ಬೇಲೂರು : ತಾಲೂಕಿನ ಐರವಳ್ಳಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಬಾಗಿಲು ತೆಗೆಯದೆ ಪಡಿತರದಾರರಿಗೆ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿ ಮಾಲೀಕರಾದ ಶಾಂತ ಕುಮಾರ್ ವಿತರಿಸಿರುವ ಅಕ್ಕಿ ಸರಿಯಾದ ಸಮಯಕ್ಕೆ ಕೊಡದೆ ವಿಳಂಬ ಮಾಡುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.ಅಕ್ಕಿ ಇದ್ದರೂ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಐರವಳ್ಳಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ತಹಶಿಲ್ದಾರ್ ಎಂ ಮಮತಾ ಸ್ಥಳಕ್ಕೆ ಆಗಮಿಸಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಶಾಂತಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು ಸುತ್ತ ಮುತ್ತಲಿನ ಗ್ರಾಮಸ್ಥರು ತಮ್ಮ ದಾಸ್ತಾನು ಪಡೆಯಲು ತಮ್ಮ ಕೆಲಸ ಕಾರ್ಯ ಬಿಟ್ಟು ಇಲ್ಲಿಗೆ ಬರವೇಕು ಸಾಕಷ್ಟು ದೂರದಿಂದ ಬಂದಾಗ ನೀವು ಅಕ್ಕಿ ಅಥವಾ ರೇಷನ್ ಇಲ್ಲ ಎಂದು ವಾಪಸ್ಸು ಕಳಿಸಿದಾಗ ಅವರ ಸಮಯ, ಕೆಲಸ ಆದಿನ ವ್ಯರ್ಥವಾಗುತ್ತದೆ.ಹಾಗು ನೀವು ಸೊಸೈಟಿ ಬಾಗಿಲು ಸರಿಯಾದ ಸಮಯಕ್ಕೆ ತೆಗೆಯುತ್ತಿಲ್ಲ ಮತ್ತು ಅಕ್ಕಿ ವಿತರಿಸುತ್ತಿಲ್ಲ ಎಂದು ನಮಗೆ ದೂರು ಬಂದಿದ್ದು ವೀಕ್ಷಣೆ ಸಮಯದಲ್ಲಿ ಬೆಳಗ್ಗೆ ೧೦-೩೦ ರಾದರೂ ನೀವು ಇನ್ನು ಬಾಗಿಲು ತೆಗೆದಿಲ್ಲ ನಂತರ ನಿಮಗೆ ನಾವು ಬಂದ ಬಗ್ಗೆ ಮಾಹಿತಿ ತಿಳಿದು ಬಾಗಿಲು ತೆಗೆದಿದ್ದು ನಮ್ಮ ಗಮನಕ್ಕೆ ಬಂದಿದೆ .ಹೀಗೆ ಮಾಡಿದರೆ ನಿಮ್ಮ ಮೇಲೆ ಮೇಲಾಧಿ ಕಾರಿಗಳಿಗೆ ದೂರು ಸಲ್ಲಿಸಿ ನಿಮ್ಮ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕಾಗುತ್ತದೆ.ಹಾಗು ಬಂದವರಿಗೆ ಅಕ್ಕಿ ಆಹಾರ ದಾಸ್ತಾನು ಯಾವಾಗ ಬರುತ್ತದೆ ಎಂದು ಮಾಹಿತಿ ನೀಡಬೇಕು ಗ್ರಾಹಕರ ಜೊತೆ ಸಂಯಮ ದಿಂದ ವರ್ತಿಸಬೇಕು ಮತ್ತೆ ಯಾವುದೆ ರೀತಿಯಲ್ಲಿ ದೂರು ಬರಬರಾದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭ ಆರ್ ಐ ನಟರಾಜ್,ಗ್ರಾಮ ಸಹಾಯಕ ಬಸಪ್ಪ,ಸಂತೋಷ್,ನಾಗರಾಜ್,ಸೇರಿದಂತೆ ಇತರರು ಹಾಜರಿದ್ದರು.