Home ರಾಜ್ಯ ಬೆಳಗಾವಿ ಬೈಕ್ ಗೆ ಟಿಪ್ಪರ್ ಡಿಕ್ಕಿ– ಸವಾರರ ದೇಹ ಛಿದ್ರ ಛಿದ್ರ

ಬೈಕ್ ಗೆ ಟಿಪ್ಪರ್ ಡಿಕ್ಕಿ– ಸವಾರರ ದೇಹ ಛಿದ್ರ ಛಿದ್ರ

ಬೆಳಗಾವಿ : ಮರಳು ಸಾಗಿಸುತ್ತಿದ್ದ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಆಗಸಗ ಗ್ರಾಮದಲ್ಲಿ ನಡೆದಿದೆ.

ಟಿಪ್ಪರ್ ಗುದ್ದಿದ ರಭಸಕ್ಕೆ ಯುವಕರು ಬೈಕ್ ನಿಂದ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್ ನೇರವಾಗಿ ಯುವಕರ ಮೇಲೆ ಹರಿದಿದೆ. ಪರಿಣಾಮ ಯೋಗೀಶ್ ಹಾಗೂ ನಿತೇಶ್ ಅವರ ದೇಹ ಛಿದ್ರ ಛಿದ್ರವಾಗಿದೆ.


ಮೃತ ಯುವಕರನ್ನು ಯೋಗೇಶ್ ನಾವಿ, ನಿತೀಶ್ ತರಳೆ ಎಂದು ಗುರುತಿಸಲಾಗಿದೆ. ಬೆಳಗಾವಿಯಲ್ಲಿನ ಅಗಸಗ ಗ್ರಾಮದ ಬಳಿ ಬೈಕ್ ನಲ್ಲಿ ಯೋಗೀಶ್ ಹಾಗೂ ನಿತೇಶ್ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಏಕಾಏಕಿ ಬೈಕ್ ಗೆ ಗುದ್ದಿ ಮುಂದೆ ಸಾಗಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version