ತೀರ್ಥಹಳ್ಳಿ : ಈಜಲು ಹೋದ ಯುವಕ ನಾಪತ್ತೆ ; ಮುಂದುವರಿದ ಶೋಧ ಕಾರ್ಯ

ಜಾತ್ರೆಯ ವ್ಯಾಪಾರಕ್ಕೆ ಬಂದಿದ್ದ ಬಿಹಾರ ಮೂಲದ ಯುವಕನೊಬ್ಬ ತುಂಗಾನದಿಗೆ ಬಿದ್ದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ನದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆ ಈ ಯುವಕ ನಾಪತ್ತೆಯಾಗಿದ್ದಾನೆ.

ಜನವರಿ 11, 12 ಹಾಗೂ 13 ರ ಮೂರು ದಿನಗಳ ಕಾಲ ಜರುಗುವ ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ ಜಾತ್ರೆಗೆ ನೂರಾರು ಅಂಗಡಿಗಳು ನಾನಾ ಮೂಲೆಗಳಿಂದ ಬಂದಿವೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಎರಡು ದಿನಗಳ ಹಿಂದೆ ಬಂದಿದ್ದ ಬಿಹಾರ ಮೂಲದ ಯುವಕ ನದಿಯಲ್ಲಿ ಈಜುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಯುವಕ ನಾಪತ್ತೆಯಾಗಿರುವ ಜಾಗ ಕೂಡಾ ತೀರಾ ಅಪಾಯಕಾರಿ ಜಾಗವಾಗಿರುವ ಹಿನ್ನೆಲೆಯಲ್ಲಿ ಇಷ್ಟು ಹೊತ್ತಿಗಾಗಲೇ ಆತನ ಜೀವ ಹೋಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳ ಸೇರಿ ದೇಹದ ಶೋಧ ಕಾರ್ಯ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು