ಶಿಕ್ಷಕರ ವರ್ಗಾವಣೆ ನಿಯಮ ಬದಲಾವಣೆ – ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಶಿಕ್ಷಕರ (Teachers) ವರ್ಗಾವಣೆಯನ್ನು (Transfer) ಸರಳ ಮತ್ತು ಪಾರದರ್ಶಕಗೊಳಿಸಲು ನಿಯಮಗಳಿಗೆ ತಿದ್ದುಪಡಿ (Amendment) ತಂದು ಕರಡು ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2026 ಎಂದು ಇದಕ್ಕೆ ಹೆಸರಿಡಲಾಗಿದ್ದು, ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಕರಡು ನಿಯಮಗಳ ಪ್ರಕಾರ ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಪ್ರಮುಖ ಶಾಲೆಗಳ ಖಾಲಿ ಹುದ್ದೆಗಳನ್ನು ನಿರ್ಣಾಯಕ ಹುದ್ದೆಗಳೆಂದು ಪರಿಗಣಿಸಿ ಮೊದಲು ಭರ್ತಿ ಮಾಡಲಾಗುವುದು. ಕೆಪಿಎಸ್ನಲ್ಲಿ ಸೇವೆ ಮಾಡಿದವರಿಗೆ ಎ ವಲಯಕ್ಕೆ 2, ಬಿ ವಲಯಕ್ಕೆ 4, ಸಿ ವಲಯಕ್ಕೆ 6 ಪ್ರೋತ್ಸಾಹಕ ಅಂಕಗಳು ಸಿಗಲಿವೆ. ತಾಲ್ಲೂಕು ಮಟ್ಟದಲ್ಲಿ ಶೇ.25ರಷ್ಟು ವರ್ಗಾವಣೆಗೆ ಅವಕಾಶ ನೀಡಲಾಗಿದ್ದು, ಗಂಭೀರ ಕಾಯಿಲೆ ಹಾಗೂ ವಿಶೇಷ ಚೇತನ ಶಿಕ್ಷಕರಿಗೆ ವಿನಾಯಿತಿ ಇರಲಿದೆ. ಗರ್ಭಿಣಿ ಶಿಕ್ಷಕಿಯರು, ಐದು ವರ್ಷದೊಳಗಿನ ಮಗುವಿರುವ ತಾಯಂದಿರು, ಪತಿ-ಪತ್ನಿ ಹಾಗೂ ಮಕ್ಕಳ ವೈದ್ಯಕೀಯ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಡಯಟ್ ಹಾಗೂ ರಾಜ್ಯಮಟ್ಟದ ಹುದ್ದೆಗಳಿಗೆ 12 ವರ್ಷ ಸೇವೆ ಕಡ್ಡಾಯವಾಗಿದ್ದು, ಅಲ್ಲಿ ಕನಿಷ್ಠ ಮೂರು ವರ್ಷ ಸೇವೆ ಮಾಡಬೇಕು. ಕೆಪಿಎಸ್ನಲ್ಲಿ ಕನಿಷ್ಠ ಒಂಬತ್ತು ವರ್ಷ ಸೇವೆ ನಿಗದಿಪಡಿಸುವ ಪ್ರಸ್ತಾವನೆಯೂ ಇದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ