ಉಡುಪಿ: “ದೇಶದ ಐಕ್ಯತೆ ಮತ್ತು ಸಂವಿಧಾನದ ಆಶಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ದ್ವೇಷ ಭಾಷಣದ ವಿರುದ್ಧ ಮಸೂದೆಯನ್ನು ತರಲಾಗಿದೆ. ಈ ಕಾನೂನು ಕೇವಲ ವಿರೋಧ ಪಕ್ಷಗಳಿಗೆ ಮಾತ್ರವಲ್ಲ, ಕಾಂಗ್ರೆಸ್ ನಾಯಕರು ದ್ವೇಷ ಭಾಷಣ ಮಾಡಿದರೂ ಅವರ ಮೇಲೂ ಕ್ರಮ ಜರುಗಿಸಲಾಗುವುದು,” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಟೀಕೆಗಳಿಗೆ ಉತ್ತರಿಸಿದ ಅವರು, ಭವಿಷ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅವರು ಕೂಡ ನಮ್ಮ ವಿರುದ್ಧ ಈ ಕಾನೂನನ್ನು ಬಳಸಬಹುದು. ಜನರು ಒಟ್ಟಿಗೆ ಬಾಳಬೇಕಾದರೆ ಜಾತಿ, ಧರ್ಮ, ಭಾಷೆ ಅಥವಾ ವ್ಯಕ್ತಿತ್ವದ ನಿಂದನೆ ಮಾಡಬಾರದು. ಸಂವಿಧಾನಕ್ಕೆ ಧಕ್ಕೆ ಬಾರದಂತೆ ತಡೆಯುವುದೇ ಈ ಮಸೂದೆಯ ಏಕೈಕ ಉದ್ದೇಶ ಎಂದು ಅವರು ಸಮರ್ಥಿಸಿಕೊಂಡರು.
