Home ಜನ-ಗಣ-ಮನ ಕಲೆ – ಸಾಹಿತ್ಯ ಮಡಿವಂತ ಪ್ರಧಾನಿಯ ಬಗ್ಗೆ

ಮಡಿವಂತ ಪ್ರಧಾನಿಯ ಬಗ್ಗೆ

0

ಬಟ್ರೋಲ್ಟ್ ಬ್ರೆಕ್ಟ್ ಅವರ ಮೂಲ ಬರಹದಲ್ಲಿ, ಕನ್ನಡ ಅನುವಾದ ಶಾ. ಬಾಲೂರಾವ್ ಅವರಿಂದ, ವಿಶ್ವ ಅನುವಾದ ದಿನದ ವಿಶೇಷವಾಗಿ

ಕೇಳಿದ್ದೇನೆ; ಆ ಪ್ರಧಾನಿ ಕುಡಿಯುವುದಿಲ್ಲವಂತೆ
ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು – ಚುಟ್ಟ ಸೇದುವುದಿಲ್ಲವಂತೆ
ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ.
ಮತ್ತೆ ಇದನ್ನೂ ಕೇಳಿದ್ದೇನೆ; ಆ ದೇಶದ ಬಡಜನ
ಹೊಟ್ಟೆಗಿಲ್ಲದೆ ಪಾಡುಪಡುತ್ತಿದ್ದಾರಂತೆ.

ಅದರ ಬದಲು ಹೀಗೆ ಕೇಳುವುದು ಎಷ್ಟು ಮೇಲಾಗಿರುತ್ತಿತ್ತು:
ಪ್ರಧಾನಿ ಕ್ಯಾಬಿನೆಟ್ ಮೀಟಿಂಗ್’ಗಳಲ್ಲೂ ಕುಡಿದು ಕೂತಿರುತ್ತಾನೆ
ತಜ್ಞರಲ್ಲದ ಕೆಲಮಂದಿ ಕಾಯಿದೆ ಕಾನೂನು ಬದಲಾಯಿಸುತ್ತಿರುತ್ತಾರೆ
ಅವನು ಅವರ ಪೈಪಿಂದೇಳುವ ಹೊಗೆಯನ್ನೆ ನೋಡುತ್ತಿರುತ್ತಾನೆ
ಆ ದೇಶದಲ್ಲಿ ಬಡಜನರೇ ಇಲ್ಲ!

You cannot copy content of this page

Exit mobile version