ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲುಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತೆ ಮುನ್ನೆಲೆಗೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರದ ಸಿದ್ಧತೆಬೆಂಗಳೂರಿನ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಬಂಧನಓಲಾ ಕಂಪನಿಗೆ ₹10 ಲಕ್ಷ ದಂಡ: ಗ್ರಾಹಕರನ್ನು ಹೆಚ್ಚುವರಿ ಪಾವತಿಗೆ ಪ್ರೇರೇಪಿಸುವ ಫೀಚರ್ ಸ್ಥಗಿತಗೊಳಿಸಲು CCPA ಆದೇಶಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ: 1,574 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದ ಭರವಸೆಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್ಒಂದು ಕಾಲದಲ್ಲಿ ಪತ್ರಕರ್ತರಿಗೆ ಕುರ್ಚಿ ಹಾಕುತ್ತಿದ್ದೆ: ಬಿಜೆಪಿಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟುಬುಲ್ಡೋಜರ್‌ ಈಗ ಉತ್ತರ ಪ್ರದೇಶದ ಬ್ರ್ಯಾಂಡ್: ಯೋಗಿ ಆದಿತ್ಯನಾಥ್ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆ? ಚೀನಾದಿಂದ ಭಾರತದ ಆಮದು ಮುಂದುವರಿಕೆ; ವಾಣಿಜ್ಯ ಕೊರತೆ 112 ಬಿಲಿಯನ್ ಡಾಲರ್‌ಗೆ ಏರಿಕೆವಿಶೇಷ ಸಂಸತ್ ಅಧಿವೇಶನ ನಡೆಸಿ ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ; ಕಾಂಗ್ರೆಸ್‌ ಟೀಕೆಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹಲಂಚ ಪಡೆಯುತ್ತಿದ್ದಾಗ ರಾಮನಗರ ಉಪ ತಹಶೀಲ್ದಾರ್‌ ಅಂದರ್‌ – ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ2022ರ ಮತಾಂತರ ನಿಷೇಧ ಕಾಯ್ದೆಯನ್ನೇ ಮರುಜಾರಿಗೆ ಕಾಂಗ್ರೆಸ್ ಬದ್ಧ: ಬಿ.ಕೆ. ಹರಿಪ್ರಸಾದ್ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿE-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!

ಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲು

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಮತ್ತು ಖಾತೆ ವಿತರಣೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣ ಬಯಲಾಗಿದೆ. ನಕಲಿ ಹಾಗೂ ನಿಯಮಬಾಹಿರ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಇ-ಖಾತಾ ಪಡೆದುಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಇ-ಆಸ್ತಿ ತಂತ್ರಾಂಶದಲ್ಲಿರುವ ನಿರ್ದಿಷ್ಟ ಸೌಲಭ್ಯವನ್ನು ಅನಧಿಕೃತವಾಗಿ ಬಳಸಿಕೊಂಡು ಅರ್ಹತೆ ಇಲ್ಲದ ಆಸ್ತಿಗಳಿಗೂ ಖಾತೆ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಜಿಬಿಎ ವಿಶೇಷ ಆಯುಕ್ತ ಮನೀಷ್ ಮೌನ್ಸಿಲ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸರು 33 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಅಡಮಾನವಿಟ್ಟು ಸಾಲ ಪಡೆದ ಆಸ್ತಿಗಳು ಹರಾಜಿನ ಮೂಲಕ ಮಾರಾಟವಾದಾಗ ಅವುಗಳಿಗೆ ಇ-ಖಾತೆ ಒದಗಿಸಲು ತಂತ್ರಾಂಶದಲ್ಲಿ ಪ್ರತ್ಯೇಕ ಮಾಡ್ಯೂಲ್ ರೂಪಿಸಲಾಗಿತ್ತು. ಆದರೆ, ಈ ವ್ಯವಸ್ಥೆಯನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್‌ಗಳಿಗೂ ಖಾತೆ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ.

ಅರ್ಹತೆಯನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಬದಲು, ಜಂಟಿ ಅಭಿವೃದ್ಧಿ ಒಪ್ಪಂದ, ಮೂಲ ನಿವೇಶನದ ಕ್ರಯಪತ್ರ ಹಾಗೂ ಕಟ್ಟಡ ನಿರ್ಮಾಣ ಪರವಾನಗಿಗಳಂತಹ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳನ್ನು ಪರಿಶೀಲಿಸಿ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿಯೂ ನಿಯಮಗಳ ಉಲ್ಲಂಘನೆಯಾಗಿರುವ ಶಂಕೆ ವ್ಯಕ್ತವಾಗಿದೆ.

ತಾಂತ್ರಿಕ ಪರಿಶೀಲನೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದ ಮತ್ತು ನಿಗದಿತ ಅರ್ಹತೆ ಹೊಂದಿರದ 98 ಆಸ್ತಿಗಳಿಗೆ ಇ-ಖಾತಾ ಮಂಜೂರಾಗಿರುವುದು ಪತ್ತೆಯಾಗಿದೆ. ಕಂದಾಯ ವಿಭಾಗದ ಸಹಾಯಕ ಆಯುಕ್ತ ಬಸವರಾಜ್ ಮಾಗಿ ಸೇರಿದಂತೆ ಖಾಸಗಿ ಬಿಲ್ಡರ್‌ಗಳು ಹಾಗೂ ಅರ್ಜಿದಾರರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಸರ್ಕಾರದ ಡಿಜಿಟಲ್ ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಳಸಿಕೊಂಡು ಆಸ್ತಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಈಗ ತನಿಖೆಯ ಕೇಂದ್ರಬಿಂದುವಾಗಿದೆ. ಅಕ್ರಮ ಖಾತೆಗಳ ಹಿಂದೆ ಯಾರ ಪಾತ್ರವಿದೆ, ಅನುಮೋದನೆ ನೀಡುವ ಹಂತದಲ್ಲಿ ನಿಯಮಗಳನ್ನು ಹೇಗೆ ಉಲ್ಲಂಘಿಸಲಾಗಿದೆ ಹಾಗೂ ಇಂತಹ ಇನ್ನಷ್ಟು ಪ್ರಕರಣಗಳು ನಡೆದಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆಸ್ತಿ ಖರೀದಿದಾರರು ಮತ್ತು ಸಾರ್ವಜನಿಕರಲ್ಲಿ ಇ-ಖಾತಾ ದಾಖಲೆಗಳ ವಿಶ್ವಾಸಾರ್ಹತೆ ಕುರಿತು ಪ್ರಶ್ನೆ ಮೂಡಿಸಿರುವ ಈ ಪ್ರಕರಣದಲ್ಲಿ ತನಿಖೆಯ ಅಂತಿಮ ವರದಿ ಹೊರಬಂದ ಬಳಿಕವೇ ಅಕ್ರಮದ ಸಂಪೂರ್ಣ ವ್ಯಾಪ್ತಿ ಸ್ಪಷ್ಟವಾಗಲಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು