ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಫ್ರೀ ನೋಟ್‌ಬುಕ್ – ಸಚಿವ ಮಧು ಬಂಗಾರಪ್ಪರಾಜಕರಣಿಗಳ ಖರ್ಚುಗಳಿಗೆ ಹಣವಿದೆ, ನಮಗ್ಯಾಕಿಲ್ಲ – ಧರಣಿ ಮುಂದುವರಿಸಿದ ಆಶಾ ಕಾರ್ಯಕರ್ತೆಯರುಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್ಬಯಲು ಸಂತೆಯ ಮೌನ – 4: ನಾನು ಕ್ಷೇಮ, ನೀನು ಕ್ಷೇಮ?ಯುವಜನ ರಾಜಕಾರಣದ ಚರ್ಚೆಗೆ ಮಂಗಳೂರಿನಲ್ಲಿ ‘ಜನನುಡಿ–2026’ ವೇದಿಕೆ; ನ.28ರಿಂದ ಎರಡು ದಿನಗಳ ಸಮಾವೇಶಏಕಸ್ವಾಮ್ಯದಿಂದ ಉದ್ಯೋಗ ಹೆಚ್ಚಾಗುವುದಿಲ್ಲ, ಬೆಲೆ ಹೆಚ್ಚಳವಾಗುತ್ತದೆ: ಮೋದಿಯನ್ನು ಗುರಿಯಾಗಿಸಿಕೊಂಡು ಅದಾನಿಯನ್ನು ಟೀಕಿಸಿದ ರಾಹುಲ್‌ ಗಾಂಧಿಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಕುಟುಂಬಸ್ಥರು; ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲುಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಸಾವರ್ಕರ್ ಉಲ್ಲೇಖ: ಕಾನೂನು ಕ್ರಮಕ್ಕೆ ಮುಂದಾದ ಸತ್ಯಕಿ ಸಾವರ್ಕರ್ಹಿರಿಯೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಒಟ್ಟಾಗಿ ಸೋಲಿಸುವುದೇ ನಮ್ಮ ಗುರಿ: ಕುಮಾರಸ್ವಾಮಿರೋಹಿಂಗ್ಯಾ ನರಮೇಧ: ಮ್ಯಾನ್ಮಾರ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪರಿಹಾರಕ್ಕೂ ಆದೇಶಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ: ಮಲ್ಲಿಕಾರ್ಜುನ ಖರ್ಗೆ ಟೀಕೆರದ್ದಾದ ನೀಟ್ ಪರೀಕ್ಷೆಯ ಮೊಬೈಲ್ ಆರೋಪ: ಹಾವೇರಿ ವಿದ್ಯಾರ್ಥಿನಿಗೆ ಹೈಕೋರ್ಟ್‌ನಿಂದ ನ್ಯಾಯ, ವೈದ್ಯಕೀಯ ಸೀಟು ಭದ್ರPF ನಿಯಮ ಬದಲಾವಣೆ 2026: 12 ತಿಂಗಳ ಕಾಯುವಿಕೆ ಇನ್ನು 2 ತಿಂಗಳುಕಾಂಗ್ರೆಸ್‌ ಶಾಸಕರಿಗೆ ಹುಚ್ಚು ನಾಯಿ ಕಚ್ಚಿದೆ – ಸ್ವಪಕ್ಷ ನಾಯಕರ ವಿರುದ್ದವೇ ರೇವಂತ್‌ ರೆಡ್ಡಿ ಗರಂಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಪಾಲು ನಿರಾಕರಿಸಿದ್ದಕ್ಕೆ ಅಜ್ಜಿಯ ಕೊಲೆ: 20 ವರ್ಷದ ಮೊಮ್ಮಗನ ಬಂಧನಪರಮಾಣು ಯುದ್ಧಕ್ಕೆ ದೊಡ್ಡ ಬ್ರೇಕ್‌ – ಮಹತ್ವದ ನಿರ್ಧಾರಕ್ಕೆ ಟ್ರಂಪ್, ಜಿನ್ ಪಿಂಗ್ ,ಪುಟಿನ್ ಸಹಿಬೆಂಗಳೂರು ಟೆಕ್ ಸಮಿಟ್‌ 2026: ಕರ್ನಾಟಕದ ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ಗಳಲ್ಲಿ ₹1,050 ಕೋಟಿ ಹೂಡಿಕೆ ಘೋಷಣೆಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆಬಸವ ಮಂಟಪ ಪುಸ್ತಕವನ್ನು ನಿಷೇಧಿಸಿದ ರಾಜ್ಯ ಸರ್ಕಾರ: ಲೇಖಕ ರವಿ ಹಂಜ್‌, ಪ್ರಕಾಶಕ ವಿಶ್ವೇಶ್ವರ ಭಟ್‌ ವಿರುದ್ಧ ಕಾನೂನು ಕ್ರಮಕ್ಕೆ ಸಂಪುಟ ನಿರ್ಧಾರಹೊಸ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಕಡ್ಡಾಯವಲ್ಲ; ಪಿಯುಸಿ ಪ್ರಮಾಣಪತ್ರದ ಅವಧಿ ಪರಿಷ್ಕರಣೆ

ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಫ್ರೀ ನೋಟ್‌ಬುಕ್ – ಸಚಿವ ಮಧು ಬಂಗಾರಪ್ಪ

ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಫ್ರೀ ನೋಟ್‌ಬುಕ್ – ಸಚಿವ ಮಧು ಬಂಗಾರಪ್ಪ

ರಾಯಚೂರು : ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ (school) ಎಲ್‌ಜಿಯಿಂದ 12ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ (students) ಉಚಿತವಾಗಿ ನೋಟ್‌ಬುಕ್‌ ವಿತರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.

ಎಲ್‌ಕೆಜಿಯಿಂದ 12ನೇ ತರಗತಿವರೆಗೂ ನೋಟ್‌ಬುಕ್ ಫ್ರೀ!

ನಗರದ ಕೃಷಿ ವಿಶ್ವವಿದ್ಯಾಲಯದ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಗುಣಾತ್ಮಕ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡಿದ್ದ ‘ಮಿಷನ್ 40 + ಸಂಕಲ್ಪ 2.0’ ವಿಭಾಗಮಟ್ಟದ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಜಿಯಿಂದ 12ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತವಾಗಿ ನೋಟ್‌ಬುಕ್‌ ವಿತರಿಸಲು ಸರ್ಕಾರ ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬುದನ್ನು ಪೋಷಕರೇ ಆಯ್ಕೆ ಮಾಡಿ!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮುಂದಿನ ಜೂನ್‌ನಿಂದ ಕನ್ನಡದ ಜತೆಗೆ ಆಂಗ್ಲ ಮಾಧ್ಯಮವನ್ನೂ (ದ್ವಿಭಾಷಾ ಮಾಧ್ಯಮ) ಜಾರಿಗೆ ತರಲಾಗುವುದು. ಆಂಗ್ಲ ಮಾಧ್ಯಮ ಕಡ್ಡಾಯವಲ್ಲ. ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬುದನ್ನು ಪೋಷಕರೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಕನ್ನಡ ಭಾಷೆ ಕಡ್ಡಾಯವಾಗಿರಲಿದೆ. ಈಗಾಗಲೇ 18ರಿಂದ 19 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದರು.

ರಾಜ್ಯದಲ್ಲಿ 1,300ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಎಡಿಬಿ ನೆರವಿನಡಿ 500, ಕಲ್ಯಾಣ ಕರ್ನಾಟಕದ ಅಕ್ಷರ ಅವಿಷ್ಕಾರ ನಿಧಿಯಡಿ 200, ಅಲ್ಪಸಂಖ್ಯಾತರ ಇಲಾಖೆಯಿಂದ 200 ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ಒದಗಿಸುವ ಉದ್ದೇಶ ಹೊಂದಲಾಗಿದೆ. ಜೂನ್ 1ರಿಂದ ಎಲ್ಲ ಕೆಪಿಎಸ್ ಶಾಲೆಗಳ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ 5ರಿಂದ 7 ಕಿ.ಮೀ. ವ್ಯಾಪ್ತಿಯ ಮಾರ್ಗಗಳ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

36 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ!

ರಾಜ್ಯದಲ್ಲಿ 17 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು. ಅನುದಾನಿತ ಶಾಲೆಗಳಿಗೆ 5,500ರಿಂದ 6 ಸಾವಿರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಪಿಯುಸಿ ಸೇರಿದಂತೆ ಒಟ್ಟು 36 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು