ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬೊಗಸೆಗೆ ದಕ್ಕಿದ್ದು-100 : “ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!”ಊರ ಬಯಲಿನ ನಡುವೆ – 1 : ಕಾಲ ಓಡುತ್ತಿದೆ ಎನ್ನುತ್ತಿದ್ದೇವೆ! ಆದರೆ….?SC/ST ಮೀಸಲಾತಿ ಹೋರಾಟ, ಸುಪ್ರೀಂ ಕೋರ್ಟ್‌ನಲ್ಲಿ ಗೆಲುವಿನ ವಿಶ್ವಾಸ –  ಡಿ.ಕೆ ಶಿವಕುಮಾರ್ನವೆಂಬರ್ 15ರಂದು KPSC ಪೂರ್ವಭಾವಿ ಪರೀಕ್ಷೆ: ಚುನಾವಣಾ ಮಾದರಿ ಭದ್ರತೆ – CM ಸೂಚನೆSSLC, PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ –  ನೋಂದಣಿ ದಿನಾಂಕ ವಿಸ್ತರಣೆಅಡುಗೆ ಎಣ್ಣೆ ಮರುಬಳಕೆ ಪತ್ತೆಗೆ, ಆರೋಗ್ಯ ಇಲಾಖೆ ಮಾಸ್ಟರ್‌ ಪ್ಲಾನ್‌ – ಯು.ಟಿ. ಖಾದರ್ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಆನೇಕಲ್‌ನಲ್ಲಿ ಮಾಂಸದಂಗಡಿಗಳ ಬಂದ್‌ಗೆ ಆದೇಶ; ಬಿಎನ್‌ಎಸ್‌ಎಸ್‌ ಸೆಕ್ಷನ್‌ 163 ಜಾರಿಮೋದಿ ಸಂಸತ್ತಿನಲ್ಲಿ ನನ್ನೊಂದಿಗೆ ಸಂಸತ್ತಿನಲ್ಲಿ ನೇರ ಚರ್ಚೆ ನಡೆಸಿದರೆ ಮತ್ತೆ ಪ್ರಧಾನಿಯಾಗಿ ಮುಂದುವರೆಯಲಾರರು: ರಾಹುಲ್‌ ಗಾಂಧಿಶಂಕಿತ ಗೂಢಚಾರಿಣಿಯೊಂದಿಗಿನ ಸಂಬಂಧ: ಎನ್‌ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್‌ಗೆ ಅಮೆರಿಕ ಸಂಸತ್ ಸಮನ್ಸ್‌ಮೈಕ್ರೋಸಾಫ್ಟ್‌ ಸೇವೆಗಳಲ್ಲಿ ಭಾರೀ ವ್ಯತ್ಯಯ: ಸರಿಪಡಿಸುವ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ ಎಂದು ಕೈ ಚೆಲ್ಲಿದ ಕಂಪನಿಇ-ಖಾತಾ ವ್ಯವಸ್ಥೆಯಲ್ಲೇ ಅಕ್ರಮ ಬೆಂಗಳೂರಿನಲ್ಲಿ 98 ಅನರ್ಹ ಆಸ್ತಿಗಳಿಗೆ ಖಾತೆ ಮಂಜೂರು ; 33 ಜನರ ವಿರುದ್ಧ ಪ್ರಕರಣ ದಾಖಲುಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ 9ನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಿಗೆ ಪತ್ರ: ಡಿಕೆ ಶಿವಕುಮಾರ್ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತೆ ಮುನ್ನೆಲೆಗೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರದ ಸಿದ್ಧತೆಬೆಂಗಳೂರಿನ ವಕೀಲ ಮಂಜುನಾಥ್ ಕೊಲೆ ಪ್ರಕರಣ: ಬಿಹಾರದಲ್ಲಿ ಆರೋಪಿ ಬಂಧನಓಲಾ ಕಂಪನಿಗೆ ₹10 ಲಕ್ಷ ದಂಡ: ಗ್ರಾಹಕರನ್ನು ಹೆಚ್ಚುವರಿ ಪಾವತಿಗೆ ಪ್ರೇರೇಪಿಸುವ ಫೀಚರ್ ಸ್ಥಗಿತಗೊಳಿಸಲು CCPA ಆದೇಶಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ: 1,574 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದ ಭರವಸೆಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್ಒಂದು ಕಾಲದಲ್ಲಿ ಪತ್ರಕರ್ತರಿಗೆ ಕುರ್ಚಿ ಹಾಕುತ್ತಿದ್ದೆ: ಬಿಜೆಪಿಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿಬೆಂಗಳೂರು ಪ್ರತೀ ಮೆಟ್ರೋ ನಿಲ್ದಾಣಗಳ ಉದ್ಘಾಟನೆಗೆ ಪ್ರಧಾನಿಯೇ ಬರಬೇಕೇ? ಮೆಟ್ರೋಗೆ ದುಡ್ಡು ಕರ್ನಾಟಕದ್ದು, ಉದ್ಘಾಟನೆಯ ಶೋಕಿ ಕೇಂದ್ರದ್ದು!ಎಸ್‌ಪಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿದಾಗ ಅದು ಬಿಜೆಪಿಯ ಬಿ ಟೀಮ್ ಆಗಿತ್ತೆ?: ಒವೈಸಿ ಮೈತ್ರಿ ಕುರಿತ ಟೀಕೆಗಳಿಗೆ ಚಂದ್ರಶೇಖರ್ ಆಜಾದ್ ತಿರುಗೇಟು

ಅಡುಗೆ ಎಣ್ಣೆ ಮರುಬಳಕೆ ಪತ್ತೆಗೆ, ಆರೋಗ್ಯ ಇಲಾಖೆ ಮಾಸ್ಟರ್‌ ಪ್ಲಾನ್‌ – ಯು.ಟಿ. ಖಾದರ್

ಅಡುಗೆ ಎಣ್ಣೆ ಮರುಬಳಕೆ ಪತ್ತೆಗೆ, ಆರೋಗ್ಯ ಇಲಾಖೆ ಮಾಸ್ಟರ್‌ ಪ್ಲಾನ್‌ – ಯು.ಟಿ. ಖಾದರ್

ಬೆಂಗಳೂರು : ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಮ್ಮೆ ಬಳಸಿ ಬಿಸಾಡುವ ಅಡುಗೆ ಎಣ್ಣೆಯನ್ನು (Cooking Oil) ಮತ್ತೆ ಬೇರೆ ಪದಾರ್ಥಗಳ ತಯಾರಿಕೆಗೆ ಬಳಸುವುದನ್ನು ತಡೆಯಲು ಆರೋಗ್ಯ ಇಲಾಖೆಯು (Health Department) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದಕ್ಕಾಗಿ ಹೊಸದಾಗಿ ‘ಟ್ರೇಸಬಿಲಿಟಿ ಆ್ಯಪ್‌’ ಒಂದನ್ನು ಪರಿಚಯಿಸಲಾಗುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ತಿಳಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ನಿಯಮದ ಪ್ರಕಾರ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವಂತಿಲ್ಲ. ಆದರೆ, ಶೇಕಡಾ 50 ರಷ್ಟು ಬಳಕೆಯಾದ ಎಣ್ಣೆಯನ್ನು ಕೆಲವರು ಸಣ್ಣಪುಟ್ಟ ಹೋಟೆಲ್‌ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಅಕ್ರಮಕ್ಕೆ ತಡೆಹಾಕಲು ಮತ್ತು ಎಣ್ಣೆ ಸಂಗ್ರಹಣೆ, ಸಾಗಣೆ ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಲು ಈ ಹೊಸ ಆ್ಯಪ್ ಸಹಕಾರಿಯಾಗಲಿದೆ.

ಮೊದಲ ಹಂತದಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆಹಾರ ಉದ್ದಿಮೆದಾರರು ತಮ್ಮಲ್ಲಿ ಬಳಕೆಯಾಗುವ ಎಣ್ಣೆಯನ್ನು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಅಧಿಕೃತ ಏಜೆನ್ಸಿಗಳ ಮೂಲಕವೇ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಈ ಎಣ್ಣೆಯನ್ನು ಬಯೋಡೀಸೆಲ್, ಸೋಪು ಮತ್ತು ದೀಪದ ಎಣ್ಣೆ ತಯಾರಿಕೆಗೆ ಬಳಸಲಾಗುತ್ತದೆ.

ಆಹಾರ ತಯಾರಿಕಾ ಘಟಕಗಳು ದಿನ ಬಳಕೆಯಲ್ಲಿ ಉತ್ಪತ್ತಿಯಾಗುವ ಕರಿದ ಎಣ್ಣೆಯ ವಿವರಗಳನ್ನು ಹಾಗೂ ಅದನ್ನು ಮಾರಾಟ ಅಥವಾ ಖರೀದಿಸಿದವರ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. 2022ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 91 ಲಕ್ಷ ಲೀಟರ್‌ಗೂ ಅಧಿಕ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ. ಕರಿದ ಎಣ್ಣೆಯ ಗುಣಮಟ್ಟ ಪರಿಶೀಲಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಟಿಪಿಸಿ (Total Polar Compounds) ಮೀಟರ್‌ಗಳನ್ನು ನೀಡಲಾಗಿದ್ದು, ಎಣ್ಣೆಯಲ್ಲಿ ಇದರ ಪ್ರಮಾಣ 25ಕ್ಕಿಂತ ಹೆಚ್ಚಿರಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು