Home ಬ್ರೇಕಿಂಗ್ ಸುದ್ದಿ ಹಾಸನ ಅಪಾಯದಲ್ಲಿರುವ ನಗರದ ಕಟ್ಟಡದ ಮೇಲಿರುವ ಬೃಹತ್ ಕಟೌಟ್ ಬ್ಯಾನರ್

ಅಪಾಯದಲ್ಲಿರುವ ನಗರದ ಕಟ್ಟಡದ ಮೇಲಿರುವ ಬೃಹತ್ ಕಟೌಟ್ ಬ್ಯಾನರ್

filter: 0; fileterIntensity: 0.000000; filterMask: 0; captureOrientation: 0; shaking: 0.037997; highlight: 0; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 350.0;aec_lux_index: 0;albedo: ;confidence: ;motionLevel: -1;weatherinfo: null;temperature: 34;zeissColor: bright;

ಹಾಸನ : ಕಳೆದ 4 ದಿನಗಳ ಹಿಂದೆ ಸುರಿದ ಬಾರಿ ಗಾಳಿ ಮಳೆಗೆ ನಗರದ ಸಿಟಿ ಬಸ್ ನಿಲ್ದಾಣ ರಸ್ತೆ, ಶ್ರೀ ಗಣಪತಿ ಪೆಂಡಲ್ ಕಟ್ಟಡ ಮೇಲೆ ಹಾಕಲಾಗಿರುವ ಬೃಹತ್ ಕಬ್ಬಿಣದ ಕಟೌಟ್ ಬ್ಯಾನರ್ ಹರಿದು ನೇತಾಡುತ್ತಿದ್ದು, ಏನಾದರೂ ಅದು ಕೆಳಗೆ ಬಿದ್ದರೇ ದೊಡ್ಡ ಅನಾಹುತವೇ ಸಂಭವಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.ಕಳೆದ ಎರಡು ವಾರಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಗೆ ವಿವಿಧ ಬೃಹತ್ ಕಟ್ಡಡದ ಮೇಲೆ ಹಾಕಲಾಗಿರುವ ಕಬ್ಬಿಣದ ಕಟೌಟ್ ಬ್ಯಾನರ್ ಹರಿದು ಹಾರಿ ಹೋಗಿ ಉಳಿದ ಬ್ಯಾನರ್ ನೇತಾಡುತ್ತಿರುವುದು ಕಂಡು ಬಂದಿದೆ. ಇದೆ ರೀತಿ ಸಾಲಗಾಮ ರಸ್ತೆ ಮಹರಾಜ ಪಾರ್ಕ್, ಸಹ್ಯಾದ್ರಿ ಟ್ಯಾಕಿಸ್ ಪಕ್ಕದಲ್ಲೆ ಇರುವ ಬೃಹತ್ ಕಟ್ಟಡದ ಮೇಲೆ ಹಾಕಲಾಗಿರುವ ಬ್ಯಾನರ್ ಕೂಡ ಹರಿದು ಕೇಳಗೆ ನೇತಾಡುತ್ತಿದ್ದು, ಇದನ್ನ ಕೂಡ ತೆರವು ಮಾಡುವಂತೆ ಕೋರಿದ್ದು, ಅದರಲ್ಲೂ ನಗರದ ಸಿಟಿ ಬಸ್ ನಿಲ್ದಾಣದ ರಸ್ತೆ, ಕಟ್ಟಿನ ಮಾರುಕಟ್ಟೆಗೆ ಹೊಂದಿಕೊಂಡಂತಿರುವ ಪೆಂಡಲ್ ಗಣಪತಿ ಕಟ್ಟಡ ಮೇಲ್ಬಾಗದಲ್ಲಿರುವ ಕಬ್ಬಿಣದ ಬೃಹತ್ ಕಟ್ಟಡಕ್ಕೆ ಹಾಕಲಾಗಿರುವ ದೊಡ್ಡದಾದ ಬ್ಯಾನರ್ ಮಳೆ ಗಾಳಿಗೆ ಹರಿದು ಕೆಳ ಬಾಗದಲ್ಲಿರುವ ಅಂಗಡಿ ಮಳಿಗೆಗಳ ಬಳಿ ನೇತಾಡುತ್ತಿದ್ದರೂ, ಒಂದು ವಾರಗಳೇ ಕಳೆದರೂ ಯಾರು ಕೂಡ ಇತ್ತಕಡೆ ಗಮನ ಹರಿಸಿರುವುದಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಈ ಭಾಗದಲ್ಲಿ ಓಡಾಡುತ್ತಾರೆ. ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತದೆ. ಏನಾದರೂ ಹರಿದ ಬಟ್ಟೆ ಸಂಚರಿಸುವ ವಾಹನಗಳ ಮೇಲೆ ಬಿದ್ದರೇ ದೊಡ್ಡ ಅಪಘಾತವೇ ಸಂಭವಿಸಬಹುದು. ಇನ್ನು ಹರಿದ ಬ್ಯಾನರ್ ಗಾಳಿಗೆ ಹೋಗಿ ವಿದ್ಯುತ್ ಕಂಬದಲ್ಲಿ ಕೂಡ ಸಿಕ್ಕಿಕೊಂಡಿದೆ. ಜಾಹಿರಾತಿಗಾಗಿ ಮಾತ್ರ ಇರುವ ಈ ಬ್ಯಾನರ್ ಹರಿದರೂ ಈ ಬಗ್ಗೆ ಗಮನ ಕೊಡದಿರುವುದು ಒಂದು ವಿಪರ್ಯಾಸವೇ ಸರಿ! ಈ ಬೃಹತ್ ಕಟೌಟ್ ನಿಂದ ಏನಾದರೂ ಸಾರ್ವಜನಿಕರಿಗೆ ಅಪಾಯ ಸಂಭವಿಸಿದರೇ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಮುಂದೆ ದುರ್ಘಟನೆ ಆಗದಂತೆ ಮೊದಲೆ ನಿಗಾವಹಿಸಬೇಕಾಗಿದೆ ಎಂಬುದು ಆಶಯ.

You cannot copy content of this page

Exit mobile version