ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ರಾಜಕರಣಿಗಳ ಖರ್ಚುಗಳಿಗೆ ಹಣವಿದೆ, ನಮಗ್ಯಾಕಿಲ್ಲ – ಧರಣಿ ಮುಂದುವರಿಸಿದ ಆಶಾ ಕಾರ್ಯಕರ್ತೆಯರುಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶಏಕಸ್ವಾಮ್ಯದಿಂದ ಉದ್ಯೋಗ ಹೆಚ್ಚಾಗುವುದಿಲ್ಲ, ಬೆಲೆ ಹೆಚ್ಚಳವಾಗುತ್ತದೆ: ಮೋದಿಯನ್ನು ಗುರಿಯಾಗಿಸಿಕೊಂಡು ಅದಾನಿಯನ್ನು ಟೀಕಿಸಿದ ರಾಹುಲ್‌ ಗಾಂಧಿಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಕುಟುಂಬಸ್ಥರು; ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲುಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಕಾನೂನು ಕ್ರಮಕ್ಕೆ ಮುಂದಾದ ಸತ್ಯಕಿ ಸಾವರ್ಕರ್ಹಿರಿಯೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಒಟ್ಟಾಗಿ ಸೋಲಿಸುವುದೇ ನಮ್ಮ ಗುರಿ: ಕುಮಾರಸ್ವಾಮಿರೋಹಿಂಗ್ಯಾ ನರಮೇಧ: ಮ್ಯಾನ್ಮಾರ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪರಿಹಾರಕ್ಕೂ ಆದೇಶಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆರದ್ದಾದ ನೀಟ್ ಪರೀಕ್ಷೆಯ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿಗೆ ಹೈಕೋರ್ಟ್‌ನಿಂದ ನ್ಯಾಯ, ವೈದ್ಯಕೀಯ ಸೀಟು ಭದ್ರPF ನಿಯಮ ಬದಲಾವಣೆ 2026: 12 ತಿಂಗಳ ಕಾಯುವಿಕೆ ಇನ್ನು 2 ತಿಂಗಳುಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಪಾಲು ನಿರಾಕರಿಸಿದ್ದಕ್ಕೆ ಅಜ್ಜಿಯ ಕೊಲೆ: 20 ವರ್ಷದ ಮೊಮ್ಮಗನ ಬಂಧನಪರಮಾಣು ಯುದ್ಧಕ್ಕೆ ದೊಡ್ಡ ಬ್ರೇಕ್‌ – ಮಹತ್ವದ ನಿರ್ಧಾರಕ್ಕೆ ಟ್ರಂಪ್, ಜಿನ್ ಪಿಂಗ್ ,ಪುಟಿನ್ ಸಹಿಬೆಂಗಳೂರು ಟೆಕ್ ಸಮಿಟ್‌ 2026: ಕರ್ನಾಟಕದ ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ಗಳಲ್ಲಿ ₹1,050 ಕೋಟಿ ಹೂಡಿಕೆ ಘೋಷಣೆಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆಬಸವ ಮಂಟಪ ಪುಸ್ತಕವನ್ನು ನಿಷೇಧಿಸಿದ ರಾಜ್ಯ ಸರ್ಕಾರ: ಲೇಖಕ ರವಿ ಹಂಜ್‌, ಪ್ರಕಾಶಕ ವಿಶ್ವೇಶ್ವರ ಭಟ್‌ ವಿರುದ್ಧ ಕಾನೂನು ಕ್ರಮಕ್ಕೆ ಸಂಪುಟ ನಿರ್ಧಾರಹೊಸ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಕಡ್ಡಾಯವಲ್ಲ; ಪಿಯುಸಿ ಪ್ರಮಾಣಪತ್ರದ ಅವಧಿ ಪರಿಷ್ಕರಣೆನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗೆ ಕಲ್ಲು ತೂರಾಟ: ಇಬ್ಬರು ಬೈಕ್ ಸವಾರರಿಗೆ ತಲಾ ₹10 ಸಾವಿರ ದಂಡ

ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?

PPeepal Media Desk

Peepal Media Desk ಅಂಕಣ

• 4 ನಿಮಿಷದ ಓದು

ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?

“..ಅಳುಕಿದ ಭಾವನೆಗಳು ಮತ್ತೆ ಮೈತೊಡವಿ ಎದ್ದಂತೆ, ನುಂಗಿದ ಉಸಿರುಗಳು ಒಮ್ಮೆಲೆ ಹೊರಹೊಮ್ಮಿದಂತೆ, ಕೈ ಹಿಡಿದು ಓಕೆ ಅಕ್ಷರ ಹೃದಯವನ್ನು ಸೇರಿದಂತೆ, ಕಾಯುವ ಕಾತುರದ ಕ್ಷಣ ಹಾರಿಹೊದಂತೆ ಆ ಪತ್ರದ ಮೊದಲ ಸಾಲು ನಾನು ಕ್ಷೇಮ, ನೀನು ಕ್ಷೇಮ?..” ಆನಂದ ಬೋವಿಯವರ ಅಂಕಣ ಬರಹ. ತಪ್ಪದೇ ಓದಿ

ಏನೋ ಹುಡುಕುತ್ತಿದ್ದೆ. ಹಳೆಯ ಪುಸ್ತಕಗಳ ನಡುವೆ ಮಾಸಿದ ಕಾಗದವೊಂದು ತಿವಿದಂತೆ ಭಾಸವಾಯಿತು. ಅಂಗೈ ಅಗಲದ ಪೋಸ್ಟ ಕಾರ್ಡ ಇನ್ನೂ ಅಳಸದ ಅಕ್ಷರಗಳಲ್ಲಿ ತೇಲುತ್ತಿತ್ತು. ಆ ಅಕ್ಷರಗಳನ್ನು ಓದುತ್ತಿದ್ದಂತೆ ಕಣ್ಣುಗಳು ಗೊತ್ತಾಗದಂತೆ ತೇವಗೊಂಡವು. ಅಳುಕಿದ ಭಾವನೆಗಳು ಮತ್ತೆ ಮೈತೊಡವಿ ಎದ್ದಂತೆ, ನುಂಗಿದ ಉಸಿರುಗಳು ಒಮ್ಮೆಲೆ ಹೊರಹೊಮ್ಮಿದಂತೆ, ಕೈ ಹಿಡಿದು ಬರೆಸಿದ ಅಕ್ಷರ ಹೃದಯವನ್ನು ಸೇರಿದಂತೆ, ಕಾಯುವ ಕಾತುರದ ಕ್ಷಣ ಹಾರಿಹೊದಂತೆ ಆ ಪತ್ರದ ಮೊದಲ ಸಾಲು ನಾನು ಕ್ಷೇಮ, ನೀನು ಕ್ಷೇಮ?

ಪತ್ರದ ಕಟ್ಟು ಹಿಡಿದು ಬರುವ ಪೊಸ್ಟಮನ್‌ ನ ಬರುವಿಕೆಯ ಹೊತ್ತನ್ನು ವರ್ಷದಂತೆ ಬಾವಿಸಿ ಚಡಪಡಿಸಿದ ದಿನಗಳನ್ನು ಯಾರು ಮರೆಯುತ್ತಾರೆ. ಓಣಿಯ ತುದಿಯಿಂದ ಹಿಡಿದು ಕೊನೆ ತಿರುವು ದಾಟುವವರೆಗೂ ಅವನ ಕೈಯಲ್ಲಿ ಇರುವ ಗೊಂಚಲಿನಲಿ ನನ್ನದೊಂದು ಪತ್ರ ಇರಬಾರದೇ..?ಯಾವದಾದರು ಮನಸ್ಸಿನ ತುಡಿತದ ದನಿ ನಾನಾಗಬಾರದೆ..? ಆ ನಿರೀಕ್ಷೆಯ ಹಾದಿಯಲಿ ಬಾಗಿಲು ತೆರೆದು ಕಾತರಿಸಿದ ಸಡಗರ ನೆನಪಾದರೆ ಸಾಕು ಸಮ್ಮೋಹನ ಗೊಂಡವರಂತೆ ಪುಳಕಿತನಾಗಿ ಹನಿಯಾಗುತ್ತೇನೆ. ಆ ಒಲೆಯ ಆಳದ ಕಡಲಲ್ಲಿ ಮುಳುಗಿ ದಡ ಸೇರಿದವರು ನಾವು.

ಯಾರಿಗೂ ಒಪನ್‌ ಆಗಿ ಕಾಣಬಾರದೆಂದು ಅಂತರ್ದೇಶಿ ಪತ್ರಗಳಲ್ಲಿ ಉಗಳು ಹಾಕಿ ಹಾಕಿ ಅಂಟಿಸಿ ಬರೆದ ಪ್ರೇಮ ಪತ್ರಗಳಿಗೆ ಈಗ ವಯಸ್ಸಾಗಿರಬಹುದು. ಆ ಯೌವನದ ದಿನಗಳ ಮೆಲುಕು ಹಾಕುತ್ತ ತುಸು ಭಾರವಾದ ಹೃದಯದಲ್ಲಿ ಸ್ವಲ್ಪ ನೆನಪು ಕಾಡುತಿರಬಹುದು. ಆ ಮಾಸಿದ ಅಕ್ಷರಗಳ ಪೊಸ್ಟ ಕಾರ್ಡ ಕಂಡಾಗಲೆಲ್ಲಾ ನನಗೆ ನಮ್ಮ ಊರಿನ ಪೊಸ್ಟಮನ್‌ ನೆನಪಾಗುತ್ತಾನೆ. ಶಿಸ್ತಿನ ಸಿಪಾಯಿಯಂತೆ ಹೆಗಲಿಗೊಂದು ಖಾದಿ ಬ್ಯಾಗ ಹಾಕಿಕೊಂಡು, ಊರಿನ ಗುಡ್ಡದ ವಾರಿಯ ತುಂಬ ಉಸ್ಸೆಂದು ದಣಿವಾರಿಸಿಕೊಳ್ಳುತ್ತ ಅಲೆಯುತ್ತಿದ್ದ ಅವನ ಗಟ್ಟಿ ದನಿ ಈಗಲೂ ಕಿವಿಯಲ್ಲಿದೆ. ಅವನ ಹೆಸರು ಪೂರ್ತಿ ಗೊತ್ತಿಲ್ಲ, ಆದರೆ ನಾವೆಲ್ಲಾ ಕರೆಯುತ್ತಿದ್ದಿದ್ದು ಬುಟ್ಟು ಅಂತ. ಅವನಿಗೆ ತುಂಬಾ ವಯಸ್ಸಾಗಿತ್ತು. ಆದರೆ ಉತ್ಸಾಹ ಮುಗಿದಿರಲಿಲ್ಲ. ಕಳೆತುಂಬಿದ ಮುಖದಲ್ಲಿ ಅವರಿವರ ಪತ್ರ ಮುಟ್ಟಿಸಿದ ಖುಷಿ ತುಂಬಿ ತುಳುಕುತ್ತಿತ್ತು. ಬುಟ್ಟು ಓಣಿಯಲ್ಲಿ ಬಂದರೆ ಎಲ್ಲರಿಗೂ ರೋಮಾಂಚನ. ಅವನು ಪತ್ರವನ್ನು ಸುಮ್ಮನೆ ನೀಡುತ್ತಿರಲಿಲ್ಲ. ಪತ್ರ ಬಂದವರ ಹೆಸರನ್ನು ಅವರ ಮನೆಯ ಬಾಗಿಲಿನ ಮುಂದೆ ನಿಂತು ಜೋರಾಗಿ ಕೂಗಿ ಅಡ್ರೇಸ್‌ ಸರಿ ಇರುವುದನ್ನು ಖಚಿತ ಪಡಿಸಿಕೊಂಡು ನೀಡುತ್ತಿದ್ದ. ಅವನ ಬಾಯಲ್ಲಿ ಹೆಸರು ಬರುವದೇ ಒಂದು ಖುಷಿ. ಅವನ ಓಣಿಯಲ್ಲಿ ಹೆಜ್ಜೆ ಇಟ್ಟರೆ ಸಾಕು ನಮ್ಮ ಹೆಸರು ಕೂಗುತ್ತಾನಾ, ಪಿಕಿ ಪಿಕಿ ಕಣ್ಣು ಬಿಟ್ಟು ಅವನ ದನಿಯ ಮೋಹದಲ್ಲಿ ಮುಳುಗಿ ಹೋಗುತ್ತಿದ್ದೆವು. ಒಂದು ವೇಳೆ ಅವನ ಬಾಯಲ್ಲಿ ನಮ್ಮ ಹೆಸರು ಬಂದರೆ ಆ ಹಬ್ಬದ ಸಡಗರ ಏನು ಹೇಳಲಿ. ಅವಸರದಿಂದ ಪತ್ರ ಇಸಿದುಕೊಂಡು ಓದುವ ಕೂತುಹಲ. ಆ ಪತ್ರದ ವ್ಯಾಮೋಹ ಹಾಗೇ ಇತ್ತು. ನಮ್ಮ ಕನಸುಗಳಿಗೆಲ್ಲಾ ರೆಕ್ಕೆ ಮೂಡಿಸಿ ಆಕಾಶದೆತ್ತರ ಹಾರಿಸಿ ದಣಿಸಿದ ಸಂಗತಿ ಇರಬಹುದು. ಈಗಲೂ ಸುಳಿದಾಡಿದಂತೆ ಬಾಸವಾಗುವ ಬುಟ್ಟು. ಆತನ ಉದ್ದನೇಯ ತೋಳು ಅಂಗಿ. ನೆಲವ ಸಾರಿಸಿದಂತೆ ಎಳೆಯುತ್ತಿದ್ದ ಪಾದರಕ್ಷೆ, ಹೆಗಲ ಜೋತುಬಿದ್ದ ಪತ್ತ ತುಂಬಿದ ಚೀಲ. ಮನೆ ಮನೆ ಮುಂದೆ ಚೀರುತ್ತಿದ್ದ ಗಟ್ಟಿ ಧ್ವನಿ, ಇನ್ನೂ ಅವನು ಪಕ್ಕದ ಓಣಿಯಲ್ಲಿ ಪತ್ರ ಹಂಚುತಿರಬಹುದೆಂದು ಭಾಸವಾಗುತ್ತದೆ.

ʼತಿರಸ್ಕೃತಗೊಂಡ ಕಥೆʼ ಆಗಾಗ ಈ ಒಕ್ಕಣಿಕೆ ಹೊತ್ತು ತರುತ್ತಿದ್ದ ಪತ್ರಗಳು ಬಂದಾಗ ಮೂಡಿದ ನಿರಾಶೆ ಹೇಗೆ ಹೇಳಿಕೊಳ್ಳಲಿ. ಪುಟದ ಒಂದೇ ಮಗ್ಗಲಲ್ಲಿ ರಾತ್ರಿಯಿಡಿ ಕುಳಿತು ಬರೆದು. ಪತ್ರಿಕೆಯ ವಿಳಾಸವನ್ನು ಹತ್ತಾರು ಬಾರಿ ಪರೀಕ್ಷಿಸಿ. ಐದೋ ಹತ್ತು ರುಪಾಯಿಯ ಅಂಚೆ ಚೀಟಿ ಅಂಟಿಸಿ, ಪಾಕೇಟ್‌ ಹರಿಯದಂತೆ ಐದಾರು ಪುಟಗಳ ಕಥೆ ಬರೆದು, ರವಿವಾರದ ವಿಶೇಷ ಪುಟವನ್ನು ತಿರುವಿ, ತಿರುವಿ ಹಾಕುತ್ತ ಕಥೆಯ ಪ್ರಕಟಣೆಯ ನಿರೀಕ್ಷೆಯಲಿ ಕಾದು ಕುಳಿತವನಿಗೆ ತಿಂಗಳಾದ ನಂತರ ಬರುತ್ತಿದ್ದ ಅರ್ಧ ಪುಟದ ಈ ಪತ್ರ ಓದಿ ಆ ಕಥೆಯಂತೆ ನಾನು ಸಹ ಮಡಚಿ ಹೋಗುತ್ತಿದ್ದೆ. ಒಮ್ಮೆ ಈ ಅರ್ಧ ಬಂದ ಪತ್ರ ನಮ್ಮ ಅವ್ವನ ಕೈಯಲ್ಲಿ ಸಿಕ್ಕು ಆಕೆ ಯಾವುದೋ ದೂರದ ಸಂಬಂಧಿ ಸತ್ತಿರಬಹುದೆಂದು ಭಾವಿಸಿ. ಅವರಿವರ ಕೈಯಲ್ಲಿ ಪತ್ರ ಓದಿಸಿ ನಾ ಮನೆ ತಲುಪುದರೊಳಗೆ ಕುರುಕ್ಷೇತ್ರದ ಕಹಳೆ ಊದಿಬಿಟ್ಟಿದ್ದಳು. ಯಾರದು ಆ ಕಥೆ..? ಹಂಗ್ಯಾಕ ಬರದಾರು..? ನಾನು ಯಾರೋ ಸತ್ತರೆಂದು ಅಂಜಿ ಹೇದರಿ ಹೋಗೇನಿ. ನಿನ್ನ ಕತಿ ಮನಿ ಹಾಳಾಗ, ನನ್ನ ಕತೆ ಬರೆಯುವ ಚಾಳಿಗೊಂದಿಷ್ಟು ಶಾಪ ಹಾಕಿದಳು. ಈ ಕತೆ ಬರೆಯುವ ನನಗೆ ಪತ್ರಿಕೆಯಿಂದ ಬರುತ್ತಿದ್ದ ಅರ್ಧಂಬರ್ಧ ಪತ್ರಗಳ ಸುಳಿಯೊಳಗ ಸಿಕ್ಕು ಆಗಾಗ ಜೋಕರ್‌ ತರಹ ಆಗಿದ್ದು ನನಗಿನ್ನು ನೆನಪಿದೆ.

ಆ ದಿನಗಳು ಎಷ್ಟು ಮಜಬೂತವಾಗಿದ್ದವು. ಯಾವ ಆತಂಕಗಳು ಕಾಡುತ್ತಿರಲಿಲ್ಲ. ಊರಿಗೆ ಹೋದವರು ಅವರು ಊರ ಮುಟ್ಟಿದ ಸುದ್ದಿ ಗೊತ್ತಾಗುತ್ತಿದ್ದಿದ್ದು ಮೂರು ದಿನದ ನಂತರ ಅವರ ಪತ್ರ ಬಂದ ಮೇಲೆ. ಕಾಲೇಜಿಗೆ ಹೋಗುತ್ತಿದ್ದ ನಾವು ಸಹ ತಲುಪಿದ ಮೇಲೆ ಮನೆಗೆ ತಪ್ಪದೆ ಪತ್ರ ಬರೆಯುತ್ತಿದ್ದೇವು. ಯಾವ ಬಸ್ಸು ಹತ್ತಿದೇವು ಯಾವಾಗ ತಲುಪಿದೆವು, ಹೇಗೆ ಇರುವೇವು ಹೀಗೆ. ಬದುಕಿನ ಪ್ರತಿ ಪಯಣ ಪತ್ರದಲ್ಲಿ ದಾಖಲಾಗುತ್ತಿತ್ತು. ಅಷ್ಟೆ ಏಕೇ ನಮ್ಮ ಕಾಲೇಜು ಫೀ, ದಿನದ ಖರ್ಚು, ಸಹ ಅಪ್ಪ ಮರಿಯದೆ ಕಳುಹಿಸುವ ಮನಿಯಾರ್ಡರ ಮೇಲೆ ಅವಲಂಬಿತವಾಗಿತ್ತು. ನನಗೆ ಇಂದಿಗೂ ಆಶ್ಚರ್ಯ. ಅಷ್ಟೊಂದು ದೊಡ್ಡ ಕಾಲೇಜಿನಲ್ಲಿ ನಮ್ಮನೆಲ್ಲಾ ಹುಡುಕಿ ಹುಡುಕಿ ಹಣ ಹಂಚುತ್ತಿದ್ದ ಆ ಪೊಸ್ಟಮನ್‌ ನೆನೆದರೆ ಮನಸ್ಸು ಅರಳುತ್ತದೆ. ಯಾವ ಆತ್ಮವಿಶ್ವಾಸ ನಮ್ಮನೆಲ್ಲಾ ಕಾಯುತ್ತಿತ್ತೊ ಗೊತ್ತಿಲ್ಲ. ಹಣ ಖಾಲಿಯಾದಾಗ ತೀಡಿ ತೀಡಿ ಬರೆಯುತ್ತಿದ್ದ ಪತ್ರದ ಕೊನೆಯ ಸಾಲುಗಳು ನನಗೆ ರೊಕ್ಕದ ಅವಶ್ಯಕತೆ ಇದ್ದು ಮರಿಯದೆ ಮನಿಯಾರ್ಡರ ಮಾಡುವುದು ಇಂತಿ ನಿಮ್ಮ….. ಹಾಗೇ ಬೇಡಿಕೊಳ್ಳುತ್ತಿದ್ದ ಕ್ಷಣಗಳು ಸುಳಿದಾಡುತಿವೆ.

ಈ ಪತ್ರ ಬರೆಯವದಕ್ಕಿಂತ ಪತ್ರದ ದಾರಿ ಕಾಯುವದರಲ್ಲಿ ತುಂಬಾ ಆನಂದವಿತ್ತು. ಅಲ್ಲಲ್ಲಿ ಎಡವಿಬಿದ್ದ ಬದುಕಿನಲ್ಲಿ ಕಳೆದೋದ ಗೆಳೆಯರು ಬರೆಯುತ್ತಿದ್ದ ಪತ್ರದ ಗಂಟು ಇನ್ನೂ ಹಾಗೇ ಇದೆ. ಅಟೋಗ್ರಾಪ್‌ ತುಂಬಿದ ಅಡ್ರೇಸ್‌ ಗಳ ನಡುವೆ ನಮಗೆ ಮರೆಯಲಾರದ ಕೆಲವೊಂದು ಅಡ್ರೇಸ್ ಗಳಿರುತ್ತವೆ. ಎಂದಿಗೂ ಆ ವಿಳಾಸಗಳು ನಮ್ಮ ಸ್ಮೃತಿಪಟಲದಿಂದ ಅಳಕಲಾರವು. ಪ್ರತಿ ಪತ್ರದ ಆರಂಭ ನಮ್ಮ ಉಭಯ ಕುಶಲೋಪರಿಯಾಗಿರುತ್ತದೆ. ಆಗ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇದ್ದ ಪ್ರಬಲ ಮಾಧ್ಯಮ ಇದಾಗಿತ್ತು. ಕೊನೆಯ ಸಾಲು ಮರಳಿ ಪತ್ರ ಬರೆಯುವುದನ್ನು ಮರೆಯಬೇಡ. ಈ ಕೊನೆಯ ಸಾಲು ನಮ್ಮ ಮನಸ್ಸನ್ನು ಹಿಂಡಿ ಕರಗಿಸಿದ್ದು ಸುಳ್ಳಲ್ಲ, ಮರಳಿ ಪತ್ರ ಬರೆದು ಮತ್ತೆ ಆ ಪತ್ರದ ಸಾಲಿನಲ್ಲಿಯೂ ಇದೇ ಕೊನೆಯ ಸಾಲಾಗಿತ್ತು. ಅದು ಋತುಗಳಂತೆ ಮರಳಿ ಮರಳಿ ಹೂ ಎಲೆಯಂತೆ ಚಿಗುರುತ್ತಿತ್ತು. ಆದರೆ ಆ ಋತು ನಿಂತ ಸಮಯ ಯಾವುದೋ ಗೊತ್ತಿಲ್ಲ. ಪತ್ರ ಬರೆಯುವಾಗ ದುಂಡಾಗಿದ್ದ ಅಕ್ಷರಗಳು ಈಗ ಅಂಕು ಡೊಂಕಾಗಿ ಗೀಚಿದಂತೆ ಆಕಾರ ಕಳೆದುಕೊಂಡಿವೆ.

ಪತ್ರ ಹಳೆಯದಾಗಿದೆ ಆದರೆ ನೆನಪು ಮಾತ್ರ ಇನ್ನೂ ಮಾಯವಾಗದೆ ಆ ಪತ್ರದ ಅಳಕದ ಸಾಲಿನಂತೆ ಮಸುಕು ಮಸುಕಾಗಿ ಕಾಡುತಿರುತಿದೆ. ನಮ್ಮ ನಡುವೆ ಮೌನದ ಭಾಷೆಗೆ ಆರ್ಥಕೊಟ್ಟು ಸಂಪರ್ಕ ನೀಡಿದ ಕೆಂಪು ಅಂಚೆ ಡಬ್ಬಿ ಇಂದು ಖಾಲಿ ಖಾಲಿಯಾಗಿದೆ. ಸಂಪರ್ಕಿಸಲು ನೂರಾರು ಆಧುನಿಕ ಸಾಧನಗಳು,ಉಪಕರಣಗಳು ಜೋಡಿಯಾಗಿವೆ. ಆದರೆ ಭಾವನೆಗಳ ಕೈಬರಹ ಮರೆಯಾಗಿ. ಟೈಪಿಸಿದ ಅಕ್ಷರಗಳಲ್ಲಿ ಸ್ಪರ್ಶವಿಲ್ಲದ ನಿರ್ವಾತವಿದೆ. ಕಾಯುವ, ಕಾತರಿಸುವ ಸ್ಪಂದಿಸುವ ಮನಸ್ಸುಗಳಿಲ್ಲದ ಬರಿದಾದ ಬಯಲ ಮರಭೂಮಿಯಿದೆ. ಈಗೀಗ ಪತ್ರ ಬರೆಯಲು ಸ್ಪರ್ಧೆಗಳಿವೆ. ಮುಂದಿನ ಜನಾಂಗ ಪತ್ರಗಳನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಪರೀಕ್ಷೆಯಲ್ಲಿ ಪ್ರಶ್ನೆಗಳಾಗಿ ಒಂದಿಷ್ಟು ಕಾಡಬಹುದು. ಆದರೆ ಪತ್ರ ನೀಡಿದ ತವಕ,ತಲ್ಲಣ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಸಂಬಂಧಗಳ ಕಳೆದುಕೊಂಡಂತೆ. ನಮ್ಮಲ್ಲಿ ಬೆಸೆದ ಭಾವಗಳನ್ನು ನಾಶಮಾಡುತ್ತಿರುವುದು ಕಾಣಬಹುದು. ಇದು ಕೇವಲ ಸಂಪರ್ಕದ ವಿಷಯವಾಗಿರಲಿಲ್ಲ ನಮ್ಮ ಮಾನಸಿಕ, ಶೈಕ್ಷಣಿಕ ಬಾವನಾತ್ಮಕ ಬೆಳವಣಿಗೆಯ ಭಾಗವಾಗಿತ್ತು. ಒಂದೊಂದೆ ಹೆಜ್ಜೆ ಅಳಕಿದಂತೆ. ಸಂಘರ್ಷದ ಒತ್ತಡದಲಿ ಕಳೆದೋಗಿದ್ದೇವೆ.

ಈಗಲೂ ಪತ್ರ ಬರೆಯಬೇಕು, ಅದನ್ನು ಮರಿಯದೆ ಓದುವವರನ್ನು ಹುಡುಕಬೇಕು. ಗೂಗಲ್‌ ಮ್ಯಾಪ್‌ ಬಳಸದೆ ಅಡ್ರೇಸ್ ಹುಡಕಬೇಕು. ಮರಳಿ ಬರುವ ಪತ್ರಕ್ಕಾಗಿ ಜಾತಕ ಪಕ್ಷಿಯಂತೆ ಕಾಯಬೇಕು. ಸುಖದುಃಖದ ಕಥೆಗಳನ್ನು ಮರೆಯದಂತೆ ಅಕ್ಷರಗಳಲ್ಲಿ ದಾಖಲಿಸಬೇಕು. ಕರೆಯದೆ ಹುಡುಕಿಕೊಂಡು ಬರುವ ಅತಿಥಿ ಪೊಸ್ಟಮನ್‌ ನನ್ನು ಗೌರವಿಸಬೇಕು. ಎನೇನೋ ಆಸೆಗಳು ಆ ಒಂದು ತುಂಡು ಕಾಗದದಲ್ಲಿ ಜಗತ್ತನ್ನೆ ಗೆದ್ದ ಸಂಭ್ರಮ. ಮತ್ತೆ ತಪ್ಪದೆ ಪತ್ರ ಬರೆಯುವೆ ನಿಮ್ಮ ಕುಶಲೋಪರಿ ವಿಚಾರಿಸಿ. ಕನಸಿನ ಲೋಕದಲ್ಲಿ ವಾಸ್ತವದ ಬದುಕು ನೀಡಿದ ಸಣ್ಣ ಖುಷಿ ಹಂಚಿಕೊಳ್ಳುವೆ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು