Home Uncategorized ಪರೀಕ್ಷೆಗಳಿಗೆ ತಯಾರಾಗುತ್ತಿದ್ದ ಯುವಕ ಹೃದಯಾಘಾತಕ್ಕೆ ಬ*ಲಿ

ಪರೀಕ್ಷೆಗಳಿಗೆ ತಯಾರಾಗುತ್ತಿದ್ದ ಯುವಕ ಹೃದಯಾಘಾತಕ್ಕೆ ಬ*ಲಿ

ಧಾರವಾಡ : ಸ್ಪರ್ಧಾತ್ಮಕ ಪರೀಕ್ಷೆಗಳ(Competitive exam) ತಯಾರಿ ನಡೆಸುತ್ತಿದ್ದ ಯುವಕನೋರ್ವ ಹೃದಯಾಘಾತಕ್ಕೆ (Heart Attack) ಒಳಗಾಗಿ ಪ್ರಾಣ ಕಳೆದುಕೊಂಡಿರುವ  (Tragedy) ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

ಮೃತ ದುರ್ದೈವಿಯನ್ನು ಯಾದಗಿರಿ (Yadgiri) ಜಿಲ್ಲೆಯ ಸುರಪುರ (Surapura) ತಾಲ್ಲೂಕಿನ ಮೂಲದ ಮಾರುತಿ (25) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಧಾರವಾಡದಲ್ಲಿ ಉಳಿದುಕೊಂಡಿದ್ದ ಮಾರುತಿ, ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ.

ನಗರದ ತರಬೇತಿ ಕೇಂದ್ರಗಳ ಹತ್ತಿರದಲ್ಲೇ ರೂಮ್ ಮಾಡಿಕೊಂಡು ವಾಸವಿದ್ದ ಈತನಿಗೆ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ. ಇನ್ನು ಈ ಪ್ರಕರಣ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page

Exit mobile version