ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕಾರ್ಯದರ್ಶಿ ಹುದ್ದೆ | ಸಿಎಂ ಕಚೇರಿಯಿಂದ ಕರೆ ಬಂದ ನಂತರ ನಿರ್ಧರಿಸುವೆ: ತನ್ವೀರ್‌ ಸೇಠ್ದೀಪಾವಳಿ ವೇಳೆ ಪಟಾಕಿ ಸಿಡಿಸಿದ ಪ್ರಕರಣ: ಪೊಲೀಸರ ವಿರುದ್ಧ MIT ವಿದ್ಯಾರ್ಥಿಗಳಿಂದ ಸಿಎಂಗೆ ದೂರುರವಿ ಹಂಜ್ ಬಂಧನ ಸ್ವಾಗತಾರ್ಹ; ಆತನ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ: ಟಿ.ಎ. ನಾರಾಯಣ ಗೌಡ ಆಗ್ರಹಡಾರ್ಕ್ ವೆಬ್‌ನಲ್ಲಿ ಅಗ್ನಿವೀರ್ ದತ್ತಾಂಶ ಮಾರಾಟಕ್ಕೆ ಯತ್ನ: 14 ವರ್ಷದ ಬಾಲಕನನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರುಬಸವ ಮಂಟಪ ಕೃತಿ ವಿವಾದ: ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಆರ್‌ಎಫ್ ಅಧಿಕಾರಿ –  ಅರಣ್ಯಾಧಿಕಾರಿ ವಿಶ್ವನಾಥ್ ಲೋಕಾ ಬಲೆಗೆಕಿವೀಸ್‌ ವಿರುದ್ಧ ಕನ್ನಡಿಗ ಕೆ.ಎಲ್‌ ರಾಹುಲ್‌ ಅಬ್ಬರ, ಅಮೋಘ ಶತಕ – ಐತಿಹಾಸಿಕ ದಾಖಲೆಇ-ಕೆವೈಸಿ ಯಶಸ್ವಿಯಾದರೂ ‘ನಿಧನ’ ಎಂದು ತೋರಿಸಿದ ತಂತ್ರಾಂಶ – ಗೃಹಲಕ್ಷ್ಮಿ ಯೋಜನೆಯ ಮಹಾಲೋಪಡಿ.1ರೊಳಗೆ ರೈತರ ಖಾತೆಗೆ 5,000 ರೂ. ಬರ ಪರಿಹಾರ – ಡಾ. ಜಿ. ಪರಮೇಶ್ವರ್ಹೈದರಾಬಾದ್‌ ಕಾಂಗ್ರೆಸ್ ಖಾತೆ ನಿರ್ಬಂಧ ಮೆಟಾ ಕಚೇರಿ – ಧ್ವಂಸಗೊಳಿಸಿದ ಕಾರ್ಯಕರ್ತರುಹೊಸ ಪಾಸ್‌ಪೋರ್ಟ್‌ಗಾಗಿ ಶೇಖ್‌ ಹಸೀನಾ ಮತ್ತೊಮ್ಮೆ ಮನವಿ; ಬಾಂಗ್ಲಾದೇಶ ಸರ್ಕಾರಕ್ಕೆ ತುರ್ತು ಪತ್ರಐದನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ: 15 ಸಾವಿರ ರೂ. ಗೌರವಧನಕ್ಕೆ ಲಿಖಿತ ಆದೇಶಕ್ಕೆ ಪಟ್ಟುಬಿಜೆಪಿ ಶಾಸಕರ ನಡೆಗೆ ವಿಜಯೇಂದ್ರ ಗರಂ: ಸಿಎಂ ಔತಣಕೂಟದಲ್ಲಿ ಭಾಗವಹಿಸಿದ್ದಕ್ಕೆ ಆಕ್ಷೇಪಕ್ಷೇತ್ರ ಪುನರ್ವಿಂಗಡಣೆಗೆ ಕಾಂಗ್ರೆಸ್ ನಾಲ್ಕು ಅಂಶಗಳ ಸೂತ್ರ; 543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿ, 25 ವರ್ಷ ಬದಲಾವಣೆಗೆ ವಿರಾಮ!ನನಗೂ ಮೊಹಮ್ಮದ್‌ ಸಿರಾಜ್‌ ಆಟ ಇಷ್ಟ, ಆದರೆ ನಮ್ಮ ಇಷ್ಟಕಷ್ಟಗಳಿಗೆ ಇಲ್ಲಿ ಬೆಲೆಯಿಲ್ಲ: ಕಪಿಲ್‌ ದೇವ್ಮಣಿಪುರದಲ್ಲಿ ಕಳ್ಳಭಟ್ಟಿ ದುರಂತ: 15 ಮಂದಿ ಸಾವು, 150ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು; ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕವಿವಾದಾತ್ಮಕ ಭಾಷಣ : ಪ್ರತಾಪ್ ಸಿಂಹಗೆ ಹೈಕೋರ್ಟ್‌ನಲ್ಲಿ ಹಿನ್ನಡೆ; ಕ್ರಿಮಿನಲ್ ಪ್ರಕರಣ ರದ್ದತಿಗೆ ಅರ್ಜಿ ತಿರಸ್ಕಾರಕಾವೇರಿ ವಿವಾದ: ತಮಿಳುನಾಡಿನ ಹೆಚ್ಚುವರಿ ನೀರಿನ ಬೇಡಿಕೆಗೆ ಸುಪ್ರೀಂ ಕೋರ್ಟ್ ತಡೆAPEC ವಿಚಾರದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ವಾಗ್ದಾಳಿ; ಭಾರತದ ಸದಸ್ಯತ್ವದ ಕಥೆ ಏನಾಯ್ತು?ಬಸವಣ್ಣನವರಿಗೆ ಅವಮಾನ ಮಾಡಿದರೇನಂತೆ; ಸೂರ್ಯನತ್ತ ಮುಖಮಾಡಿ ಉಗಿದಂತೆ

ರವಿ ಹಂಜ್ ಬಂಧನ ಸ್ವಾಗತಾರ್ಹ; ಆತನ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ: ಟಿ.ಎ. ನಾರಾಯಣ ಗೌಡ ಆಗ್ರಹ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ರವಿ ಹಂಜ್ ಬಂಧನ ಸ್ವಾಗತಾರ್ಹ; ಆತನ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ: ಟಿ.ಎ. ನಾರಾಯಣ ಗೌಡ ಆಗ್ರಹ

ಬೆಂಗಳೂರು: ಕರ್ನಾಟಕ ಕಂಡ ಮಹಾ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ ಭಕ್ತಿ ಭಂಡಾರಿ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ಬರಹಗಾರ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (KRV) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರವಿ ಹಂಜ್ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯವಾಗಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರವಿ ಹಂಜ್ ಅವರಂತಹವರು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದು, ನೆಮ್ಮದಿಯ ನಾಡಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ನಾರಾಯಣ ಗೌಡ ಕಿಡಿಕಾರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕರ್ನಾಟಕದ ಮಹಾಚೇತನಗಳಿಗೆ ಮಸಿ ಬಳಿಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಡೀ ಕನ್ನಡ ಸಮುದಾಯಕ್ಕೆ ನೈತಿಕ ನಡಾವಳಿಯ ಸೂತ್ರವನ್ನು ರೂಪಿಸಿಕೊಟ್ಟು, ಜಗತ್ತಿಗೆ ವಿಶ್ವ ಮಾನವತೆಯ ತತ್ವವನ್ನು ಸಾರಿದ ಬಸವಣ್ಣನವರನ್ನು ನಿಂದಿಸುವುದು ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನಕಾರಿಯಾಗಿ ಕರೆಯುವುದು ಆತನ ಹೀನಾಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸವಣ್ಣನವರು ನಿಸ್ಸಂಶಯವಾಗಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದು, ಅವರ ಸಾಮಾಜಿಕ ಕ್ರಾಂತಿ ನಮಗೆ ಸ್ಫೂರ್ತಿಯಾಗಿದೆ. ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರನ್ನು ದ್ವೇಷಿಸುವ ಜಾತಿವಾದಿಗಳು 12ನೇ ಶತಮಾನದಲ್ಲೂ ಇದ್ದರು, ಈಗಲೂ ಇದ್ದಾರೆ. ಇಂತಹವರ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವವರೂ ಸಹ ಸಮಾಜದ್ರೋಹಿಗಳೇ ಆಗಿದ್ದಾರೆ ಎಂದು ನಾರಾಯಣ ಗೌಡ ಟೀಕಿಸಿದ್ದಾರೆ.

ಪೊಲೀಸರು ಯಾವುದೇ ಮುಲಾಜಿಲ್ಲದೆ ರವಿ ಹಂಜ್ ವಿರುದ್ಧ ಕಠಿಣ ಕ್ರಮ ಜರುಗಿಸಿ ಜೈಲಿಗೆ ಕಳುಹಿಸಬೇಕು. ಅಲ್ಲದೆ, ಆತ ಬರೆದಿರುವ ವಿವಾದಾತ್ಮಕ ಪುಸ್ತಕವನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಆತನ ಬೆನ್ನಿಗೆ ನಿಂತು ಕುಮ್ಮಕ್ಕು ನೀಡಿದವರನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಟಿ.ಎ. ನಾರಾಯಣ ಗೌಡ ಒತ್ತಾಯಿಸಿದ್ದಾರೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು