ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ರಾಜಕರಣಿಗಳ ಖರ್ಚುಗಳಿಗೆ ಹಣವಿದೆ, ನಮಗ್ಯಾಕಿಲ್ಲ – ಧರಣಿ ಮುಂದುವರಿಸಿದ ಆಶಾ ಕಾರ್ಯಕರ್ತೆಯರುಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶಏಕಸ್ವಾಮ್ಯದಿಂದ ಉದ್ಯೋಗ ಹೆಚ್ಚಾಗುವುದಿಲ್ಲ, ಬೆಲೆ ಹೆಚ್ಚಳವಾಗುತ್ತದೆ: ಮೋದಿಯನ್ನು ಗುರಿಯಾಗಿಸಿಕೊಂಡು ಅದಾನಿಯನ್ನು ಟೀಕಿಸಿದ ರಾಹುಲ್‌ ಗಾಂಧಿಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಕುಟುಂಬಸ್ಥರು; ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲುಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಕಾನೂನು ಕ್ರಮಕ್ಕೆ ಮುಂದಾದ ಸತ್ಯಕಿ ಸಾವರ್ಕರ್ಹಿರಿಯೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಒಟ್ಟಾಗಿ ಸೋಲಿಸುವುದೇ ನಮ್ಮ ಗುರಿ: ಕುಮಾರಸ್ವಾಮಿರೋಹಿಂಗ್ಯಾ ನರಮೇಧ: ಮ್ಯಾನ್ಮಾರ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪರಿಹಾರಕ್ಕೂ ಆದೇಶಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆರದ್ದಾದ ನೀಟ್ ಪರೀಕ್ಷೆಯ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿಗೆ ಹೈಕೋರ್ಟ್‌ನಿಂದ ನ್ಯಾಯ, ವೈದ್ಯಕೀಯ ಸೀಟು ಭದ್ರPF ನಿಯಮ ಬದಲಾವಣೆ 2026: 12 ತಿಂಗಳ ಕಾಯುವಿಕೆ ಇನ್ನು 2 ತಿಂಗಳುಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಪಾಲು ನಿರಾಕರಿಸಿದ್ದಕ್ಕೆ ಅಜ್ಜಿಯ ಕೊಲೆ: 20 ವರ್ಷದ ಮೊಮ್ಮಗನ ಬಂಧನಪರಮಾಣು ಯುದ್ಧಕ್ಕೆ ದೊಡ್ಡ ಬ್ರೇಕ್‌ – ಮಹತ್ವದ ನಿರ್ಧಾರಕ್ಕೆ ಟ್ರಂಪ್, ಜಿನ್ ಪಿಂಗ್ ,ಪುಟಿನ್ ಸಹಿಬೆಂಗಳೂರು ಟೆಕ್ ಸಮಿಟ್‌ 2026: ಕರ್ನಾಟಕದ ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ಗಳಲ್ಲಿ ₹1,050 ಕೋಟಿ ಹೂಡಿಕೆ ಘೋಷಣೆಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆಬಸವ ಮಂಟಪ ಪುಸ್ತಕವನ್ನು ನಿಷೇಧಿಸಿದ ರಾಜ್ಯ ಸರ್ಕಾರ: ಲೇಖಕ ರವಿ ಹಂಜ್‌, ಪ್ರಕಾಶಕ ವಿಶ್ವೇಶ್ವರ ಭಟ್‌ ವಿರುದ್ಧ ಕಾನೂನು ಕ್ರಮಕ್ಕೆ ಸಂಪುಟ ನಿರ್ಧಾರಹೊಸ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಕಡ್ಡಾಯವಲ್ಲ; ಪಿಯುಸಿ ಪ್ರಮಾಣಪತ್ರದ ಅವಧಿ ಪರಿಷ್ಕರಣೆನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗೆ ಕಲ್ಲು ತೂರಾಟ: ಇಬ್ಬರು ಬೈಕ್ ಸವಾರರಿಗೆ ತಲಾ ₹10 ಸಾವಿರ ದಂಡ

ಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂ

ಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂ

ಹೈದರಾಬಾದ್: ತೆಲಂಗಾಣ (Telangana) ಕಾಂಗ್ರೆಸ್‌ನಲ್ಲಿ (Congress) ಭಿನ್ನಮತದ ಧ್ವನಿ ಎತ್ತುತ್ತಿರುವ ಶಾಸಕರ ವಿರುದ್ಧ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (Revanth Reddy) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷದೊಳಗಿದ್ದುಕೊಂಡೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿರುವ ಕೆಲವರಿಗೆ ಹುಚ್ಚು ನಾಯಿಗಳು ಕಚ್ಚಿರುವಂತಿದೆ. ಅಂತಹವರನ್ನು ಕಾಂಗ್ರೆಸ್ ಕಾರ್ಯಕರ್ತರೇ ಎರ್ರಗಡ್ಡ ಮಾನಸಿಕ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಗುರುವಾರ ಸಿದ್ದಿಪೇಟೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಕೆಲಸಗಳನ್ನು ಖಾಸಗಿಯಾಗಿ ಹೊಗಳುವ ಕೆಲವರು ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳ್ಳೆಯ ವಿಚಾರಗಳನ್ನು ಮೈಕ್‌ನಲ್ಲಿ ಹೇಳಬೇಕು, ಕೆಟ್ಟ ವಿಚಾರಗಳಿದ್ದರೆ ಸಂಬಂಧಪಟ್ಟವರ ಕಿವಿಯಲ್ಲಿ ಹೇಳಬೇಕು. ಆದರೆ ನಮ್ಮ ಪಕ್ಷದ ಕೆಲವರು ತಮ್ಮ ಆಂತರಿಕ ವಿಚಾರಗಳನ್ನೇ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ರೇವಂತ್ ರೆಡ್ಡಿ ಕಿಡಿಕಾರಿದರು.

ಮುಖ್ಯಮಂತ್ರಿ ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದಿದ್ದರೂ, ಇತ್ತೀಚೆಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕರಾದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಮತ್ತು ಅನಿರುದ್ಧ್ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ರಾಜಗೋಪಾಲ್ ರೆಡ್ಡಿ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ವಿರುದ್ಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ, ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಂದ ಬಿಲ್‌ಗಳನ್ನು ಪಾವತಿಸಲು ದೊಡ್ಡ ಮೊತ್ತದ ಕಮಿಷನ್ ಕೇಳುತ್ತಿದ್ದಾರೆ ಎಂದು ಶಾಸಕ ಅನಿರುದ್ಧ್ ರೆಡ್ಡಿ ಆರೋಪಿಸಿದ್ದರು.

ಹರೀಶ್ ರಾವ್ ವಿರುದ್ಧವೂ ವಾಗ್ದಾಳಿ

ಸಿದ್ದಿಪೇಟೆ ಬಿಆರ್‌ಎಸ್ ಪಕ್ಷದ ಪ್ರಬಲ ನೆಲೆಯಾಗಿದ್ದು, 2004ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಆರ್‌ಎಸ್ ನಾಯಕ ಹರೀಶ್ ರಾವ್ ವಿರುದ್ಧವೂ ರೇವಂತ್ ರೆಡ್ಡಿ ವಾಗ್ದಾಳಿ ನಡೆಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹರೀಶ್ ರಾವ್ ಅವರನ್ನು ಸೋಲಿಸುವ ಕಾಂಗ್ರೆಸ್ ಅಭ್ಯರ್ಥಿಗೆ ಸಚಿವ ಸ್ಥಾನ ನೀಡುವುದಾಗಿ ಘೋಷಿಸಿದರು.

ಹರೀಶ್ ರಾವ್ ಆಂಧ್ರ ನಾಯಕರ ಬೆಂಬಲ ಪಡೆದು ಡೈರಿ ಕಂಪನಿ ಸ್ಥಾಪಿಸಿದ್ದಾರೆ. ಅವರು ಸಾವಿರಾರು ಕೋಟಿ ರೂಪಾಯಿ ಸಂಪತ್ತು ಗಳಿಸಿದ್ದು ಹೇಗೆ ಎಂದು ಪ್ರಶ್ನಿಸಿದ ರೇವಂತ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಕುಟುಂಬದ ವಿರುದ್ಧವೂ ಆರೋಪಗಳ ಸುರಿಮಳೆಗೈದರು.

ತೆಲಂಗಾಣದಲ್ಲಿ ಬಿಆರ್‌ಎಸ್‌ನ 10 ವರ್ಷಗಳ ಆಡಳಿತದ ಅವಧಿಯಲ್ಲಿ ಕೆಸಿಆರ್ ತಮ್ಮ ಕುಟುಂಬದವರಿಗೆ ಪ್ರಮುಖ ಅಧಿಕಾರಗಳನ್ನು ನೀಡಿದ್ದರು. ಪುತ್ರ ಕೆ.ಟಿ. ರಾಮರಾವ್ ಮತ್ತು ಸೋದರಳಿಯ ಹರೀಶ್ ರಾವ್ ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲದೆ, ಪುತ್ರಿಯನ್ನೂ ಸಂಸದರನ್ನಾಗಿ ಮಾಡಿದ್ದರು ಎಂದು ಟೀಕಿಸಿದರು.

ತೆಲಂಗಾಣದ ಹಿತಾಸಕ್ತಿಗೆ ವಿರುದ್ಧವಾಗಿ ಯೋಜನೆಗಳನ್ನು ನಿರ್ಮಿಸಲು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿಗೆ ಕೆಸಿಆರ್ ಅವಕಾಶ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದರು. ವಿಶೇಷವಾಗಿ ರಾಯಲಸೀಮಾ ಲಿಫ್ಟ್ ಇರಿಗೇಷನ್ ಯೋಜನೆಗೆ ಅನುಮತಿ ನೀಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಕೆಸಿಆರ್ ಮತ್ತು ಹರೀಶ್ ರಾವ್ ಅವರಿಗೆ ವಿಧಾನಸಭೆಯಲ್ಲಿ ನೀರಾವರಿ ಯೋಜನೆಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ ರೇವಂತ್ ರೆಡ್ಡಿ, ಅವರ ಆಡಳಿತದ ಲೋಪಗಳನ್ನು ಬಯಲಿಗೆಳೆಯಲು ಸಿದ್ಧನಿದ್ದೇನೆ ಎಂದರು.

ಪ್ರತಿ ಕುಟುಂಬಕ್ಕೆ ₹5 ಲಕ್ಷ ವಿಮೆ ಯೋಜನೆಗೆ ಚಾಲನೆ

ಇದೇ ಕಾರ್ಯಕ್ರಮದಲ್ಲಿ ತೆಲಂಗಾಣ ಸರ್ಕಾರದ ‘ಇಂದಿರಮ್ಮ ಫ್ಯಾಮಿಲಿ ಇನ್ಶೂರೆನ್ಸ್’ ಯೋಜನೆಗೆ ರೇವಂತ್ ರೆಡ್ಡಿ ಚಾಲನೆ ನೀಡಿದರು. ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ₹5 ಲಕ್ಷ ವಿಮಾ ಸೌಲಭ್ಯ ಒದಗಿಸಲಾಗುತ್ತದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, 2034ರವರೆಗೂ ರಾಜ್ಯದಲ್ಲಿ ‘ಇಂದಿರಮ್ಮ ರಾಜ್’ ಆಡಳಿತ ಮುಂದುವರಿಯಲಿದೆ ಎಂದು ಘೋಷಿಸಿದರು..

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು