆಸ್ ಬಯಸಿದರೆ, ಅವರಿಗೆ ಸ್ವಾಗತ. ನಾವು ಅವರೊಂದಿಗೆ ನಿಲ್ಲುತ್ತೇವೆ” ಎಂದು ಆಜಾದ್ ಹೇಳಿದ್ದಾರೆ. ನವೆಂಬರ್ 26ರಂದು ಸಾರ್ವಜನಿಕ ರ‍್ಯಾಲಿ ನಡೆಸುವುದಾಗಿಯೂ ನಾಯಕರು ಘೋಷಿಸಿದ್ದಾರೆ.

2022ರ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಸಿಗದ ಗೆಲುವು:

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ 95 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸುಮಾರು ಶೇ.0.49ರಷ್ಟು ಮತಗಳನ್ನು ಪಡೆದಿತ್ತು. ಆದರೆ, ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಿರಲಿಲ್ಲ. ಆಜಾದ್ ಸಮಾಜ್ ಪಾರ್ಟಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸುಮಾರು ಶೇ.0.13ರಷ್ಟು ಮತಗಳನ್ನು ಪಡೆದಿತ್ತು.

ಇದೇ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 347 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 111 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 399 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ಎರಡು ಸ್ಥಾನಗಳನ್ನು ಪಡೆದಿತ್ತು. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 403 ಸ್ಥಾನಗಳಿದ್ದು, ಸರ್ಕಾರ ರಚಿಸಲು 202 ಸ್ಥಾನಗಳ ಬಹುಮತ ಅಗತ್ಯವಿದೆ.

ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮತಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಸ ಮೈತ್ರಿಕೂಟ ಹೊಂದಿದೆ. ಈ ಬೆಳವಣಿಗೆ 2027ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರಗಳ ಮೇಲೂ ಪರಿಣಾಮ ಬೀರಬಹುದೆಂಬ ಚರ್ಚೆ ಆರಂಭವಾಗಿದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು